ಆಳುವ ವರ್ಗದಿಂದ ಶ್ರಮಿಕರ ಮೇಲೆ ಶೋಷಣೆ ಮಾಡಿ ಆಳುವ ಹುನ್ನಾರ: ಕೆ ನೀಲಾ

0
17

ಕಲಬುರಗಿ: ದುಡಿಯುವ ವರ್ಗದ ಶ್ರಮದಿಂದ ಸೃಷ್ಟಿಯಾದ ಸಂಪತ್ತನ್ನು ಖಾಸಗಿ ಸಂಪತ್ತಾಗಿಸಿಕೊಂಡು ಶ್ರಮಿಕರ ಮೇಲೆ ಶೋಷಣೆ ಮಾಡುವ ಆಳುವ ವರ್ಗದ ಹುನ್ನಾರನ್ನು ಬಯಲುಗೊಳಿಸಿ, ಶೋಷಣಾ ವ್ಯವಸ್ಥೆಯನ್ನು ಕಿತ್ತೊಗೆದು ಸಮಾಜವಾದಿ ಆಡಳಿತ ತಂದಂತಹ ಶ್ರೇಯಸ್ಸು ಕಾ.ವ್ಲಾದಿಮಿರ್ ಇಲಾಯಿಚ್ ಲೆನಿನ್ ಅವರಿಗೆ ಸಲ್ಲುವುದು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಹೇಳಿದರು.

ಪಕ್ಷದ ಕಚೇರಿಯಲ್ಲಿ ಲೆನಿನ್-100 ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಅವರು ರಶ್ಯಾ ನೆಲದ ಸಾಮಾಜಿಕ ಪರಿಸ್ಥಿತಿಯನ್ನು ಸರಿಯಾಗಿ ಅಧ್ಯಯನಿಸಿ ಮಾರ್ಕ್ಸ್ ವಾದವನ್ನು ಅನ್ವಯಿಸಿ ಸಮಾಜವಾದಿ ಸಮಾಜ ಕಟ್ಟುವಲ್ಲಿ ಬಹುದೊಡ್ಡ ಕೊಡುಗೆ ನೀಡಿದ ತತ್ವಜ್ಞಾನಿ ಕಾ.ಲೆನಿನ್. ಜಗತ್ತನ್ನು ತಲ್ಲಣಿಸಿದ ಆಹತ್ತು ದಿನಗಳ ಕ್ರಾಂತಿಯ ಗಾಥೆಯು ಜಗದ ಶ್ರಮಿಕರ ಬದುಕಿಗೆ ದಾರಿದೀಪವಾಗಿ ಪರಿಣಮಿಸಿದೆ. ಶೋಷಣೆ ಇಲ್ಲದ ಸಮಾಜವೆಂಬುದು ಜಗತ್ತಿನ ಎಲ್ಲ ದೇಶಗಳಲ್ಲಿ ಮೂಡಿ ಬರಬೇಕಾದರೆ ಮಾರ್ಕ್ಸ್ ವಾದಿ ತತ್ವದ ಅನ್ವಯವು ಪ್ರದಾನವಾದದ್ದು ಎಂದರು.

Contact Your\'s Advertisement; 9902492681

ಅತಿಥಿಯಾಗಿ ಆರ್ ಕೆ ಹುಡಗಿ, ಡಾ.ಮೀನಾಕ್ಷಿ ಬಾಳಿಯವರು ಮಾತನಾಡುತ್ತ ‘ಝಾರ್ ಶಾಹಿಯ ಸರ್ವಾಧಿಕಾರ ಮತ್ತು ದಬ್ಬಾಳಿಕೆಯನ್ನು ಕಿತ್ತು ಹಾಕಿ ಸಮಾನತೆಯ ನಾಡು ಕಟ್ಟಿದವರು. ಸಮಾಜವಾದಿ ಸಿದ್ಧಾಂತಕ್ಕೆ ಭೌಗೋಳಿಕ ಗಡಿಗೆರೆಗಳಿರುವುದಿಲ್ಲ. ಆದ್ದರಿಂದಲೇ ಜಗತ್ತಿನ ಕಾರ್ಮಿಕರ ಐಕ್ಯತೆಯಿಂದಲೇ ಗುಲಾಮಗಿರಿಯ ಸಂಕೋಲೆ ತುಂಡರಿಸಿ ಜಗತ್ತಿನ ಅನೇಕ ದೇಶಗಳಲ್ಲಿ ಕ್ರಾಂತಿ ನಡೆಯಿತು.ಭಾರತದ ನೆಲವೂ ಶ್ರಮಿಕ ಚಳುವಳಿಯ ಕೇಂದ್ರವಾಗಿದೆ. ವರ್ಗಪ್ರಜ್ಞೆಯೊಂದಿಗೆ ರಾಜಕೀಯ ತಿಳುವಳಿಕೆಯೊಂದಿಗೆ ರೈತ-ಕಾರ್ಮಿಕರ ಸಖ್ಯತೆಯಲ್ಲಿ ಕಾರ್ಮಿಕರ ನೇತೃತ್ವದಲ್ಲಿ ಸಮಾನತೆಯ ನಾಡು ಕಟ್ಟಲು ಸಾಧ್ಯ ಎಂದು ಹೇಳಿದರು.

ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ಕಾ.ಎಂ ಬಿ ಸಜ್ಜನ್ ಅವರು ಮಾತನಾಡಿದರು. ರಾಜ್ಯ ಸಮಿತಿಯ ಸದಸ್ಯರಾದ ಕಾ.ಶಾಂತಾ ಘಂಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾ.ಶ್ರೀಮಂತ ಬಿರಾದಾರ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಜಿಲ್ಲಾ ಸಮಿತಿ ಸದಸ್ಯರಾದ ಕಾ.ಪಾಂಡುರಂಗ ಮಾವಿನಕರ್ ಸ್ವಾಗತ ಮಾಡಿದರು. ಸಾಂಸ್ಕೃತಿಕ ಸಂಘದ ಸಂಗಾತಿಗಳಾದ ಮೇಘಾ, ಲವಿತ್ರ, ಸುಜಾತಾ, ತುಷಿತ, ರೋಹಿತ, ಸೌಮ್ಯ ಕ್ರಾಂತಿ ಗೀತೆ ಹಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here