ದೇವರನ್ನೇ ತನ್ನತ್ತ ತಿರುಗಿಸಿದ ಮಹಾನ್ ಭಕ್ತ ಕನಕದಾಸರು

0
23

ಶಹಾಬಾದ: ಶೂದ್ರರೆಂದು ದೇವರ ದರ್ಶನಕ್ಕೆ ಅವಕಾಶ ಕೊಡದೇ ಇರುವಾಗ, ದೇವರನ್ನೇ ತನ್ನತ್ತ ತಿರುಗಿಸಿದ ಮಹಾನ್ ಭಕ್ತ ಕನಕದಾಸರು ಎಂದು ಬಿಜೆಪಿ ಮುಖಂಡ ಬಸವರಾಜ ಮದ್ರಿಕಿ ಹೇಳಿದರು.

ಅವರು ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ಕನಕದಾಸರ ಜಯಂತಿ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ದೇವರನ್ನು ತನ್ನತ್ತ ತಿರುಗಿಸುವ ಮೂಲಕ ಭಕ್ತಿಯಲ್ಲಿ ಎಷ್ಟೊಂದು ಶಕ್ತಿಯಿದೆ ಎಂಬುದನ್ನು ಕನಕದಾಸರು ತೋರಿಸಿಕೊಟ್ಟರು. ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ತೊಲಗಿಸಲು ತಮ್ಮ ಕೀರ್ತನೆಗಳ ಮೂಲಕ ಜನರಿಗೆ ಜಾಗೃತಿ ಮೂಡಿಸಿದರು.ದಾಸ ಸಾಹಿತ್ಯ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದುವ ಮೂಲಕ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಅವಿರತವಾಗಿ ಶ್ರಮಿಸಿದ ಮಹಾನ್ ಚಿಂತಕ ಕನಕದಾಸರಾಗಿದ್ದರು ಎಂದು ಹೇಳಿದರು.

ಬಸವರಾಜ ಬಿರಾದಾರ, ಮಾತನಾಡಿ, ಕನಕದಾಸರು ವೈಚಾರಿಕ ಚಿಂತನೆಗಳ ಮೂಲಕ ಸಮಾಜದಲ್ಲಿದ್ದ ಮೇಲು-ಕೀಳು ಮತ್ತು ಜಾತಿ- ಮತಗಳಂಥ ಭಾವನೆಗಳು ಬದಿಗೆ ಸರಿದವು. ದೇವಸ್ತುತಿಯೇ ಮುಖ್ಯವೆನಿಸಿದ ಭಕ್ತಿ ಪರಂಪರೆಯ ಕಾಲದಲ್ಲಿ ಕನಕದಾಸರು ತಮ್ಮ ದಾಸಸಾಹಿತ್ಯದ ಮೂಲಕ ವೈಚಾರಿಕ ಚಿಂತನೆಗಳ ಮೂಲಕ ಪ್ರತಿಭಟಿಸುತ್ತ ಜೀವನ ಸಾಗಿಸಿದ್ದರು ಎಂದರು.

ಉಪಾಧ್ಯಕ್ಷರಾದ ದುರ್ಗಪ್ಪ ಪವಾರ, ಸದಾನಂದ ಕುಂಬಾರ, ಶಶಿಕಲಾ ಸಜ್ಜನ, ಕಾರ್ಯದರ್ಶಿಗಳಾದ ನೀಲಗಂಗಮ್ಮ ಗಂಟ್ಲಿ, ಪದ್ಮಾ ಕಟಕೆ, ಪ್ರಮುಖರಾದ ನಿಂಗಣ್ಣ ಹುಳಗೊಳಕರ, ಸಾಬಣ್ಣ ಬೆಳಗುಂಪಿ, ಕಾಶಣ್ಣ ಚಾಮನೂರ, ಅಪ್ಪಾರಾವ ನಾಗಶೆಟ್ಟಿ, ಯಲ್ಲಪ್ಪ ದಂಡಗುಲಕರ, ದೊಡ್ಡಪ್ಪ ಹೊಸಮನಿ, ಶ್ರೀನಿವಾಸ ದೇವಕರ, ದತ್ತಾತ್ರೇಯ ಘಂಟಿ, ನಿಂಗಾರೆಡ್ಡಿ, ಅಮರ ಕೋರೆ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here