ಸುರಪುರ: ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಹರ ಸಾಹಸ, ಡಿಎಫ್‍ಓ ಭೇಟಿ

0
21

ಸುರಪುರ: ನಮ್ಮ ಇಲಾಖೆ ಚಿರತೆ ಹಿಡಿಯಲು ಎಲ್ಲಾ ಕಾರ್ಯಾರಣೆ ಮಾಡುತ್ತಿದೆ,ಆದರೆ ಸುರಪುರ,ದೇವರಗೋನಾಲ,ಬೊಮ್ಮನಹಳ್ಳಿ,ಜಾಲಿಬೆಂಚಿ,ಪೇಠ ಅಮ್ಮಾಪುರ,ವಾಗಣಗೇರ ಗ್ರಾಮಗಳ ಜನರು ಒಂಟಿಯಾಗಿ ಗುಡ್ಡದಲ್ಲಿ ಓಡಾಡಬೇಡಿ,ನಮ್ಮ ಇಲಾಖೆಯಿಂದ ಈಗಾಗಲೇ ಬೋನ್‍ಗಳನ್ನು ಇಡಲಾಗಿದೆ,ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ,ಅಲ್ಲದೆ ಯಾದಗಿರಿ,ಕಲಬುರ್ಗಿಯಿಂದಲೂ ನಮ್ಮ ಇಲಾಖೆ ಅಧಿಕಾರಿಗಳು ಆಗಮಿಸಿ ಕಾರ್ಯಾಚರಣೆ ಮಾಡಿ ಚಿರತೆ ಹಿಡಿಯುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

ದೇವರಗೋನಾಲ ಗ್ರಾಮದ ಬಳಿಯ ಪ್ರಕೃತಿ ಫಾರ್ಮ್ ಹೌಸ್‍ಗೆ ಭೇಟಿ ನೀಡಿ ನಾಯಿಯನ್ನು ಹಿಡಿದುಕೊಂಡು ಹೋಗಿರುವ ಸ್ಥಳ ಪರಿಶೀಲನೆ ಮಾಡಿ ಮಾತನಾಡಿ,ಚಿರತೆಯ ಹೆಜ್ಜೆಗಳನ್ನು ಗುರುತಿಸಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ,ಚಿರತೆ ಹಿಡಿಯುವವರೆಗೆ ಸಾರ್ವಜನಿಕರು ಎಚ್ಚರ ವಹಿಸುವಂತೆ ತಿಳಿಸಿದರು.

Contact Your\'s Advertisement; 9902492681

ಅರಣ್ಯ ಇಲಾಖೆಯಿಂದ ಇದೇ ಸಂದರ್ಭದಲ್ಲಿ ಬೋನ್ ಇಟ್ಟು,ನಾಯಿಯನ್ನು ಇಟ್ಟು ಸಿಸಿ ಕ್ಯಾಮೆರಾ ಅಳವಡಿಸಲಾಯಿತು.ಅಲ್ಲದೆ ಇಡೀ ದಿನ ಸುರಪುರ ಅರಣ್ಯ ಇಲಾಖೆ ಅಧಿಕಾರಿಗಳಾದ ಬುರ್ರಾನುದ್ದಿನ್ ಶಹಾ,ಶರಣಪ್ಪ ಕುಂಬಾರ ಮತ್ತು ತಂಡ ಗುಡ್ಡದಲ್ಲಿ ಚಿರತೆ ಸೆರೆಗೆ ಎಲ್ಲಾ ಕಾರ್ಯಾಚರಣೆ ನಡೆಸಿದರು.ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಬೇಟೆಗಾರ,ವಿನೋದ ದೊರೆ,ವಿಜಯ ನಾಯಕ,ಶಂಕರಗೌಡ,ದೇವು ಕೋಚ್,ಭೀಮಣ್ಣ,ಮೌನೇಶ,ಮುದಕಪ್ಪ,ದೇವರಾಜ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here