ಸಂವಿಧಾನ ಶಿಲ್ಪಿಗೆ ಹಾಲಿನ‌ ಅಭಿಷೇಕ: ಕುಂಚಾವರಂನಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಭವ್ಯ ಸ್ವಾಗತ

0
12

ಕಲಬುರಗಿ: ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಂವಿಧಾನ ಕುರಿತು ಅರಿವು ಮೂಡಿಸಲು ಸಂಚರಿಸುತ್ತಿರುವ ಜಾಗೃತಿ ಜಾಥಾಕ್ಕೆ ಸೋಮವಾರ ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದಲ್ಲಿ ಭವ್ಯ ಸ್ವಾಗತ ನೀಡಲಾಯಿತು.

ಜಾಥಾ ಅಂಗವಾಗಿ ಅಂಬೇಡ್ಕರ ಪ್ರತಿಮೆಗೆ ಗ್ರಾಮಸ್ಥರು ಹಾಲಿನ‌ ಅಭಿಷೇಕ ಮಾಡಿ ಸಂವಿಧಾನ ಪಿತಾಮಹನಿಗೆ ಗೌರವ ಸಲ್ಲಿಸಿದರು.

Contact Your\'s Advertisement; 9902492681

ಗ್ರಾಮಕ್ಕೆ ಅಗಮಿಸಿದ ಜಾಥಾಕ್ಕೆ ಗ್ರಾಮ‌ ಪಂಚಾಯತಿ ಅಧ್ಯಕ್ಷೆ ರೇಣುಕಾ ರಾಜು ರಾಠೋಡ ನೇತೃತ್ವದಲ್ಲಿ ಲಂಬಾಣಿ ಮಹಿಳೆಯರು ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದರು. ಯುವಕರು ಬೈಕ್ ರ‌್ಯಾಲಿ ಆಯೋಜಿಸಿದ್ದರು. ಮಾನವ ಸರಪಳಿ ನಿರ್ಮಿಸಿ ಸಂವಿಧಾನದ ಮಹತ್ವ ತಿಳಿಸಲಾಯಿತು. ನಂತರ‌ ನಡೆದ‌ ವೇದಿಕೆ ಕಾರ್ಯಕ್ರಮದಲ್ಲಿ 4ನೇ ತರಗತಿ ವಿದ್ಯಾರ್ಥಿನಿ ಭವಾನಿ ಆಂಗ್ಲದಲ್ಲಿ ಸಂವಿಧಾನ ಪೀಠಿಕೆ ವಾಚನ ಮಾಡಿ ಗಮನ ಸೆಳೆದರು.

ತಾಲೂಕಿನ ಐನೊಳ್ಳಿ ಗ್ರಾಮದಲ್ಲಿ ಸಹ ಜಾಗೃತಿ ಜಾಥಾ ಅಗಮಿಸುತ್ತಿದಂತೆ ಗ್ರಾಮಸ್ಥರು ಜೆ.ಸಿ.ಬಿ. ಮೂಲಕ ಪುಷ್ಪ ಮಳೆ ಸುರಿಸಿ ಸಂಭ್ರಮಪಟ್ಟರು. ಶಾಲಾ ಮಕ್ಕಳ ಲೇಜಿಮ್ ನೃತ್ಯ, ಮಾನವ ಸರಪಳಿ ನಿರ್ಮಾಣ, ಬೈಕ್ ರ‌್ಯಾಲಿ ಇಲ್ಲಿಯೂ ನಡೆಯಿತು. ಒಟ್ಟಾರೆಯಾಗಿ ಸಂವಿಧಾನದ ಮೂಲ ಅಶಯ, ಹಕ್ಕು ಮತ್ತು ಕರ್ತವ್ಯದ ಕುರಿತು ಸಾರ್ವಜನಿಕರಿಗೆ ಬೋಧಿಸಲಾಯಿತು. ಇದಕ್ಕು ಮುನ್ನ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿಯು ಜಾಗೃತಿ ಜಾಥಾ ಸಂಚರಿಸಿತ್ತು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭುಲಿಂಗ ವಾಲಿ, ಬಿ.ಇ.ಓ ನಾಗಶೆಟ್ಟಿ ಭದ್ರಶೆಟ್ಟಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಯಪ್ಪ, ವಲಯ ಅರಣ್ಯಾಧಿಕಾರಿ ಶಾಂತರೆಡ್ಡಿ, ಪಿ.ಡಿ.ಓ ದಶರಥ ಪಾತ್ರೆ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.

ಮಾಶಾಳದಲ್ಲಿ ಸೈಕಲ್ ಜಾಥಾ: ಅಫಜಲಪೂರ ತಾಲೂಕಿನ ಎರಡನೇ ದಿನದ ಜಾಗೃತಿ ಜಾಥಾ ಮುಂದುವರೆದಿದ್ದು, ಸೋಮವಾರ ಮಾಶಾಳ ಗ್ರಾಮದಲ್ಲಿ ಸೈಕಲ್ ಜಾಥಾ ಆಯೋಜಿಸಲಾಗಿತ್ತು. ಅತ್ತ ತಾಲೂಕಿನ ರಾಮನಗರ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅಂಬೇಡ್ಕರ ಜೀವನ‌ ಚರಿತ್ರೆ ಕುರಿತು ಶಾಲಾ ಮಕ್ಕಳು ನಾಟಕ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕರಜಗಿಯಲ್ಲಿ ತಡರಾತ್ರಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಹಿಳೆಯರು ಸೇರಿ ಜನಜಂಗುಳಿಯೇ ಇತ್ತು.

ಇದೇ‌ ಸಂದರ್ಭದಲ್ಲಿ ಸಂವಿಧಾನ ಕುರಿತು ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆ ವಿಭಾಗದಲ್ಲಿ ವಿಜೇತರಾದ ಮಕ್ಕಳಿಗೆ ಸಂವಿಧಾನ ಪೀಠಿಕೆ, ಸಂವಿಧಾನ ಓದು ಪುಸ್ತಕ ಹಾಗೂ ಮೂಲಭೂತ ಕರ್ತವ್ಯಗಳ ಪುಸ್ತಕ ವಿತರಣೆ ಮಾಡಲಾಯಿತು. ಸಂವಿಧಾನ ಪೀಠಿಕೆ ಬೋಧಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here