ಸುರಪುರ: ಲೋಕಸಭೆ ಮತ್ತು ವಿಧಾನಸಭೆ ಉಪ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವದರಿಂದ ಮಾ25 ರಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಇರುವದರಿಂದ ನಗರದಲ್ಲಿ ಹೋಳಿ ಹಬ್ಬವನ್ನು ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಹಾಗೂ ಮಕ್ಕಳ ಪರೀಕ್ಷೆಗೆ ತೊಂದರೆಯಾಗದಂತೆ ಹಬ್ಬವನ್ನು ಆಚರಿಸಬೇಕು ಎಂದು ಪಿಎಸ್‍ಐ ಸೋಮಲಿಂಗ ಒಡೆಯರ ಹೇಳಿದರು.
ನಗರದ ಪೋಲಿಸ್ ಠಾಣೆಯಲ್ಲಿ ಜರುಗಿದ ಶಾಂತಿ ಸಭೆಯಲ್ಲಿ ಮಾತನಾಡಿ, ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾದ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಇಲಾಖೆಗೆ ನಾಗರಿಕರ ಸಹಕಾರ ಬಹಳ ಮುಖ್ಯ ಎಂದ ಅವರು ಠಾಣೆ ವ್ಯಾಪ್ತಿಯಲ್ಲಿ ಯಾರಾದರೂ ಶಾಂತಿ ಸುವ್ಯವಸ್ಥೆಗೆ ಭಂಗ ತಂದಲ್ಲಿ ಹಾಗೂ ಬಣ್ಣ ಆಡುವ ನೆಪದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಉಂಟು ಮಾಡಿದಲ್ಲಿ ಅಂತಹ ವ್ಯಕ್ತಿಗಳ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಹೋರಾಟಗಾರ ಮಾಳಪ್ಪ ಕಿರದಳ್ಳಿ ಮಾತನಾಡಿ,ನಮ್ಮ ತಾಲೂಕಿನಲ್ಲಿ ಹಿಂದಿನಿಂದಲೂ ಶಾಂತಿ ಸೌಹಾರ್ಧತೆಯಿಂದ ಸರ್ವ ಧರ್ಮಿಯರು ಭಾಗವಹಿಸಿ ಹೋಳಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದ್ದು,ಈ ವರ್ಷವೂ ಕೂಡ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಹೋಳಿ ಹಬ್ಬವನ್ನು ಆಚರಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಪಿಎಸ್‍ಐಗಳಾದ ಶರಣಪ್ಪ ಹವಾಲ್ದಾರ, ಚಂದ್ರಾಮಪ್ಪ ಬಳಿಚಕ್ರ ಮಾತನಾಡಿದರು, ಸಭೆಯಲ್ಲಿ ಪ್ರಮುಖರಾದ ರವಿಚಂದ್ರ ಸಾಹುಕಾರ,ಭೀಮನಗೌಡ ಹೇಮನೂರು, ಶ್ರೀಧರ ನಾಯಕ,ದುರ್ಗಪ್ಪ ಡೊಣ್ಣಿಗೇರಿ, ಮೌನೇಶ ಬೋವಿ, ಶಾಂತಗೌಡ ಪಾಟೀಲ,ಮಾನಪ್ಪ ಡೊಣ್ಣಿಗೇರಿ, ಬಸವರಾಜ ಲಕ್ಷ್ಮೀಪುರ, ಮಲ್ಲು ಸೂಗುರು, ಬಸವರಾಜ ಪಾಟೀಲ, ವೆಂಕಟೇಶ ಕೊಳ್ಳಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಇದ್ದರು. ಜನಸ್ನೇಹಿ ಪೋಲಿಸ್ ದಯಾನಂದ ಜಮಾದಾರ ನಿರೂಪಿಸಿ ವಂದಿಸಿದರು.