ಖಾಸಗಿ ಕ್ಲಿನಿಕ್ ಪ್ರಯೋಗಾಲಯಗಳ ಮೇಲೆ ಟಿಹೆಚ್‍ಓ ದಾಳಿ,ಸೀಜ್

0
15

ಸುರಪುರ:ನಗರದಲ್ಲಿರುವ ಖಾಸಗಿ ವೈದ್ಯಕೀಯ ಪ್ರಯೋಗಾಲಯ ಮತ್ತು ಖಾಸಗಿ ಕ್ಲಿನಿಕ್‍ಗಳ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ನೇತೃತ್ವದ ತಂಡ ದಾಳಿ ನಡೆಸಿ ಪರವಾನಿಗೆ ತಪಾಸಣೆ ನಡೆಸಲಾಗಿದೆ.

ಈ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಅವರು ಮಾಹಿತಿ ನೀಡಿ, ಕೆಂಭಾವಿ ರಸ್ತೆಯಲ್ಲಿನ ಪಾಟೀಲ್ ಡೈಗ್ನೋಸ್ಟಿಕ್ ಸೆಂಟರ್ ಮೇಲೆ ದಾಳಿ ನಡೆಸಿ ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ (ಕೆ.ಪಿ.ಎಮ್.ಇ) ಕಾಯ್ದೆ ಅಡಿಯಲ್ಲಿ ಪರವಾನಿಗೆ ಪಡೆಯದೆ ಇರುವುದನ್ನು ಪರಿಶೀಲಿಸಿ ಸೀಜ್ ಮಾಡಲಾಗಿದೆ.ಅಲ್ಲದೆ ಡಾ:ವಿ.ಎಲ್.ಚೌದರಿ ಅವರು ಕೆ.ಪಿ.ಎಮ್.ಇ ಕಾಯ್ದೆಯ ಪರವಾನಿಗೆ ನವಿಕರಣಗೊಳಿಸಿರದ ಕಾರಣ ಅವರಿಗೆ ನೋಟಿಸ್ ನೀಡಲಾಗಿದೆ,ಅಲ್ಲದೆ ತಿಮ್ಮಾಪುರದ ಒಂದು ಖಾಸಗಿ ಕ್ಲಿನಿಕ್‍ಗೂ ಪರವಾನಿಗೆ ಪಡೆಯಲು ಒಂದು ವಾರಗಳ ಕಾಲಾವಕಾಶ ನೀಡಿ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಅಲ್ಲದೆ ಸುರಪುರ ಮತ್ತು ಹುಣಸಗಿ ತಾಲೂಕಿನಾದ್ಯಂತ ಇರುವ ಅರ್ಹತೆ ಹೊಂದಿರುವ ವೈದ್ಯರು ನಡೆಸುವ ಖಾಸಗಿ ಕ್ಲೀನಿಕ್‍ಗಳಿಗೆ ಕಡ್ಡಾಯವಾಗಿ ಪಲೊಷನ್ ಬೋರ್ಡ್ ಲೈಸೆನ್ಸ್,ಮ್ಯಾನೆಜ್ಮೆಂಟ್ ಲೈಸೆನ್ಸ್ ಹಾಗೂ ಕೆ.ಪಿ.ಎಮ್.ಇ ಲೈಸೆನ್ಸ್ ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಈ ಮೂಲಕ ಸೂಚಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here