ಸಾಹಿತಿಗಳು ಜನ ಮುಖಿಯಾಗಿ ಕಾವ್ಯ ರಚನೆ ಮಾಡಬೇಕು: ಹೊನ್ಕಲ್

0
18

ಕಲಬುರಗಿ: ಯುವ ಕವಿಗಳು ಹಿರಿಯ ಕವಿಗಳ ಕಾವ್ಯವನ್ನುವಾಚನ ಮಾಡಬೇಕು ಜನ ಮುಖಿಯಾಗಿ ಸಮಾಜಮುಖಿಯಾಗಿ ಸಾಹಿತ್ಯ ರಚನೆ ಮಾಡಬೇಕು ಎಂದು ಎಂದು ಹಿರಿಯ ಸಾಹಿತಿ ಸಿದ್ದರಾಮ ಹೊನ್ಕಲ್ ಹೇಳಿದರು.

ಕಲ್ಬುರ್ಗಿ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿರುವ ನಗರದ ಕಲಾಮಂಡಳದಲ್ಲಿ ನಿನ್ನೆ ಸಾಯಂಕಾಲ ಕವಿ ಸಮ್ಮೇಳನ, ಸಂಗೀತ ಸಂಭ್ರಮ ಹಾಗೂ ರಾಜ್ಯೋತ್ಸವ ಪುರಸ್ಕಾರ ಸಮಾರಂಭದಲ್ಲಿ ಮಾತನಾಡುತ್ತ 12ನೇ ಶತಮಾನದ ಬಸವೇಶ್ವರರು ಬಸವಾದಿ ಶರಣರು ಬಸವದಿ ಶರಣರು ಜನ ಮುಖಿಯಾಗಿ ವಚನಗಳನ್ನು ರಚಿಸಿದ ಕಾರಣದಿಂದ ಇವತ್ತಿನ ಶತಮಾನದಲ್ಲೂ ಕೂಡ ಅವರು ಪ್ರಸ್ತುತ ಕವಿಗಳು ಕಟ್ಟುವ ಕಾವ್ಯ ಕಲಾತ್ಮಕವಾಗಿ ಮತ್ತು ಜನ ಮುಖಿಯಾಗಿ ಹೊಂದಿರಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ
ಮಾತನಾಡಿದರು.

Contact Your\'s Advertisement; 9902492681

ನಿರಗುಡಿ ಅವರು ಕಳೆದ ಎರಡು ಮೂರು ದಶಕಗಳಿಂದ ಕಲ್ಬುರ್ಗಿ ಸಾಂಸ್ಕೃತಿಕ ಮತ್ತು ಸಾಹಿತಿಕ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಅವರಿಗೆ ಯಾವುದೇ ಸಾಹಿತ್ಯ ಸ್ವಾರ್ಥ ಇಲ್ಲ ಇಂಥ ಒಬ್ಬ ಕಲ್ಯಾಣ ಕರ್ನಾಟಕದ ಶ್ರೇಷ್ಠ ಸಾಹಿತಿ ಯನ್ನು ನಾವು ಈ ಭಾಗದ ಜನ ಸದಾ ಗೌರವಿಸುವಂತಹ ಕೆಲಸ ಮಾಡಬೇಕು ಮತ್ತು ಅವರನ್ನು ಬೆಂಬಲಿಸುವ ಕೆಲಸ ಮಾಡಬೇಕು ಎಂದು ಪೂಜ್ಯ ರೇವಣಸಿದ್ದ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಧುರೀಣ ನೀಲಕಂಠರಾವ ಮೂಲಗೆ ಕಾರ್ಯಕ್ರಮ ಉದ್ಘಾಟಿಸಿ ದರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಸಂತೋಷ ಪಾಟೀಲ್ ಧಣ್ಣೂರ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.

ಮಹಾ ನಗರ ಪಾಲಿಕೆಯ ಮಾಜಿ ಸದಸ್ಯರಾದ ಶಿವಾನಂದ ಪಾಟೀಲ ಅಷ್ಟಗಿ. ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ.ವಿಜಯಕುಮಾರ ಪರುತೆ ಕಾವ್ಯದ ಬಗ್ಗೆ ಮಾತುಗಳನ್ನು ಆಡಿದ್ದರು. ಕವಿ ಸಮ್ಮೇಳನದಲ್ಲಿ ಗಂಗಮ್ಮ ನಾಲವಾರ್ ,ಶಾಂತಾ ಸಪಸ್ತಾಪುರ, ಡಾ ನಾಗಪ್ಪ ಗೋಗಿ ಭೀಮರಾಯ ಹೆಮ್ನೂರ್ ,ರಾಜೇಂದ್ರ ಜಳಕಿ, ಸಾಗರ ವಾಗಮಾರೆ ,ಅಂಬಾರಾಯ ಮಡ್ಡಿ, ಪರ್ವೀನ್ ಸುಲ್ತಾನಾ ,ರಾಹುಲ್ ಕಟ್ಟೆ ಅನೇಕ ಕವಿಗಳು ಕವನವಾಸಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಡಾ ಆನಂದ ಸಿದ್ದಾಮಣಿ,ಎಂ ಬಿ ನಿಂಗಪ್ಪ, ಜಗನ್ನಾಥ್ ತರನಳ್ಳಿ, ಮಾಲಾ ಕಣ್ಣಿ,ಡಾ ಕೆ ಕೆ ದೇಸಾಯಿ, ಸಿದ್ಧಯ್ಯಸ್ವಾಮಿ ಹಿರೇಮಠ,ವೇದಕುಮಾರ್ ಪ್ರಜಾಪತಿ,ಸಿದ್ದಣ ಕಲ್ಲೂರ,ಡಾ ಜ್ಯೋತಿರ್ಲಿಂಗ ಸೂಗುರ್, ಬಾಬುರಾವ್ ಮಡ್ಡೆ, ಬಾಪುಗೌಡ ಬಿರಾದಾರ, ದಾಕ್ಷಾಯಣಿ ಬಳಬಟ್ಟಿಮಠ, ಶರಬಯ್ಯಸ್ವಾಮಿ, ಮಡಿವಾಳಪ್ಪ ಹೇರೂರು ಇವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸ್ವಾಗತ ಹಾಗೂ ಪ್ರಾಸ್ತಾವಿಕ ಸಂಸ್ಥೆಯ ಅಧ್ಯಕ್ಷ ಬಿ ಎಚ್ ನಿರಗುಡಿ ಮಾತನಾಡಿದರು ನಿರ್ವಹಣೆ ಜಿ ಜಿ ವಣಕ್ಯಾಳ.ಸಂಗೀತ ಸಂಭ್ರಮ ಕಿರಣ್ ಪಾಟೀಲ್, ಬಾಬು ಜಾಧವ್, ಅಂಬರೀಷ್ ವಾಲಿ ನಡೆಸಿ ಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here