ಕಲಬುರಗಿ: ರಾಜಶೇಖರ ಬಂಡೆ ಇವರು ನಾಡಕಛೇರಿಯ ಉಪತಹಸೀಲ್ದಾರರಾಗಿ ಪ್ರಭಾರ ವಹಿಸಿಕೊಂಡ ನಂತರ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ಮಾಶಾಸನಕ್ಕಾಗಿ ಹಾಗೂ ಇತರೆ ಸರಕಾರಿ ಕೆಲಸಕ್ಕಾಗಿ ಬರುವ ಹಿರಿಯರಿಗೆ ಗೌರವದಿಂದ ಕಂಡು ಮಾಶಾಸನ ಮಂಜೂರು ಮಾಡಿ ಕಳುಹಿಸುತ್ತಿರುವುದನ್ನು ನಾವು ಗಮನಿಸಿದ್ದೇವೆಜೈ ಕನ್ನಡಿಗರ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ದತ್ತು ಭಾಸಗಿ ತಿಳಸಿದ್ದಾರೆ.
ಸರಕಾರಿ ಯೋಜನೆಗಳನ್ನು ನಿಗದಿತ ಸಮಯಕ್ಕೆ ಸಾರ್ವಜನಿಕರಿಗೆ ತಲುಪಲು ದಕ್ಷವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಉತ್ತಮ ಅಧಿಕಾರಿಗಳು ಸಾರ್ವಜನಿಕ ಸೇವೆಗೆ ಅತೀ ಅವಶ್ಯಕವಿದ್ದು, ಸರ್ಕಾರದ ಯೋಜನೆಗಳು ನಿಜವಾಗಿಯೂ ಅರ್ಹ ಫಲಾ ನುಭವಿಗಳಿಗೆ ತಲುಪುವುದರಲ್ಲಿ ಯಾವುದೇ ಸಂದೇಹವಿಲ್ಲ.
ಇವರನ್ನು ಯಾವುದೇ ಕಾರಣದಿಂದ ಬದಲಾವಣೆ/ ವರ್ಗಾವಣೆ ಮಾಡದೇ ಇವರನ್ನೇ ಮುಂದು ವರೆಸಿಕೊಂಡು ಹೋಗಬೇಕು ಎಂದುಅವರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ರಾಮಾ ಪೂಜಾರಿ, ಮಲ್ಲಿಕಾರ್ಜುನ ಆಲಗೋಂಡ, ಆನಂದ, ಪವನ, ಹಣಮಂತ ಅಂಬರೇಶ ಇದ್ದರು.