ಹಣ ದುರುಪಯೋಗ: ಪಿಡಿಓ ಅಮಾನತಿಗೆ ಆಗ್ರಹ

0
24

ಶಹಬಾದ: ತಾಲೂಕಿನ ತೊನಸನಹಳ್ಳಿ (ಎಸ್) ಗ್ರಾಮ ಪಂಚಾಯತ ಪಿ.ಡಿ.ಓ ಹಣ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ದೂರು ದಾಖಲಿಸಿದರೂ ಇಲ್ಲಿಯವರೆಗೆ ಅಧಿಕಾರಿ ವರ್ಗದವರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ರೇಷ್ಮಾ ಮಲ್ಲಿನಾಥ ಕರಣಿಕ್ ಆರೋಪಿಸಿದ್ದಾರೆ.

ಈಗಾಗಲೇ ತೊನಸನಹಳ್ಳಿ (ಎಸ್) ಗ್ರಾಮ ಪಂಚಾಯತ ಪಿಡಿಓ ಗ್ರಾಮ ಪಂಚಾಯತದಲ್ಲಿ 15ನೇ ಹಣಕಾಸಿನ ಯೋಜನೆ ಮತ್ತು ಅಮೃತ ಗ್ರಾಮ ಯೋಜನೆ ಮತ್ತು ಕರ ವಸೂಲಾ ತಿಯಲ್ಲಿ ಸುಮಾರು 25 ಲಕ್ಷ ರೂ. ತಮ್ಮ ಮನಸ್ಸಿಗೆ ಬಂದಂತೆ ಹಣ ದುರುಪಯೋಗ ಮಾಡಿಕೊಂಡಿರುತ್ತಾರೆ ಎಂದು ಜಿಪಂ ಕಾರ್ಯನಿರ್ವಾಹಣ ಅಧಿಕಾರಿ ಅವರಿಗೆ ದೂರು ಸಲ್ಲಿಸಲಾಗಿತ್ತು. ಆ ದೂರಿನಡಿ ಪಿಡಿಓ ರವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶಿಸಿದರೂ ಇಲ್ಲಿಯವರೆವೆ ಕ್ರಿಮಿನಲ್ ಕೇಸ್ ದಾಖಲಿಸಿರುವುದಿಲ್ಲ.

Contact Your\'s Advertisement; 9902492681

ಈ ದೂರಿನ ಮಧ್ಯೆಯೂ ಮತ್ತೆ ಪಿಡಿಓ ರವರು ಜನವರಿ 20ರಂದು ಒಂದೇ ದಿನದಲ್ಲಿ ಯಾವುದೇ ಟೆಂಡರ್ ಕರೆಯದೆ 4 ಲಕ್ಷ ಹಣ ಡ್ರಾ ಮಾಡಿ ದುರುಪಯೋಗಪಡಿಸಿಕೊಂಡಿದ್ದಾರೆ.ಈ ಬಗ್ಗೆ ಗ್ರಾಪಂ ಸದಸ್ಯರ ಗಮನಕ್ಕೂ ತಂದಿಲ್ಲ. ಅಲ್ಲದೇ ತಾಪಂ ಅಧಿಕಾರಿಗೆ ದೂರು ಸಲ್ಲಿಸಲಾಗಿದೆ. ಅವರು ಪರಿಶೀಲಿಸಿ ಸಾಮಗ್ರಿ ಖರೀದಿಯಲ್ಲಿ ಟೆಂಡರ್ ಕರೆಯದೇ ನಿಯಮ ಬಾಹಿರವಾಗಿ ತಮಗೆ ಬೇಕಾದ ವ್ಯಕ್ತಿಗೆ ಹಣ ಪಾವತಿಸಿದ್ದಾರೆ. ಯಾವುದೇ ಸರಿಯಾದ ದಾಖಲೆಗಳಿಲ್ಲದಿರುವುದನ್ನು ಮೇಲ್ನೊಟಕ್ಕೆ ಕಂಡು ಬಂದಿದೆ ಎಂದು ಪತ್ರ ಬರೆದಿದ್ದಾರೆ.

ಅಲ್ಲದೇ ಎನ್.ಎಮ್.ಆರ್ ಮಾಡದೇ ಉದ್ಯೋಗ ಖಾತ್ರಿ ಕಾಮಗಾರಿ ಪ್ರಾರಂಭ ಮಾಡಿರುತ್ತಾರೆ.ಆದ್ದರಿಂದ ಈ ಕೂಡಲೇ ಗ್ರಾಮ ಪಂಚಾಯತ ಪಿ.ಡಿ.ಓ ಅವರನ್ನು ಅಮಾನತು ಮಾಡಬೇಕು.ಅಲ್ಲದೇ ದುರುಪಯೋಗಪಡಿಸಿಕೊಂಡ ಸಂಪೂರ್ಣ ಹಣವನ್ನು ಮರುವಾಪಸಾತಿ ಪಡೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಒಂದು ವೇಳೆ ಕ್ರಮಕೈಗೊಳ್ಳದಿದ್ದರೇ ತಾಪಂ ಮುಂಭಾಗದಲ್ಲಿ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here