ಭಾರತದ ನಮ್ಮ ಸಂವಿಧಾನ ಭರವಸೆಯ ದಾರಿದೀಪವಾಗಿದೆ: ತೋಟದ

0
7

ಕಲಬುರಗಿ: ಭಾರತದ ನಮ್ಮ ಸಂವಿಧಾನ ಭರವಸೆಯ ದಾರಿದೀಪವಾಗಿದೆ. ಎಲ್ಲಾ ಪ್ರಜೆಗಳಿಗೂ ನ್ಯಾಯ, ಸ್ವಾತಂತ್ಯ ಸಮಾನತೆ ಮತ್ತು ಭ್ರಾತೃತ್ವ ನಮ್ಮ ಬದ್ಧತೆಯ ಸಂಕೇತವಾಗಿದೆ ಎಂದು ಕಲಬುರಗಿ ಜಿಲ್ಲಾ ಫೆÇಟೊಗ್ರಾಫರ್ಸ ಅಸೊಶಿಯೇಶನ್ ಅಧ್ಯಕ್ಷ ಬಸವರಾಜ್ ತೋಟದ ಹೇಳಿದರು.

ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದರಲ್ಲಿರುವ ಸಂಘದ ಕಚೇರಿಯ ಮೇಲೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಸಮಗ್ರ ಸಂವಿಧಾನದ ಅವಶ್ಯಕತೆ ಇತ್ತು. ಆಗ ಮಹಾತ್ಮಾಗಾಂಧಿ ಅವರು ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸಂವಿಧಾನ ಕರಡು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದರು. ಆಗ ಡಾ ಅಂಬೇಡ್ಕರ್ ಅವರು ದೇಶದ ಜನರ ಹಿತ, ಸ್ವಾತಂತ್ರ್ಯ, ಸಮಾನತೆಗಾಗಿ ಸಂವಿಧಾನ ರಚಿಸಿದರು. ಅದರ ಪರಿಣಾಮ ನಾವು ಇಂದು ಸಮಾನ ಅವಕಾಶ, ಸಮಾನತೆ ಅನುಭವಿಸುತ್ತಿದ್ದೇವೆ. ಇದಕ್ಕೆ ಕಾರಣರಾದ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನಾವು ಹೃತ್ಪೂರ್ವಕವಾಗಿ ನೆನೆಯಲೇಬೇಕು ಎಂದರು.

ಈ ಸಂಧರ್ಭದಲ್ಲಿ ಅಸೊಶಿಯೇಶನ್ ಸದಸ್ಯರಾದ ರಮೇಶ್ ಲಾಲಬುಂದ್ರೆ, ಅಪ್ಸರ ಪಟೇಲ, ಗಂಗಾರಾಮ ರಾಠೊಡ, ಅಣವಿರ ಪಾಟೀಲ್, ಆಕಾಶ ಪೂಜಾರಿ ಹಾಗೂ ಅನೇಕ ಛಾಯಾಗ್ರಾಹಕರು ಉಪಸ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here