ಗಂಗಾಮತ, ಕೂಲಿ ಮತ್ತು ಕಬ್ಬಲಿಗ STಪಟ್ಟಿಗೆ ಸೇರ್ಪಡೆ ಪ್ರಸ್ತಾವನೆ ಕೇಂದ್ರ ಸರ್ಕಾರದಲ್ಲಿದೆ; ಸಂಸದ ಡಾ. ಜಾಧವ್

0
16

ಕೇಂದ್ರ ಸರ್ಕಾರಕ್ಕೆ ಚುಕ್ಕಿ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರ

ನವದೆಹಲಿ:ಕೂಲಿ ಮತ್ತು ಕಬ್ಬಲಿಗ ಸಮುದಾಯವನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿಸುವ ಯಾವುದೇ ಪ್ರಸ್ತಾವನೆ ಇಲ್ಲ. ಆದರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಗಂಗಾಮತ ಮತ್ತು ಅದರ ಸಮನಾರ್ಥಕ ಪದಗಳಾದ ಕೂಲಿ ಮತ್ತು ಕಬ್ಬಲಿಗ ಪದಗಳಿಗೆ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಪ್ರಸ್ತಾವನೆ ನೀಡಿದೆ ಎಂದು  ಕೇಂದ್ರ ಸರ್ಕಾರದ ಬುಡಕಟ್ಟು ಸಚಿವರು ಉತ್ತರಿಸಿದ್ದಾರೆ ಎಂದು ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ.

ಸಂಸದ ಜಾಧವ್ ಅವರು ಲೋಕಸಭೆಯಲ್ಲಿ ಬುಡಕಟ್ಟು ಜನಾಂಗದ ಅಭಿವೃದ್ಧಿ ಬಗ್ಗೆ ಕೇಳಿರುವ ಚುಕ್ಕಿ ಗುರುತಿನ ಪ್ರಶ್ನೆ ಅಡಿಯಲ್ಲಿ ಕರ್ನಾಟಕ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಕೂಲಿ ಮತ್ತು ಕಬ್ಬಲಿಗ ಸಮುದಾಯವನ್ನು ಪರಿಶಿಷ್ಟ ಪಂಗಡಗಳ (ST ) ಪಟ್ಟಿಗೆ ಸೇರಿಸಲು ಯಾವುದಾದರೂ ಪ್ರಸ್ತಾವನೆ ಬಂದಿದೆಯೇ ಮತ್ತು 2014 ರಿಂದ ಕರ್ನಾಟಕ ರಾಜ್ಯದಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾದ ಸಮುದಾಯಗಳು ಯಾವ್ಯಾವು ಎಂದು ಬುಡಕಟ್ಟು ಸಚಿವಾಲಯಕ್ಕೆ ಪ್ರಶ್ನೆ ಕೇಳಿದರು.

Contact Your\'s Advertisement; 9902492681

ಮತ್ತು 2014 ರಿಂದ ಪರಿಶಿಷ್ಟ ಪಂಗಡಕ್ಕೆ ಸೇರಿರುವ ನಾಯಕ ಸಮನಾರ್ಥಕ ಪದಗಳಾದ ಪರಿವಾರ ಮತ್ತು ತಳವಾರ ಹಾಗೂ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯ ಸಿದ್ದಿ ಜನಾಂಗದವರನ್ನು ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಸಿದ್ದಿ ಜನಾಂಗದೊಂದಿಗೆ ಸೇರ್ಪಡಿಸಲಾಗಿದೆ ಹಾಗೆಯೇ ಬೆಟ್ಟ ಕುರುಬ ಸಮನಾರ್ಥಕ ಪದವಾಗಿ ಕಾಡು ಕುರುಬ ಪದವನ್ನು ಸೇರಿಸಲಾಗಿದೆ ಎಂದು ಉತ್ತರಿಸಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here