ಕಲಬುರಗಿ: ಆಯ್ದ ವಿಶ್ವವಿದ್ಯಾಲಯಗಳ ಪಟ್ಟಿಗೆ ಸೇರಿದ ಶರಣಬಸವ ವಿಶ್ವವಿದ್ಯಾಲಯ

0
80

ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯದ ಅಧ್ಯಾಪಕರು ಹಾಗೂ ಇತರ ಸಿಬ್ಬಂದಿಯವರ ಶೈಕ್ಷಣಿಕ ಚಟುವಟಿಕೆಗಳನ್ನು ಸುಧಾರಿಸಲು ಹಾಗೂ ಅವರ ಪ್ರತಿಯೊಂದು ವಿವರಗಳ ಬಗ್ಗೆ ಸ್ವತಃ ಅಪ್‍ಡೇಟ್ ಆಗುವಂತೆ ಮಾಡಲು ಜನರೇಷನ್ ನೆಕ್ಸ್ಟ್ ಅಕಾಡೆಮಿಕ್ ಸಾಫ್ಟ್‍ವೇರ್ ಅಳವಡಿಸಿಕೊಂಡಿರುವ ದೇಶದ ಆಯ್ದ ವಿಶ್ವವಿದ್ಯಾಲಯಗಳ ಗುಂಪಿಗೆ ಶರಣಬಸವ ವಿಶ್ವವಿದ್ಯಾಲಯ ಗುರುವಾರ ಸೇರಿದೆ.

ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ (ಃoಉ) ಸದಸ್ಯರೂ ಆಗಿರುವ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರು ಹೈದರಾಬಾದ್ ಮೂಲದ ಜೆನೆಸಿಸ್ ಟೆಕ್ ಸಿಸ್ಟಮ್‍ನಿಂದ ಕಾನ್ಫಿಗರ್ ಮಾಡಲಾದ ಜನರೇಷನ್ ನೆಕ್ಸ್ಟ್ ಅಕಾಡೆಮಿಕ್ ಸಾಫ್ಟ್‍ವೇರ್ “ಕ್ಯಾಂಪಸ್ ಕನೆಕ್ಟ್” ಅನ್ನು ಔಪಚಾರಿಕವಾಗಿ ಉದ್ಘಾಟಿಸಿದರು.

Contact Your\'s Advertisement; 9902492681

ಜೆನೆಸಿಸ್ ಟೆಕ್ ಸಿಸ್ಟಂನ ನಿರ್ದೇಶಕ ಶ್ರೀ ನವೀನ್ ಕುಮಾರ್ ಅವರು ಬಿಡುಗಡೆ ಸಮಾರಂಭದಲ್ಲಿ ತಮ್ಮ ಅನೌಪಚಾರಿಕ ಭಾಷಣದಲ್ಲಿ, ಜನರೇಷನ್ ನೆಕ್ಸ್ಟ್ ಸಾಫ್ಟ್‍ವೇರ್ ಅಳವಡಿಸಿಕೊಂಡ ನಂತರ ಶರಣಬಸವ ವಿಶ್ವವಿದ್ಯಾಲಯವು ಉನ್ನತ ಮಟ್ಟಕ್ಕೇರಿ, ಎಲ್ಲಾ ಮಾಹಿತಿಯೊಂದಿಗೆ ಸಶಕ್ತ ವಿಶ್ವವಿದ್ಯಾಲಯವಾಗಲಿದೆ. ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳು ಅದರ ಬೆರಳ ತುದಿಯಲ್ಲಿರುತ್ತದೆ. ಸಾಫ್ಟ್‍ವೇರ್‍ನ ವಿಶಿಷ್ಟತೆಯೆಂದರೆ ಅಧ್ಯಾಪಕರು, ಅವರ ಚಟುವಟಿಕೆಗಳು, ಅವರ ಕಾರ್ಯಕ್ಷಮತೆ ಮತ್ತು ಅವರ ರಜೆಯ ವಿವರಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಹೊಂದಿರುತ್ತದೆ ಹಾಗೂ ಅವರ ರಜೆಯ ಸಮಯದಲ್ಲಿ ಬೇರೆಯವರಗೆ ವಹಿಸಲಾದ ಕರ್ತವ್ಯದ ಎಲ್ಲಾ ವಿವರಗಳನ್ನು ಹೊಂದಿರುತ್ತದೆ. ಈ ಸಾಫ್ಟ್‍ವೇರ್ ಪ್ರತಿಯೊಂದು ವಿಭಾಗದ ಎಲ್ಲಾ ವಿದ್ಯಾರ್ಥಿಗಳ ಪ್ರಮುಖ ವಿವರಗಳನ್ನು ಸಹ ಹೊಂದಿರುತ್ತದೆ.

ಕಾರ್ಯಕ್ರಮದಲ್ಲಿ ಸಮಕುಲಪತಿ ಪೆÇ್ರ. ವಿ.ಡಿ.ಮೈತ್ರಿ, ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ, ವಿವಿಯ ಹಣಕಾಸು ಅಧಿಕಾರಿ ಪೆÇ್ರ. ಕಿರಣ ಮಾಕಾ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here