ಕಲಬುರಗಿ: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಐಸಿಎಆರ್- ಕೃಷಿ ವಿಜ್ಞಾನಕೇಂದ್ರ ವತಿಯಿಂದ“ತೋಟಗಾರಿಕೆಯಲ್ಲಿ ಸಸ್ಯಾಭಿವೃದ್ಧಿ ಮತ್ತು ನರ್ಸರಿ ನಿರ್ವಹಣೆ” ತರಬೇತಿ ಶಿಬಿರ ಜರುಗಿತು.
ಪರಿಶಿಷ್ಟ ಜಾತಿ ಅಭ್ಯರ್ಥಿಗಳ ಆಯೋಜೀಸಲಾದ ತರಬೇತಿ ಶುಬಿರವು ರಾಷ್ಟ್ರೀಯ ಕೃಷಿ ಸಂಶೋದನೆ, ನಿರ್ವಹಣೆ ಅಕಾಡೆಮಿ, ಹೈದರಾಬಾದ್ Àಅವರಿಂದ ಪ್ರಾಯೋಜಿಸಲಾದ ಕಾರ್ಯಕ್ರಮದ ಮುಕ್ತಾಯ ಸಮಾರಂಭವು ಕೃಷಿ ವಿಜ್ಞಾನಕೇಂದ್ರ, ಕಲಬುರ್ಗಿಯಲ್ಲಿ ಡಾ. ಎಂ.ಬಾಲಕ್ರಷ್ಣನ್, ಪ್ರಧಾನ ವಿಜ್ಞಾನಿಗಳು ಮತ್ತುಅಧ್ಯಕ್ಷರು, ಎಸ್‍ಸಿಎಸ್‍ಪಿ, ಐಸಿಎಆರ್-ನಾರ್ಮ, ಹೈದರಾಬಾದ ಉದ್ಘಾಟಕರಾಗಿದ್ದರು.
ಡಾ. ಎಸ್. ಬಿ.ಗೌಡಪ್ಪ, ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ರಾಯುಚೂರು ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಡಾ. ವಾಸುದೇವ ನಾಯ್ಕ್, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಐಸಿಎಆರ್- ಕೃಷಿ ವಿಜ್ಞಾನಕೇಂದ್ರ, ರದ್ದೆವಡಗಿ ಕಲಬುರ್ಗಿ ಇವರು ಅತಿಥಿಗಳ ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಖ್ಯ ಅತಿಥಿಗಳು ಶಿಬಿರಾರ್ಥಿಗಳನ್ನು ಉದ್ದೇಶಿಸಿ ರೈತರು ಸರಕಾರದ ಅನೇಕ ಯೋಜನೆಗÀಳಿರುವದರಿಂದ ಅವುಗಳ ಲಾಭ ಪಡೆದುಕೊಳ್ಳಲು ಹೇಳಿದರು.
ಶಿಬಿರಾರ್ಥಿಗಳು ತರಬೇತಿಪಡೆದುದುರಕುರಿತು ಮೆಚ್ಚುಗೆ ಹಾಗೂ ಹರ್ಷವನ್ನು ವ್ಯಕ್ತಪಡಿಸಿದರು.ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಡಾ.ರಮೇಶ ಮಹೀಂದ್ರಕರ್, ಇಜೇರಿ ಸಭೆಯನ್ನುದ್ದೇಶಿಸಿ ರೈತರುವಿಶೇಷವಾಗಿ ಸರಕಾರ ನೀಡುತ್ತಿರುವ ಸಹಾಯ ಸಹಕಾರ ಪಡೆದು ಮುಂದೆಬರಬೇಕೆಂದು ಕೇಳಿಕೊಂಡರು.ಶಿಬಿರಾರ್ಥಿಗಳೆಲ್ಲರಿಗೆ ಪ್ರಮಾಣಪತ್ರ ಹಾಗೂ ಕೃಷಿಕಿಟ್‍ಗಳನ್ನುಗಣ್ಯರಿಂದ ವಿತರಿಸಲಾಯಿತು.
ಸಭೆಯಅಧ್ಯಕ್ಷತೆ ವಹಿಸಿದ್ದ ಡಾ.ಎಸ್. ಬಿ.ಗೌಡಪ್ಪ, ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ರಾಯುಚೂರು ಇವರು ತಮ್ಮ ಅದ್ಯಕ್ಷೀಯ ಹಿತನುಡಿಗಳಲ್ಲಿ ರೈತರ ಸಧ್ಯದ ಪರಿಸ್ಥಿತಿ ಹಾಗೂ ಅದರಿಂದ ಹೊರಬರಲು ನಮ್ಮ ಸರಕಾರ ಸಂಘ ಸಂಸ್ಥೆಗಳು ಸಹಾಯ ಸಹಕಾರ ನೀಡುತ್ತಿರುವದನ್ನು ಸದುಪಯೋಗಪಡಿಸಿಕೊಂಡು ರೈತರು ಪ್ರಗತಿಪರ ಹಾಗು ಶ್ರೀಮಂತರಾದಾಗ ಮಾತ್ರದೇಶದಉನ್ನತಿ ಹಾಗೂ ಪ್ರಗತಿ ಸಾಧಿಸಲು ಸಾದ್ಯವೆಂಬುದನ್ನು ಮನವರಿಕೆ ಮಾಡಿದರು. ಓಟ್ಟಾರೆತರಬೇತಿ ಪಡೆದರೈತರುಅತ್ಯಂತಉತ್ಸಾಹಿ ಹಾಗೂ ಹುಮ್ಮಸು ಹೊಂದಿರುವದುಅವರ ಮುಖದ ಮೇಲೆ ರಾರಾಜಿಸುತ್ತಿತ್ತು. “ತೋಟಗಾರಿಕೆಯಲ್ಲಿ ಸಸ್ಯಾಭಿವೃದ್ಧಿ ಮತ್ತು ನರ್ಸರಿ ನಿರ್ವಹಣೆ”ಎಂಬುವದರಕುರಿತು ಪಠ್ಯ ವಿವರಣೆಕೊಡಲಾಯಿತು.
“ಕಲ್ಯಾಣಕರ್ನಾಟಕದಸಸ್ಯಕಾಶಿ”ಯಾಗಿರುವ‘ಚಂದ್ರಂಪಳ್ಳಿ’ ಯಲ್ಲಿರುವ ತೋಟಗಾರಿಕಾ ಇಲಾಖೆಯ ತರಬೇತಿಕೇಂದ್ರದಲ್ಲಿ“ತೋಟಗಾರಿಕೆಯಲ್ಲಿ ಸಸ್ಯಾಭಿವೃದ್ಧಿ ಮತ್ತು ನರ್ಸರಿ ನಿರ್ವಹಣೆ” ಬಗ್ಗೆ ಪ್ರಾತ್ಯಕ್ಷಿಕೆಯನ್ನು ಕಲಿಸಲಾಯಿತು.
ಬೀದರ ಜಿಲ್ಲೆಯ ರೆಕುಳಗಿಯ ಗೊಡಂಬಿ ತೋಟಗಾರಿಕಾ ಕೇಂದ್ರಕ್ಕೆ ಭೇಟಿ ನೀಡಿ ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಔಷಧೀಯ ಸಸ್ಯಗಳ ಮಾಹಿತಿಯನ್ನು ನೀಡಲಾಯಿತು. ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಕೃಷಿ ಕಿಟ್‍ಗಳನ್ನು ನೀಡಲಾಯಿತು.
ಕಾರ್ಯಕ್ರಮದ ಕೊನೆಗೆ ಡಾ. ಮಹಾಂತೇಶಜೋಗಿ, ಸಹಾಯಕ ಪ್ರಾಧ್ಯಾಪಕರು, ಕೃಷಿ ಮಹಾವಿದ್ಯಾಲಯ ಕಲಬುರ್ಗಿ ವಂದನಾರ್ಪಣೆ ಸಲ್ಲಿಸುವದರೊಂದಿU ಸಂಪನ್ನಗೊಂಡಿತು.