ನವೆಂಬರ್ 23 ಮುಂಚಿತವಾಗಿ 33ಕೆ.ವಿ ವಿದ್ಯುತ್ ಮಾರ್ಗ ಚಾಲನೆ

0
18

ಕಲಬುರಗಿ; 110/33/11ಕೆವಿ ಮಾಡಿಯಾಳ ವಿದ್ಯುತ್ ವಿತರಣಾ ಕೇಂದ್ರದ 33/11 ಕೆ.ವಿ ಮಾದನ ಹಿಪ್ಪರರ್ಗಾ ಉಪ-ವಿದ್ಯುತ್‍ಕೇಂದ್ರಕ್ಕೆ ಬರುವ ಹೊಸದಾಗಿ 33ಕೆ.ವಿ ವಿದ್ಯುತ್ ಮಾರ್ಗ ಸುಮಾರು15ಕಿ.ಮಿಗಳಿದ್ದು, ನವೆಂಬರ್ 23 ರಂದು ಅಥವಾ ಮುಂಚಿತವಾಗಿ ಯಾವುದೇ ದಿನದಂದು ಈ ವಿದ್ಯುತ್ ಮಾರ್ಗವನ್ನು ಚಾಲನೆ ಮಾಡಬಹುದು ಎಂದು ಕಾರ್ಯನಿರ್ವಾಹಕ ಅಭಿಯಂತರರು(ವಿ) ನಿರ್ಮಾಣ ಮತ್ತು ನಿರ್ವಹಣೆ ವಿಭಾಗ ಗುವಿಸಕನಿ, ಪ್ರಕಟಣೆಯಲ್ಲಿ ಕೋರಿದ್ದಾರೆ

33ಕೆವಿ ವಿದ್ಯುತ್ ಮಾರ್ಗದ ವಿವರ : 15ಕಿ.ಮಿ ಹೊಸದಾಗಿ ನಿರ್ಮಿಸಿರುವ 33ಕೆವ್ಹಿ ಮಾರ್ಗ ಮಾಡಿಯಾಳ 110ಕೆವ್ಹಿ ವಿದ್ಯುತ್ ವಿತರಣಾಕೇಂದ್ರದಿಂದ ಮಾದನ ಹಿಪ್ಪರರ್ಗಾ 33ಕೆವ್ಹಿ ಉಪ-ಕೇಂದ್ರದ ವರೆಗೆ

Contact Your\'s Advertisement; 9902492681

ವಿದ್ಯುತ್ ಮಾರ್ಗಗಳು ಹಾದು ಹೋಗುವ ಗ್ರಾಮಗಳ ವಿವರ: ಮಾಡಿಯಾಳ ಸರ್ವೆ ನಂ.25,20,21 ಮತ್ತು 93, ಯಳಸಂಗಿ ಸರ್ವೆ ನಂ. 92,90,87,84 ಮತ್ತು 10/11, ಹಡಲಗಿ ಸರ್ವೆ ನಂ.154,152,72,74 ಮತ್ತು 102, ಖೇಡಉಮರ್ಗಾ ಸರ್ವೆ ನಂ.36,23,22,14,73 ಮತ್ತು 71 & ಮಾದನ ಹಿಪ್ಪರರ್ಗಾ ಸರ್ವೆ ನಂ.66,67,70,71 ಮತ್ತು 198

ಸದರಿಗ್ರಾಮಗಳಲ್ಲಿ ವಾಸಮಾಡುವಗ್ರಾಹಕರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಹೊಸ್33ಕೆವ್ಹಿ ವಿದ್ಯುತ್‍ಮಾರ್ಗವು 23.11.2023ರಂದುಅಥವಾಮುಂಚಿತವಾಗಿಚಾಲನೆಯಾಗಲಿದ್ದು, ಗ್ರಾಮಗಳಲ್ಲಿ ಹೊಲಗಳಲ್ಲಿ ಹಾದುಹೋಗಿರುವ ವಿದ್ಯುತ್ ಕಂಬಗಳಿಗೆ ದನಕರುಗಳನ್ನು ಕಟ್ಟುವುದಾಗಲಿ, ಗೈ ತಂತಿಗೆ ಕಂಬಕ್ಕೆ ಹತ್ತುವುದಾಗಲಿ ಮತ್ತು ವಿದ್ಯುತ್ ಮಾರ್ಗವನ್ನು ಮುಟ್ಟುವುದಾಗಲಿ ಮಾಡಬಾರದೆಂದು ಈ ಮೂಲಕ ಸೂಚಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here