ಕಲಬುರಗಿ: ಪ್ರಸಕ್ತ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಧನಸಹಾಯ ನೀಡುವಲ್ಲಿ ಒಂದನೇ ಕಂತು ಎರಡನೇ ಕಂತು ಮಾಡಿರುವುದು ಬಹಳ ಹಾಸ್ಯಾಸ್ಪದವಾಗಿದೆ,ವಿವಿಧ ಇಲಾಖೆಗಳ ಕಾಮಗಾರಿಗಳ ವಿಷಯದಲ್ಲಿ ಒಂದನೇ ಕಂತು ಎರಡನೇ ಕಂತು ಅಂತ ಕೇಳಿದ್ದೆವು ಆದರೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಸಂಘ ಸಂಸ್ಥೆಗಳಿಗೆ, ಕಲಾವಿದರಿಗೆ ಸರ್ಕಾರ ಅನುದಾನ ನೀಡುವಲ್ಲಿ ಒಂದನೇ ಕಂತು ಎರಡನೇ ಕಂತು ಹಣ ಬಿಡುಗಡೆ ಮಾಡುತ್ತಿರುವುದು ನಿಜವಾಗಿಯೂ ಬೇಸರದ ಸಂಗತಿ ಆಗಿದೆ ಎಂದು ಕರವೇ ಉತ್ತರ ಕರ್ನಾಟಕ ಅಧ್ಯಕ್ಷರಾದ ಶರಣು ಗದ್ದುಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಕೋ ಬಿಟ್ಟಿ ಯೋಜನೆಗಳನ್ನು ಸರ್ಕಾರ ಹಾಕಿಕೊಂಡಿದ್ದು, ಕನ್ನಡ ಸಾಹಿತ್ಯ ಸಂಗೀತ ಸಂಸ್ಕೃತಿ ಪರಂಪರೆಗಳನ್ನು ಉಳಿಸುವ ಸಲುವಾಗಿ ನಡೆಸುವ ಕಾರ್ಯಕ್ರಮಗಳಿಗೆ ಕನಿಷ್ಠ ಮೊತ್ತದಲ್ಲಿರುವ ಧನಸಹಾಯ ಕ್ಕೆ, ಕಂತುಗಳು ಮಾಡಿರುವುದು ನಿಜವಾಗಲೂ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವಾರು ವರ್ಷಗಳಿಂದ ಸತತವಾಗಿ ಕಾರ್ಯಕ್ರಮಗಳು ಮಾಡುತ್ತಾ ಬಂದಿರುವ ಸಂಸ್ಥೆಗಳಿಗೂ ಅನುದಾನದಲ್ಲಿಯೇ ಕಡಿಮೆ ಮಂಜೂರು ಮಾಡಿ ಅದರಲ್ಲಿಯೇ ಒಂದನೇ ಎರಡನೇ ಕಂತು ಮಾಡಿರುವುದು ಅಸಹ್ಯ ವಾಗಿ ಕಾಣುತ್ತದೆ ಇದರ ಬಗ್ಗೆ ಇಲಾಖೆ ಸಚಿವರು ಮುಖ್ಯಮಂತ್ರಿಗಳು ಅಧಿಕಾರಿಗಳು ವಿಚಾರ ಮಾಡಿ ಕೂಡಲೇ ಹಣ ಮಂಜೂರು ಮಾಡಿ ಇನ್ನು ಹೆಚ್ಚಿನ ಧನಸಾಯವನ್ನು ಸಂಘ ಸಂಸ್ಥೆಗಳಿಗೆ ಬಿಡುಗಡೆ ಮಾಡಬೇಕೆಂದು ಗದ್ದುಗೆ ಆಗ್ರಹಿಸಿದ್ದಾರೆ.