ಕಲಬುರಗಿ: ಜಿಲ್ಲೆಯ ಉದಯೋನ್ಮುಖ ಕಥೆಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಒಂದು ದಿನದ ಜಿಲ್ಲಾ ಮಟ್ಟದ ಕಥಾ ಕಮ್ಮಟವನ್ನು ಕಲಬುರಗಿಯ ಕನ್ನಡ ಭವನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಕಮ್ಮಟದ ಸಂಚಾಲಕ ಧರ್ಮಣ್ಣ ಎಚ್ ಧನ್ನಿ ತಿಳಿಸಿದ್ದಾರೆ.
ಕಥೆ ಹೇಳುವುದು ಹೊಸತಲ್ಲ. ಪ್ರತಿಯೊಬ್ಬರಲ್ಲಿಯೂ ಕಥೆಗಳು ಹುಟ್ಟುತ್ತಿರುತ್ತವೆ. ನಮ್ಮ ಬದುಕಿನ ಸಂವಹನಕ್ಕೆ ಕಥೆಗಳು ಬಹಳ ಹತ್ತಿರ ಮನಸ್ಸಿನಲ್ಲಿ ಹುಟ್ಟಿಕೊಳ್ಳುವ ಕಥೆಗಳಿಗೆ ವಸ್ತು ವಿಷಯಕ್ಕೆ ಆಕಾರ ರೂಪ ಕೊಟ್ಟು , ತಂತ್ರಗಾರಿಕೆಯಿಂದ ಹೆಣೆಯುವ ಕೌಶಲ್ಯ ಬೆಳೆಸುವುದು ಈ ಕಥಾ ಕಮ್ಮಟದ ಮೂಲ ಆಶಯವಾಗಿದೆ.
ಈ ಕಮ್ಮಟಕ್ಕೆ ಮೊದಲು ನೋಂದಾಯಿಸಿದ 30 ಜನರಿಗೆ ಮಾತ್ರ ಅವಕಾಶವಿರುತ್ತದೆ. ಪ್ರಯುಕ್ತ ಆಸಕ್ತರು ಮೊ. 9880349025 ಅಥವಾ 9449411098 ಗೆ ಸಂಪರ್ಕಿಸಿ ಹೆಸರು ನೋಂದಯಿಸಲು ಕೋರಿದೆ.