ಟ್ರ್ಯಾಕ್ಟರ್ ಮತ್ತು ಆಟೋ ಡಿಕ್ಕಿ; ಸ್ಥಳದಲ್ಲೇ ಮಹಿಳೆ ಸಾವು

0
67

ಕಲಬುರಗಿ: ಚಿತ್ತಾಪುರ ತಾಲೂಕಿನ ಭೀಮನಳ್ಳಿ ಮತ್ತು ರಾಮತೀರ್ಥ ಮಧ್ಯೆ ಟ್ರ್ಯಾಕ್ಟರ್ ಹಾಗೂ ಆಟೋ ಮಧ್ಯೆ ಡಿಕ್ಕಿ ಸಂಭವಿಸಿದ ಸ್ಥಳದಲ್ಲೇ ಓರ್ವ ಮಹಿಳೆ ಮೃತ ಪಟ್ಟಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ತಾಲ್ಲೂಕಿನ ಭೀಮನಳ್ಳಿ ತಾಂಡಾದ ಹೇಮಿಬಾಯಿ ರಾಜು ರಾಠೋಡ 40 ಮೃತ ಪಟ್ಟ ದುರ್ದೈವಿ. ಭೀಮನಳ್ಳಿಯಿಂದ ರಾಮತೀರ್ಥ ಗ್ರಾಮಕ್ಕೆ ಹೋಗುವಾಗ ಈ ಘಟನೆ ಸಂಭವಿಸಿದ್ದು, ಅಪಘಾತದಲ್ಲಿ ಇಬ್ಬರಿಗೆ ಗಾಯಗಳಾಗಿವೆ.

Contact Your\'s Advertisement; 9902492681

ಸ್ಥಳಕ್ಕೆ ಚಿತ್ತಾಪುರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಶೈಲ್ ಅಂಬಾಟಿ, ಸಿಬ್ಬಂದಿಗಳಾದ ಯಕ್ಬಾಲ್ ಪಾಶಾ, ಮುಕ್ತುಂ ಪಟೇಲ್, ನಾಗೇಂದ್ರ ತಳವಾರ್ ಭೇಟಿ ನೀಡಿ ಪರೀಶಿಲನೆ ನಡೆಸಿದರು.

ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here