ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ನಾವೀನ್ಯತೆ ಮೇಳಕ್ಕೆ ಚಾಲನೆ

0
8

ಕಲಬುರಗಿ; ನಾನು ಶ್ರೇಷ್ಠ ಅಲ್ಲ ನಾನು ನಿಮ್ಮೆಲ್ಲರ ಹಾಗೆ ಒಬ್ಬ ಸಾಮಾನ್ಯ ಮನುಷ್ಯ. ಇಸ್ರೋ ಶ್ರೇಷ್ಠ ಆಗಿದೆ ಇಸ್ರೋ ಸಂಸ್ಥೆಯನ್ನು ಸ್ಥಾಪನೆಯಾಗಿದ್ದು ವಿಕ್ರಂ ಸಾರಬಾಯಿಯವರಿಂದ ಹಾಗಾಗಿ ಅವರನ್ನ ಫಾದರ್ ಆಫ್ ಇಸ್ರೋ ಎಂದು ಕರೆಯುತ್ತಾರೆ ಎಂದು ಹೈದರಾಬಾದ ನ್ಯಾಷನಲ್ ರಿಮೋಟ್ ಸೆನ್ನಿಂಗ್ ಸೆಂಟರ್ ವಿಜ್ಞಾನಿ ಡಾ.ಪಿ.ಶ್ರೀನಿವಾಸ್ ರೆಡ್ಡಿ ಅವರು ಹೇಳಿದರು.

ಕಲಬುರಗಿ ವಿಜ್ಞಾನ ಕೇಂದ್ರದಲ್ಲಿ ಗುರುವಾರದಂದು ನಾವೀನ್ಯತೆಯ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, 1962ರಲ್ಲಿ ಇಸ್ರೋ ಸಂಸ್ಥೆ ಸ್ಥಾಪನೆಯಾಗಿತ್ತು ಇಸ್ರೋದ ಮೊಲದ ಹೆಸರು Iಟಿಛಿosಠಿಚಿಡಿ ಎಂದಾಗಿತ್ತು ನಂತರ ಅದನ್ನ 1969ರಲ್ಲಿ Isಡಿo ಎಂದು ಮರು ನಾಮಕರಣ ಮಾಡಲಾಯಿತು. ಮೊದಲು ಸೈಕಲ್ ಕ್ಯಾರಿಯರ್ ಮುಖಾಂತರ ರಾಕೆಟ್ ತೆಗೆದುಕೊಂಡು ಹೋಗಲಾಗುತಿತ್ತು ರೋಹಿನಿ ಮೊದಲ ರಾಕೇಟ್ ಲಾಂಚ ಆಗಿದೆ ಮತ್ತು ಆರ್ಯಭಟ್ ಮೊದಲ ಸ್ಯಾಟ್‍ಲೈಟ್ ಆಗಿದೆ ಇಸ್ರೋ ಸಮಾನ್ಯ ಮನುಷ್ಯನ ಒಂದು ಕೌಶಲ್ಯವನ್ನು ಉಪಯೋಗಕ್ಕೆ ತೆಗೆದುಕೊಳ್ಳುವುದು ಇಸ್ರೋದÀ ಉದ್ದೇಶವಾಗಿದೆ. ಎ,ಪಿ,ಜೆ. ಅಬ್ದುಲ್ ಕಲಾಂ ಹೇಳಿದಂತೆ ಅವಿಷ್ಕಾರ ಮಾಡುವಂತಹ ಕೌಶಲ್ಯ ಪ್ರತಿಯೊಬ್ಬ ಸಮಾನ್ಯ ಮನುಷ್ಯರಲ್ಲಿ ಇರುತ್ತದೆ ಎಂದರು.

Contact Your\'s Advertisement; 9902492681

ಡಾ. ಎಸ್ ಎಂ ಹನಗೊಡಿಮಠ ಅವರು ಅವಿಷ್ಕಾರದಲ್ಲಿ ಎರಡು ಪ್ರಕಾರ ಮೊದಲು ತಿಳಿದಕೊಳ್ಳುವುದು ನಂತರ ಪ್ರದರ್ಶನ ಮಾಡುವುದು. ವಿದ್ಯುತ್ ಬಲ್ಪ್ ಕಂಡು ಹಿಡಿಯುವ ಮುಂಚೆ ಥಾಮಸ್ ಎಡಿಸನ್ ಹಲವು ಬಾರಿ ವಿಫಲವಾಗಿದರು ಸತತ ಪ್ರಯತ್ನದಿಂದ ಯಶಸ್ಸನ್ನು ಕಂಡುಕೊಂಡರು. ಮಕ್ಕಳಿಗೆ ಅವಿಷ್ಕಾರ ಮಾಡುಕೊಡುವದಕ್ಕೆ ಅವಕಾಶ ಮಾಡಿಕೊಡಲು ಈ ಒಂದು ಅವಿಷ್ಕಾರವನ್ನು 2015ರಲ್ಲಿ ತೆಗೆಯಲಾಯಿತು. ವಿಜ್ಞಾನ ವಿಷಯವನ್ನು ವಿಸ್ತಾರ ಮಾಡುವುದಕ್ಕೆ ಅವಕಾಶ ಸಿಗುತ್ತದೆ ಎಂದರು.

ವೇದಿಕೆ ಮೇಲೆ ಜಿಲ್ಲಾ ವಿಜ್ಞಾನ ಕೇಂದ್ರ ಕೆ.ಎಂ.ಸುನೀಲ್, ತಾಂತ್ರಿಕ ಅಧಿಕಾರಿ ಕೃಷ್ಣಮೂರ್ತಿ, ಶಾಲೆಯ ಮಕ್ಕಳು ನಾವೀನ್ಯತೆ ಮೇಳದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here