ಸುರಪುರ; ಮೆಥೋಡಿಸ್ಟ್ ಚರ್ಚ್‍ನಲ್ಲಿ ಖರ್ಜೂರ ಗರಿಗಳ ಹಬ್ಬ ಆಚರಣೆ

0
20

ಸುರಪುರ: ನಗರದ ಮೆಥೋಡಿಸ್ಟ್ ಚರ್ಚ್‍ನಲ್ಲಿ ಕ್ರೈಸ್ತ ಬಾಂಧವರಿಂದ ಖರ್ಜೂರ ಗರಿಗಳ ಹಬ್ಬವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಮೇಲ್ವಿಚಾರಕ ರೆ.ಸತ್ಯಮಿತ್ರ ಅವರು ದೈವ ಸಂದೇಶ ಮಾತನಾಡಿ, ಶುಭ ಶುಕ್ರವಾರದ(ಗುಡ್ ಫ್ರೈಡೆ) 40ದಿನಗಳ ಆರಾಧನೆಯಲ್ಲಿ ಯೇಸುಕ್ರಿಸ್ತರು ಶಿಲುಬೆಗೇರಿದ ದಿನವಾದ ಶುಭ ಶುಕ್ರವಾರದ ಹಿಂದಿನ ಭಾನುವಾರವನ್ನು ಖರ್ಜೂರ ಗರಿಗಳ ಭಾನುವಾರ ಎಂದು ಆಚರಿಸಲಾಗುತ್ತದೆ ಎಂದು ತಿಳಿಸಿದರು.

Contact Your\'s Advertisement; 9902492681

ಯೇಸುಕ್ರಿಸ್ತರು ತನ್ನ ಅನುಯಾಯಿಗಳೊಂದಿಗೆ ಅಂತಿಮ ಶಿಲುಬೆಯ ಹಾದಿಗಾಗಿ ಜೆರುಸಲೇಮಗೆ ಪ್ರವೇಶ ಮಾಡಿದ ದಿನದಂದು ಜನರು ಆಲಿವ್ ಮರದ ರೆಂಬೆ ಕೊಂಬೆಗಳನ್ನು ಕಿತ್ತು ತಂದು ಹಾದಿಯುದ್ದಕ್ಕೂ ವಸ್ತ್ರಗಳನ್ನು ಹಾಸುತ್ತಾ ಜಯಕಾರ ಹಾಕಿದರು ಜಗತ್ತಿನಾದ್ಯಂತ ಈ ದಿನವನ್ನು ಗರಿಗಳ ಭಾನುವಾರ ಎಂದು ಆಚರಿಸುತ್ತಾರೆ, ಯೇಸುಕ್ರಿಸ್ತರು ತನಗೆ ಒದಗಿ ಬರುವ ಮರಣ ಯಾವ ರೀತಿಯದ್ದು ಎಂದು ತಿಳಿದರು.

ಕೂಡಾ ಅದರಿಂದ ತಪ್ಪಿಸಲು ಪ್ರಯತ್ನಿಸದೇ ದಿಟ್ಟತನದಿಂದ ಎದುರಿಸಲು ಸನ್ನದ್ಧರಾಗಿ ವೈಭವದಿಂದ ಜೇರುಸಲೇಮಿಗೆ ಪ್ರವೇಶ ಮಾಡುತ್ತಾರೆ ತನ್ನ ಚಿತ್ತವಲ್ಲ ತನ್ನ ತಂದೆ ದೇವರ ಚಿತ್ತವನ್ನು ನೆರವೇರಿಸಲು ತಾನು ಸಿದ್ಧನಾಗಿದ್ದೇನೆ ಎಂದು ಸಾರಿ ಹೇಳುವ ಈ ದಿನದಂದು ಪ್ರತಿ ಭಕ್ತನಿಗೆ ದೇವರ ಚಿತ್ತಕ್ಕೆ ಶರಣಾಗುವ ಮಹತ್ವದ ಸಂದೇಶವನ್ನು ಸಾರುತ್ತದೆ ಪಾಪಿಗಳನ್ನು ರಕ್ಷಣೆ ಮಾಡುವದಕ್ಕೆ ತಮ್ಮ ಪ್ರಾಣವನ್ನೇ ಶಿಲುಬೆಯ ಮೇಲೆ ಕೊಟ್ಟ ಯೇಸುಕ್ರಿಸ್ತರನ್ನು ನಂಬುವರೆಲ್ಲರಿಗೂ ಶಾಂತಿ ಸಮೃದ್ಧಿ ಸಿಗುವುದು ಎಂದು ಹೇಳಿದರು.

ಮಹಿಳಾ ಸೇವಾ ಸಂಘದ ವತಿಯಿಂದ ವಿಶೇಷ ಹಾಡುಗಳನ್ನು ಹಾಡಿದರು, ಸಭೆಯವರಾದ ಸಾಮುವೇಲ್ ಮ್ಯಾಥ್ಯೂ, ವಸಂತಕುಮಾರ, ದೇವಪುತ್ರ, ಜಯಪ್ಪ, ಪಾಲ್ ನಾಯ್ಕ, ಮಾನುವೇಲ್ ರಾಜ್, ರಮೇಶ ಪಾಲ್, ಇಮ್ಯಾನುವೇಲ್, ವಿಜಯಕುಮಾರ, ಥಾಮಸ್ ಮ್ಯಾಥ್ಯೂ, ಮನೋರಮಾ,ಎಸ್, ಸುನೀಲಾ ಶಾಂತಕುಮಾರ, ಸುಜಾತಾ, ಸೋನಾ ಸುಕುಮಾರಿ, ಲಲಿತಾ, ಸುಕುಮಾರಿ, ಸುಮತಿ, ಸಾಗರಿಕಾ, ಅನಿತಾ, ಶೋಭಾ, ಸ್ಟೆಲ್ಲಾ, ಸರಿತಾ, ರೆಬೆಕ್ಕಾ, ರತ್ಮಮ್ಮ, ಪವಿತ್ರಾ,ಸೌಮ್ಯ, ಆಕಾಶ, ನಿಖಿಲ್, ಸಂದೀಪ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here