ತಿಂಥಣಿ ಮೌನೇಶ್ವದ ಜಾತ್ರೆಯಲ್ಲಿ ಬಳೆಗಾರರಿಗೆ ಪೊಲೀಸ್ ಬಂದೋಬಸ್ತ್ ನೀಡಿ

0
19

ಸುರಪುರ: ತಾಲೂಕಿನ ತಿಂಥಣಿ ಗ್ರಾಮದಲ್ಲಿ ಇದೇ ಫೆಬ್ರವರಿ 19 ರಿಂದ 23ನೇ ತಾರಿಖಿನವರೆಗೆ ನಡೆಯುವ ಜಗದ್ಗುರು ಮೌನೇಶ್ವರ ಜಾತ್ರೆಯಲ್ಲಿ ಬಳೆಗಾರರ ಅಂಗಡಿಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣದ ಮುಖಂಡರು ನಗರದ ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ನಿಂಗಪ್ಪ ನಾಯಕ ಬಿಜಾಸಪುರ ಮಾತನಾಡಿ,ತಿಂಥಣಿಯ ಮೌನೇಶ್ವರ ಜಾತ್ರೆಯಲ್ಲಿ ಬಳಿಗಾರರಿಗೆ ಕಿಡಿಗೇಡಿಗಳು ತೊಂದರೆ ಮಾಡಿರುವ ಅನೇಕ ಘಟನೆಗಳು ಈ ಹಿಂದೆ ಜಾತ್ರೆಗಳಲ್ಲಿ ನಡೆದಿವೆ,ಬಳೆಗಾರರ ವ್ಯಾಪಾರಕ್ಕೂ ಇದರಿಂದ ತುಂಬಾ ಸಮಸ್ಯೆಯಾಗಿದೆ,ಬಳೆ ತೆಗೆದುಕೊಳ್ಳಲು ಬರುವ ಗ್ರಾಹಕರಿಗೂ ತೊಂದರೆ ನೀಡಿದ್ದಾರೆ,ಆದ್ದರಿಂದ ಈಬಾರಿಯ ಜಾತ್ರೆಯಲ್ಲಿ ಅಂತಹ ತೊಂದರೆ ಆಗದಂತೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸುತ್ತೇವೆ,ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ,ನಂತರ ತಹಸಿಲ್ದಾರ್‍ಗೆ ಬರೆದ ಮನವಿಯನ್ನು ಗ್ರೇಡ-2 ತಹಸಿಲ್ದಾರ್ ಮಲ್ಲಯ್ಯ ದಂಡು ಅವರ ಮೂಲಕ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಂಘಟನೆಯ ಬಳೆಗಾರ ಘಟಕದ ಗೌರವಾಧ್ಯಕ್ಷ ಮೌನೊದ್ದಿನ್ ಚೌದ್ರಿ,ಅಧ್ಯಕ್ಷ ಚಾಂದಪಾಶ ಕುಂಬಾರಪೇಟ,ಅಪ್ಸರ ಚೌದ್ರಿ,ಹಸನ್ ಪಟೇಲ್,ವಿರೇಶ ರುಮಾಲ,ಮಹ್ಮದ್ ಹುಸೇನ್ ಶೆಕ್ಲಿ,ಮೊನೊದ್ದಿನ್,ಗುಲಾಂ ಹುಸೇನ್,ನಿಂಗಣ್ಣ ಕುಂಬಾರಪೇಟ,ಬಾಬಾ ಮೈನೊದ್ದಿನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here