ಕಲಬುರಗಿ: ಕೃಷಿ ವಿಜ್ಙಾನ ಕೇಂದ್ರ ಹಾಗೂ ಎನ್ ಆರ್ ಎಂ ಎಲ್ ಸಹಯೋಗದಲ್ಲಿ ಕೃಷಿ ಸಖಿ ಐದನೇ ತಂಡಕ್ಕೆ ಪರಿಸರ ಸ್ನೇಹಿ ಕೃಷಿ ವಿಧಾನದಲ್ಲಿ ಸಸ್ಯ ರೋಗ, ಕೀಟ ಹತೋಟಿ ಕ್ರಮಗಳ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡುವ ಮೂಲಕ ಗ್ರಾಮೀಣ ಭಾಗದ ರೈತರೊಂದಿಗೆ ಯಾವ ಕೃಷಿ ಮಾಹಿತಿ ಅಗತ್ಯ ಎಂಬುದರ ಕುರಿತು ಬೇಸಾಯ ವಿಜ್ಞಾನಿ ಡಾ ಯೂಸುಫ್ ಅಲಿ ಅರಿವು ಮೂಡಿಸಿದರು.
ತಳಿ ಸಂರಕ್ಷಣೆ, ಜೈವಿಕ ಬೀಜ ಉಪಾಚರ, ಜೀವಮೃತ, ಎರೆಹುಳು ಗೊಬ್ಬರ, ಟ್ರಕೋಡೆರ್ಮಾ ಬಿಳಿ ಪುಡಿ ಬಳಕೆ, ಬಿಳಿ ಜೋಳ, ಬೇವಿನ ಹಿಂಡಿ, ಬೇವಿನ ಎಣ್ಣೆ ಉಪಯೋಗ, ಎಲೆ ಚುಕ್ಕಿ, ನೆಟರೋಗ ನಿರ್ವಹಣೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ದ ಕೃಷಿ ಯೋಜನೆ ಗಳು, ಸಸ್ಯ ರೋಗ ಮತ್ತು ಹವಾಮಾನ ಬದಲಾವಣೆ ಮಾಹಿತಿ ಯನ್ನು ಕೃಷಿ ವಿಜ್ಙಾನ ಕೇಂದ್ರ ಸಸ್ಯ ರೋಗ ತಜ್ಞ ವಿಜ್ಞಾನಿ ಡಾ. ಜಹೀರ್ ಅಹಮದ್ ಮಾಹಿತಿ ನೀಡಿದರು.
ಎನ್ ಆರ್ ಎಂ ಎಲ್ ಯೋಜನಾ ಸಹಾಯಕರದ ಕನ್ಯಾ ಕುಮಾರಿ ಹಾಗೂ ವಿವಿದ ತಾಲೂಕಿನ ಕೃಷಿ ಸಖಿ ಯರೂ ಉಪಸ್ಥಿತರಿದ್ದರು.