ಸುರಪುರ: ತಹಸೀಲ್ ಕಚೇರಿಯಲ್ಲಿ ಆಧಾರ್ ಕಾರ್ಡ್ಗಳ ತಿದ್ದುಪಡಿ ಕಾರ್ಯಕ್ಕೆ ಸಿಬ್ಬಂದಿಗಳ ಕೊರತೆ ಇದ್ದು ತಿದ್ದುಪಡಿ ವಿಳಂಬವಾದರೆ ಸಾರ್ವಜನಿಕರು ಸಹಕರಿಸುವಂತೆ ತಹಸೀಲ್ದಾರ್ ಕೆ.ವಿಜಯಕುಮಾರ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ತಹಸೀಲ್ದಾರರು ಕೆಲವರು ಆಧಾರ್ ಕಾರ್ಡ್ ತಿದ್ದುಪಡಿ ವಿಳಂಬವಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದು ಈಗಾಗಲೇ ರಾಷ್ಟ್ರೀಕೃತ ಬ್ಯಾಂಕ್ಲ್ಲಿ, ಅಂಚೆ ಕಚೇರಿಯಲ್ಲಿ,ಬಿ.ಎಸ್.ಎನ್.ಎಲ್ ಕಚೇರಿಯಲ್ಲಿ ತಿದ್ದುಪಡಿಗೆ ಅವಕಾಶವಿದೆ,ಅಲ್ಲಿಯೂ ತಿದ್ದುಪಡಿ ಮಾಡಿಸಬಹುದಾಗಿದೆ,ಆದರೆ ತಹಸಿಲ್ ಕಚೇರಿಯಲ್ಲಿಯೇ ಮಾಡಿಸಲು ಬಂದಾಗ ಸ್ವಲ್ಪ ವಿಳಂಬವಾದರೆ ಸಹಕರಿಸುವಂತೆ ತಿಳಿಸಿದರು.
ಹೆಚ್ಚಿನ ಸಿಬ್ಬಂದಿ ಒದಗಿಸಲು ಸಂಬಂಧಪಟ್ಟ ಏಜೆನ್ಸಿಯವರಿಗೆ ಈಗಾಗಲೇ ತಿಳಿಸಲಾಗಿದ್ದು,ಹೆಚ್ಚಿನ ಸಿಬ್ಬಂದಿ ಬರುವವರೆಗೆ ಸ್ವಲ್ಪ ಸಮಸ್ಯೆ ಉಂಟಾಗಲಿದೆ ಎಂದರು. ಅಲ್ಲದೆ ಕೆಂಭಾವಿ ಕಕ್ಕೇರಾ ನಾಡ ಕಚೇರಿಗಳಲ್ಲೂ ಆಧಾರ್ ತಿದ್ದುಪಡಿಗೆ ಅವಕಾಶವಿದೆ ಅಲ್ಲಿ ಬೇಕಾದರೂ ಮಾಡಿಸಬಹುದು,ಸಾರ್ವಜನಿಕರು ನಾಡ ಕಚೇರಿಗಳಲ್ಲೂ ತಿದ್ದುಪಡಿ ಮಾಡಿಸುವಂತೆ ತಿಳಿಸಿದರು.