ಶಹಾಬಾದ: ನಗರಸಭೆ ಉಪ ಚುನಾವಣೆಗೆ ಶಾಂತಿಯುತ ಮತದಾನ

0
18

ಶಹಾಬಾದ; ನಗರಸಭೆಯ ವಾರ್ರ್ಡ ನಂ. 25 ರ ಉಪಚುನಾವಣೆ ಬಹುತೇಖ ಶಾಂತಿಯುತವಾಗಿ ನಡೆದಿದ್ದು, ಶೇ 54.52 %ರಷ್ಟು ಮತದಾನವಾಗಿದೆ.

ನಗರದ ಅಪ್ಪರಮಡ್ಡಿ ಪ್ರದೇಶದ ಬಾಲಕರ ವಸತಿ ನಿಲಯದಲ್ಲಿ ಸ್ಥಾಪಿತ ಮತದಾನ ಕೇಂದ್ರದಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭಗೊಂಡಿದ್ದು, ಬೆಳಗಿನ ಜಾವದಲ್ಲಿಯೇ ಮತದಾರರು ಬಂದು ಬಿರುಸಿನ ಮತ ಚಲಾಯಿಸಿದರು.

Contact Your\'s Advertisement; 9902492681

ಮಧ್ಯಾಹ್ನ ಹೊತ್ತಿಗೆ ಮತದಾನ ನೀರಸ ಪ್ರಕ್ರಿಯೆ ಕಂಡು ಬಂದರೂ, ಮತ್ತೆ ನಾಲ್ಕು ಗಂಟೆಯಿಂದ ಬಿರುಸಿನ ಮತದಾನ ಕಂಡುಬಂದಿತು.ಹೊಟ್ಟೆ ಪಾಡಿಗಾಗಿ ಪಟ್ಟಣಕ್ಕೆ ಹೋದ ಜನರನ್ನು ಅಭ್ಯರ್ಥಿಗಳು ಕರೆಯಿಸಿ, ತಮ್ಮ ಪರವಾಗಿ ಮತದಾನ ಮಾಡಲು ಹರಸಾಹಸ ಪಟ್ಟರು.

ಬೆಳಿಗ್ಗೆ ಬೇಗನೆ ಬಂದು ಮತ ಚಲಾಯಿಸಿ ಕೃಷಿ, ಕಲ್ಲಿನ ಗಣಿ ಕೆಲಸಕ್ಕೆ ಹೋಗುವಂತ ದೃಶ್ಯ ಕಂಡುಬಂದಿತು. ಮತದಾರರು ಮತದಾನ ಕೇಂದ್ರಕ್ಕೆ  ಒಬ್ಬೊಬ್ಬರಾಗಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಮತಗಟ್ಟೆಯ ದೂರದಲ್ಲಿ ಅಭ್ಯರ್ಥಿಗಳು ನಿಂತು ಮತದಾನ ಕೇಂದ್ರಕ್ಕೆ ಬರುವ ಮತದಾರರನ್ನು ಓಲೈಸಲು ಮುಂದಾಗುತ್ತಿದ್ದರು.

ಬೆಂಗಳೂರು, ಪೂನಾ, ಮುಂಬಯಿ, ಸೋಲಾಪೂರ, ಹೈದ್ರಾಬಾದನಲ್ಲಿ ಕೆಲಸಕ್ಕೆ ಹೋದ ಮತದಾರರನ್ನು ಗ್ರಾಮಕ್ಕೆ ಬರಲು ಅಭ್ಯರ್ಥಿಗಳು ವಾಹನಗಳ ವ್ಯವಸ್ಥೆ ಮಾಡಿದ್ದರು.ಅಲ್ಲದೇ ಅಭ್ಯರ್ಥಿಗಳು ಮತದಾರರಿಗೆ ಕರೆ ಮಾಡಿ ಮತ ಚಲಾಯಿಸಲು ಹೇಳುತ್ತಿರುವುದು ಕಂಡು ಬಂದಿತು.ಅಲ್ಲದೇ ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಮತಗಟ್ಟೆಗೆ ಬರುತ್ತಿದ್ದ ಮತದಾರರನ್ನು ಸೆಳೆಯಲು ಅವರ ಬೆಂಬಲಿಗರು ಕಸರತ್ತು ನಡೆಸುತ್ತಿದ್ದ ದೃಶ್ಯಗಳು ಕಂಡು ಬಂದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಆರಕ್ಷಕ ನಿರೀಕ್ಷಕ ನಟರಾಜ ಲಾಡೆ ಹಾಗೂ ಸಿಬ್ಬಂದಿಗಳು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದ್ದರು.

ವಾರ್ಡ ನಂ.25ರಲ್ಲಿ ಒಟ್ಟು 2386 ಮತದಾರರಿದ್ದು, ಅದರಲ್ಲಿ 1301 ಮತದಾರರು ಮತ ಚಲಾಯಿಸಿದರು. 620 ಪುರುಷ ಮತದಾರರು ಮತ್ತು 681 ಮಹಿಳಾ ಮತದಾರರು ಮತ ಚಲಾಯಿಸಿದರು. ತಾಲೂಕಿನಲ್ಲಿ ಒಟ್ಟು ಶೇ 54.52 %ರಷ್ಟು ಮತದಾರರು ಮತ ಚಲಾಯಿಸಿದ್ದಾರೆಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here