ಚಿತ್ತಾಪುರ: ಆಟೋ ಟಂಟಂ ಪಲ್ಟಿಯಾಗಿ ಓರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿ ಐದು ಜನರು ಗಾಯಗೊಂಡಿರುವ ಪ್ರಕರಣ ತಾಲೂಕಿನ ಮುಡಬೂಳ ಕ್ರಾಸ್ ಹತ್ತಿರ ಗುರುವಾರ ರಾತ್ರಿ ಜರುಗಿದೆ.
ಅಲ್ಲೂರ್ (ಬಿ) ಗ್ರಾಮದ ಕಾಶಿಬಾಯಿ ಅಮೃತ ಬೋಗನಿ (45) ಎಂಬ ಮಹಿಳೆ ಘಟನಾ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಚೆನ್ನಮ್ಮ ದೇವಪ್ಪ ಭಾಗೋಡಿ (50), ಸೀತಮ್ಮ ಅರ್ಜುನ (53), ದೇವಕಮ್ಮ ದೇವಿಂದ್ರಪ್ಪ (50), ಶ್ರೀದೇವಿ ಮೋನಪ್ಪ (34), ವೆಂಕಟೇಶ ದೇವಿಂದ್ರಪ್ಪ (27) ಎಂಬುವವರು ಗಾಯಗೊಂಡಿದ್ದಾರೆ.
ರಾಜೋಳಾ ಗ್ರಾಮದಿಂದ ಆರು ಜನರು ಶವಸಂಸ್ಕಾರಕ್ಕೆಂದು ಸೇಡಂ ತಾಲೂಕಿನ ಮಳಖೇಡಕ್ಕೆ ಹೋಗುತ್ತಿದ್ದಾಗ ರಾತ್ರಿ ಟಂಟಂ ಅಪಘಾತ ಘಟನೆ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸುದ್ಧಿ ತಿಳಿಯುತ್ತಿದ್ದಂತೆ ಪಿಎಸ್ಐ ಶ್ರೀಶೈಲ್ ಅಂಬಾಟಿ ಅವರು ಸಿಬ್ಬಂದಿಗಳೊಂದಿಗೆ ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.