ವಂದೇ ಭಾರತ್ ರೈಲಿನಲ್ಲಿ ಸಂಸದ ಡಾ. ಜಾಧವ್ ಪ್ರಯಾಣ

0
40

ಕಲಬುರಗಿ: ಬೆಂಗಳೂರಿನಿಂದ ಕಲಬುರ್ಗಿಗೆ ಹೊರಟ ವಂದೇ ಭಾರತ್ ರೈಲಿನಲ್ಲಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಕಲಬುರಗಿಗೆ ಪ್ರಯಾಣ ಬೆಳೆಸಿ, ಯಲಹಂಕ ರೈಲು ನಿಲ್ದಾಣಕ್ಕೆ ಆಗಮಿಸಿದ ಡಾ. ಉಮೇಶ್ ಜಾಧವ್ ಅವರು ರೈಲುಗಾಡಿಯಲ್ಲಿ ಪ್ರಪ್ರಥಮ ಬಾರಿಗೆ ಸಂಚಾರ ನಡೆಸಿದರು.

ರೈಲು ಗಾಡಿಯಲ್ಲಿದ್ದ ಸಹ ಪ್ರಯಾಣಿಕರ ಜೊತೆ ಉಭಯಕುಶಲೋಪರಿ ನಡೆಸಿ ವಂದೇ ಭಾರತ್ ರೈಲು ಪ್ರಯಾಣದ ಬಗ್ಗೆ ಚರ್ಚಿಸಿದಾಗ ಎಲ್ಲ ಪ್ರಯಾಣಿಕರು ತಮ್ಮ ಖುಷಿಯನ್ನು ಮುಕ್ತವಾಗಿ ಹಂಚಿಕೊಂಡರಲ್ಲದೆ ಬೆಂಗಳೂರಿಗೆ ಒಂದೇ ದಿನದಲ್ಲಿ ಬಂದು ಹೋಗುವ ಸೌಲಭ್ಯವನ್ನು ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರಲ್ಲದೆ ವಿಮಾನ ಪ್ರಯಾಣದಷ್ಟೇ ಆನಂದದ ಅನುಭವ ಆಗುತ್ತಿದೆ ಎಂದು ಸುದ್ದಿಗಾರರಿಗೆ ಜಾಧವ್ ತಿಳಿಸಿದರು.

Contact Your\'s Advertisement; 9902492681

ವಂದೇ ಭಾರತ್ ರೈಲುಗಾಡಿಯನ್ನು ಸಚಿವರಾದ ಪ್ರಿಯಾಂಕ ಖರ್ಗೆಯವರು ಟೀಕಿಸುವ ಭರದಲ್ಲಿ ಅದೊಂದು ಡಕೋಟಾ ಎಕ್ಸ್ ಪ್ರೆಸ್ ಎಂದು ತುಚ್ಛವಾಗಿ ಮಾತನಾಡಿದ್ದಕ್ಕೆ ವಂದೇ ಭಾರತ್ ರೈಲುಗಾಡಿಯಲ್ಲಿ ಪ್ರಯಾಣಿಸುತ್ತಿರುವವರು ವ್ಯಕ್ತಪಡಿಸುತ್ತಿರುವ ಸಂತೋಷವೇ ಅವರಿಗೆ ಉತ್ತರ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಬಂದ ನಂತರ ಕಲ್ಬುರ್ಗಿಯಿಂದ ಬೆಂಗಳೂರಿಗೆ ಮೊಟ್ಟ ಮೊದಲ ಬಾರಿಗೆ ಒಂದು ಸಾಪ್ತಾಹಿಕ ಸಾಮಾನ್ಯ ರೈಲಿನ ಜೊತೆಗೆ ಇನ್ನೊಂದು ಪ್ರೀಮಿಯರ್ ವಂದೇ ಭಾರತ್ ರೈಲುಗಾಡಿ ಸೇರಿ ಎರಡು ರೈಲುಗಳ ವ್ಯವಸ್ಥೆ ಲಭಿಸಿರುವುದು ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ರೈಲ್ವೆ ಖಾತೆಯ ಸಚಿವರಾದ ಅಶ್ವಿನಿ ವೈಷ್ಣವ ಅವರು ನೀಡಿದ ದೊಡ್ಡ ಕೊಡುಗೆ ಎಂದು ಬಣ್ಣಿಸಿದರು.

ರೈಲಿನಲ್ಲಿ ನೀಡುವ ಊಟೋಪಚಾರ ಹಾಗೂ ಆತಿಥ್ಯಕ್ಕೆ ಪ್ರಯಾಣಿಕರು ಫುಲ್ ಖುಷ್ ಆಗಿದ್ದು ಟೀಕಿಸುವವರು ವಂದೇ ಭಾರತ್ ನಲ್ಲಿ ಪ್ರಯಾಣ ಮಾಡಿದಾಗ ಅನುಭವ ಆಗುತ್ತದೆ ಎಂದು ಹೇಳಿದರು. ಅಭಿವೃದ್ಧಿ ಕಾರ್ಯಗಳನ್ನು ಟೀಕಿಸುವ ಮತ್ತು ಜನರಿಗೆ ನೀಡಿದ ಸೌಲಭ್ಯವನ್ನು ಹೀಯಾಳಿಸುವ ಪ್ರವೃತ್ತಿಯು ಉತ್ತಮ ರಾಜಕಾರಣಿಯ ಲಕ್ಷಣವಲ್ಲ.ಇದು ದ್ವೇಷದ ರಾಜಕೀಯವಾಗಿದೆ ಎಂದು ಜಾಧವ್ ಹೇಳಿದರು.

ಕಲಬುರ್ಗಿಯಿಂದ ನಿನ್ನೆ ರಾತ್ರಿ ಸೋಲಾಪುರ ಹಾಸನ್ ಎಕ್ಸ್ಪ್ರೆಸ್ ರೈಲಿನಿಂದ ಹೊರಟು, ಬೆಳ್ಳಿಗೆ ಬೆಂಗಳೂರು ನಗರದಲ್ಲಿ ತಮ್ಮ ಕೆಲಸಗಳನ್ನು ಮಧ್ಯಾಹ್ನ ವರೆಗೂ ಮುಗಿಸಿಕೊಂಡು ಮತ್ತೆ ಕಲ್ಬುರ್ಗಿಗೆ ಹೊರಡಲು ವ್ಯವಸ್ಥೆ ಕಲ್ಪಿಸಿರುವಂತಹ ಸೌಲಭ್ಯ ಕಲ್ಯಾಣ ಕರ್ನಾಟಕ ಭಾಗದವರಿಗೆ ವರದಾನವಾಗಿದೆಹೀಗಿದ್ದರೂ ಅಭಿವೃದ್ಧಿ ಸಹಿಸದೆ ಈ ರೀತಿಯ ಕುಟಿಲ ರಾಜಕಾರಣ ಮಾಡುವವರಿಗೆ ಹಾಗೂ ಅಭಿವೃದ್ಧಿ ವಿರೋಧಿಗಳಿಗೆ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ.

ಪ್ರಬುದ್ಧ ನಾಗರಿಕರನ್ನು ಮೂರ್ಖರನ್ನಾಗಿಸಲು ಕಾಂಗ್ರೆಸ್ಸಿನಿಂದ ಸಾಧ್ಯವಿಲ್ಲ. ಮೋದಿ ಸರ್ಕಾರದ ಅಭಿವೃದ್ಧಿಯ ವೇಗವನ್ನು ನೋಡಿ ಕಂಗೆಟ್ಟ ಕಾಂಗ್ರೆಸ್ ನವರಿಗೆ ಟೀಕಿಸಲು ಬೇರೆ ಯಾವುದೇ ವಿಷಯಗಳಿಲ್ಲದೆ ಹೀಗೆ ಲೇವಡಿ ಮಾಡಿ ಜನತೆ ಮುಂದೆ ಅವರ ನಿಜ ಬಣ್ಣ ಬಯಲಾಗುತ್ತಿದೆ.

ಪ್ರಯಾಣಿಕರು ಯಾವುದೇ ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೆ ವಂದೇ ಭಾರತ್ ರೈಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸಿ ಯಶಸ್ವಿಗೊಳಿಸಬೇಕು ಹಾಗೂ ಕಲಬುರ್ಗಿಯಲ್ಲಿ ಎರಡನೇ ಪೀಟ್ ಲೈನ್ ಕೆಲಸ ಪೂರ್ಣಗೊಂಡ ಬಳಿಕ ರೈಲು ಗಾಡಿಗಳನ್ನು ಕಲ್ಬುರ್ಗಿಯಿಂದ ಬೆಂಗಳೂರು ಕಂಟೋನ್ಮೆಂಟ್ ತನಕ ಓಡಿಸಲಾಗುವುದು.

ಕಲಬುರಗಿಯಲ್ಲಿ ಎರಡನೇ ಪಿಟ್ ಲೈನ್ ಕೆಲಸ ಆರಂಭವಾಗಿದ್ದು ಶೀಘ್ರದಲ್ಲಿ ಮುಕ್ತಾಯ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ನೂತನ ರೈಲುಗಳ ಆರಂಭದಿಂದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವೇಗ ಸಿಕ್ಕಿದೆ ಎಂದು ಡಾ. ಜಾಧವ್ ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here