ನೂಪುರ ಸಂಸ್ಕತಿ ನೃತ್ಯಾಲಯಕ್ಕೆ ಚಾಲನೆ ಉತ್ತಮ ಅಭಿರುಚಿ ಅಗತ್ಯ: ಜೋಶಿ

0
18

ಕಲಬುರಗಿ : ಮಕ್ಕಳು ನಾಟ್ಯ ರಂಗದಲ್ಲಿ ಪ್ರವೇಶಿಸುವ ಮೂಲಕ ಉತ್ತಮ ಅಭಿರುಚಿ ಮೂಡಿಸಿಕೊಳ್ಳಬೇಕು ಎಂದು ರಂಗಾಯಣ ನಿಕಟಪೂರ್ವ ನಿರ್ದೇಶಕ ಪ್ರಭಾಕರ ಜೋಶಿ ಹೇಳಿದರು.

ಇಲ್ಲಿನ ಸುವರ್ಣ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನುಪುರ ಸಂಸ್ಕ್ರತಿ ನೃತ್ಯಾಲಯಯಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಮಕ್ಕಳಲ್ಲಿ ಹೆಜ್ಜೆ- ಗೆಜ್ಜೆಯ ಮಹತ್ವ ತಿಳಿಸಿಕೊಡಲು, ಚಿಕ್ಕ ವಯಸ್ಸಿನವರಿಗೆ ನಾಟ್ಯಾಸಕ್ತಿ ಮೂಡಿಸಲು ನಾಟ್ಯಗುರು ಸೌಖ್ಯ ಕುಲಕರ್ಣಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

Contact Your\'s Advertisement; 9902492681

ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಕಲೆ,ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಸಾಪ ಆದ್ಯತೆ ನೀಡುತ್ತದೆ ಎಂದರು.

ಸಮಾರಂಭದಲ್ಲಿ ಹಿರಿಯ ಕಲಾವಿದ ಮತ್ತು ನೃತ್ಯಗುರುಗಳಾದ ಅನಂತ ಚಿಂಚನಸೂರ, ಸಂಗೀತ ಶಿಕ್ಷಕರಾದ ಹಣಮಂತರಾವ ಮಳ್ಳಿ ಗುವಿವಿ ಸಂಗೀತ ವಿಭಾಗದ ಪ್ರಾಧ್ಯಾಪಕಿ ಡಾ. ಲಕ್ಷ್ಮೀ ಶಂಕರ ಜೋಶಿ, ಚಿಂತಕ ಶಂಕರ ಜೋಶಿ, ಸಂಗಮೇಶ್ವರ ಮಹಿಳಾಮಂಡಲ ಅಧ್ಯಕ್ಷೆ ವೈಶಾಲಿ ದೇಶಮುಖ, ಅತಿಥಿಗಳಾಗಿದ್ದರು.

ನಾರಾಯಣಪೇಟೆ ಶಕ್ತಿಪೀಠದ ಸಲಹೆಗಾರರಾದ ಯಜ್ಞ ನಾರಾಯಣರಾವ ಪುರೋಹಿತ, ಸವಿತಾ ಪುರೋಹಿತ ಇತರರು ಉಪಸ್ಥಿತರಿದ್ದರು. ನೂಪುರ ಸಂಸ್ಕೃತಿ ನೃತ್ಯಾಲಯದ ಮುಖ್ಯಸ್ಥೆ ಸೌಖ್ಯ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಪ್ರವೀಣಾ ಕುಲಕರ್ಣಿ ನಿರೂಪಿಸಿ ವಂದಿಸಿದರು.

ನುಪುರ ಸಂಸ್ಕ್ರತಿ ನೃತ್ಯಾಲಯಯಲ್ಲಿ ಹೆಜ್ಜೆಗೊಂದು ಗೆಜ್ಜೆ ಕಾರ್ಯಕ್ರಮದಲ್ಲಿ ವಿದ್ಯಾಥಿಗಳ ಗೆಜ್ಜೆ ಪೂಜೆ ನಗರದ ಸುವರ್ಣಸಭಾ ಭವನದಲ್ಲಿ ನಡೆಯಿತು ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಪ್ರಭಾಕರ ಜೋಶಿ‌ ಉಧ್ಘಾಟಿಸಿದರು, ಅನಂತ ಚಿಂಚನಸೂರ, ಹಣಮಂತರಾವ ಮಳ್ಳಿ ಡಾ. ಲಕ್ಷ್ಮೀ ಶಂಕರ ಜೋಶಿ, ಸೌಖ್ಯ ಕುಲಕರ್ಣಿ, ಪ್ರವೀಣ ಕುಲಕರ್ಣಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here