ಕಲಬುರಗಿ- ಬೆಂಗಳೂರು ಮಧ್ಯೆ ಮಾರ್ಚ್ 12 ರಿಂದ ವಂದೇ ಭಾರತ್ ರೈಲು: ಸಂಸದ ಜಾಧವ್

0
76

ಕಲಬುರಗಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಲಬುರಗಿ ಜನತೆಗೆ ನೂತನ ವಂದೇ ಭಾರತ್ ರೈಲು ಘೋಷಣೆ ಮಾಡಿದ್ದು ಮಾರ್ಚ್ 12 ರಿಂದ ಸಂಚಾರ ಪ್ರಾರಂಭವಾಗಲಿದೆ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಿ. ಜಾಧವ್ ಹೇಳಿದರು.

ಕೇಂದ್ರ ರೈಲ್ವೆ ಇಲಾಖೆಯಿಂದ ಇಂದು( ಮಾರ್ಚ್ ಏಳರಂದು ಗುರುವಾರ) ಈ ಬಗ್ಗೆ ಮಾಹಿತಿ ಕೈ ಸೇರಿದ್ದು ಮಾರ್ಚ್ 12ರಂದು ಪ್ರಧಾನ ಮಂತ್ರಿಗಳು ವಂದೇ ಭಾರತ್ ರೈಲುಗಾಡಿಗೆ ಹಸಿರು ನಿಶಾನೆ ತೋರಿಸಲಿದ್ದು, ಬೆಂಗಳೂರು- ಕಲಬುರಗಿ ಮಧ್ಯೆ ಪ್ರತ್ಯೇಕ ರೈಲುಗಾಡಿ ಬೇಡಿಕೆಯು ದಶಕಗಳಷ್ಟು ಹಿಂದಿನದು ಮೊನ್ನೆಯಷ್ಟೇ ಕಲಬುರಗಿ – ಬೆಂಗಳೂರು (ಬೈಯಪ್ಪನಹಳ್ಳಿ) ವಿಶೇಷ ರೈಲು ಘೋಷಣೆ ಮಾಡಿ ನಾಳೆ (ಮಾರ್ಚ್ 9 ರಂದು ಶನಿವಾರ) ಸಂಚಾರ ಪ್ರಾರಂಭವಾಗಲಿದೆ.

Contact Your\'s Advertisement; 9902492681

ಈ ಮಧ್ಯೆ ಪ್ರಧಾನಮಂತ್ರಿಯವರು ಕಲಬುರಗಿ ಜನತೆಗೆ ವಿಶೇಷ ಗಿಫ್ಟ್ ರೂಪದಲ್ಲಿ ವಂದೇ ಭಾರತ್ ರೈಲು ಘೋಷಣೆ ಮಾಡಿ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ಇದು ನನ್ನ ಜೀವನದ ಧನ್ಯತೆಯ ಕ್ಷಣವಾಗಿದೆ. ಕೇಳಿದ್ದು ಒಂದು ರೈಲು ಪ್ರಧಾನಿಯವರು ಕೊಟ್ಟದ್ದು ಎರಡು ರೈಲು. ಇದು ಕಲಬುರಗಿ ಜನತೆಯ ಮೇಲೆ ಪ್ರಧಾನಿಯವರಿಗೆ ಇರುವ ಪ್ರೀತಿಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದ ಡಾ. ಜಾಧವ್, ಕ್ಷೇತ್ರದ ಜನತೆಗೆ ನೀಡಿದ ವಾಗ್ದಾನವನ್ನು ಈಡೇರಿಸಿದ್ದು ಈ ಭಾಗದ ಅಭಿವೃದ್ಧಿಯಲ್ಲಿ ಇವು ಮೈಲಿಗಲ್ಲಾಗಲಿದೆ ಎಂದು ಹೇಳಿದ್ದಾರೆ.

ಕಲಬುರಗಿ ಗತಿಶಕ್ತಿ ಕಾರ್ಗೋ ಟರ್ಮಿನಲ್ ಗೆ ಒಪ್ಪಿಗೆ: ಕಲಬುರಗಿ ಹಿರೇ ನಂದೂರು ಭಾರತ್ ಪೆಟ್ರೋಲಿಯಂ ನಿಗಮದ ಪೆಟ್ರೋಲಿಯಂ ಉತ್ಪನ್ನ ಸಂಗ್ರಹಕಾರವನ್ನು ಗತಿ ಶಕ್ತಿ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯು ಗುರುತಿಸಿ ಘೋಷಣೆ ಮಾಡಿರೋದು ಹೆಮ್ಮೆಯ ಸಂಗತಿ ಈ ಭಾಗದ ಅಭಿವೃದ್ಧಿಗೆ ಪೂರಕವಾಗುವ ಯೋಜನೆ ಅಡಿ ಒಳಪಡಿಸಿರುವುದಕ್ಕೆ ಪ್ರಧಾನಮಂತ್ರಿಗಳು ಹಾಗೂ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆಯ ಸಚಿವರಾದ ಹರ್ ದೀಪ್ ಸಿಂಗ್ ಪುರಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಇಂತಹ ಮಹಾನ್ ಕೊಡುಗೆಯನ್ನು ನೀಡಿದ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕಲಬುರಗಿ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಆಸೆ ಕೈಗೂಡಿದೆ. ಜನರು ಪ್ರಧಾನಿ ಅವರ ಕೆಲಸವನ್ನು ಮೆಚ್ಚಿದ್ದಾರೆ. – ಡಾ. ಉಮೇಶ್ ಜಾಧವ್, ಕಲಬುರಗಿ ಲೋಕಸಭಾ ಸದಸ್ಯರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here