ರಸ್ತೆ ದಾಟುತ್ತಿದ್ದ ಯುವಕನಿಗೆ ಸಾರಿಗೆ ಬಸ್ ಡಿಕ್ಕಿ: ಯುವಕನ ಸಾವು

0
36

ಕಲಬುರಗಿ : ರಸ್ತೆ ದಾಟುತ್ತಿದ್ದ ಯುವಕನಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಂಗಳವಾರ ಶಹಾಬಾದ ತಾಲೂಕಿನ ಮಾಲಗತ್ತಿ ಗ್ರಾಮದ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮಾಲಗತ್ತಿ ಗ್ರಾಮದ ನಿವಾಸಿ ವೀರೇಶ ಮಲಕಪ್ಪ ಹೊನ್ನಕ್ಕ (23) ಮೃತ ಯುವಕ. ಯುವಕ ರಾಜ್ಯ ಹೆದ್ದಾರಿ ರಸ್ತೆ ದಾಟುತ್ತಿದ್ದ ವೇಳೆ ಕೆಕೆಆರಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೆ ಮೃತ ಪಟ್ಟಿದ್ದಾನೆ.

Contact Your\'s Advertisement; 9902492681

ಸ್ಥಳಕ್ಕೆ ಶಹಾಬಾದ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ,ಸಾರಿಗೆ ಬಸ್ ಪೆÇಲೀಸರ ವಶಕ್ಕೆ ಪಡೆದಿದ್ದಾರೆ.

ಪರಿಹಾರ ನೀಡಬೇಕೆಂದು ಪ್ರತಿಭಟನೆ: ರಸ್ತೆ ದಾಟುತ್ತಿದ್ದ ಯುವಕನಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ತಾಲೂಕಿನ ಮಾಲಗತ್ತಿ ಗ್ರಾಮದ ಹತ್ತಿರದ ರಾಷ್ಟ್ರೀಯ ಹೆದ್ದಾರಿ ತಡೆದು ಕೋಲಿ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೋಲಿ ಸಮಾಜದ ಹಿರಿಯ ಮುಖಂಡ ಅವ್ವಣ್ಣ ಮ್ಯಾಕೇರಿ ಮಾತನಾಡಿ, ಕುಟುಂಬಕ್ಕೆ ಆಧಾರ ಸ್ತಂಭವಾದ ಯುವನ ಮರಣದಿಂದ ತೀವ್ರವಾದ ಅಘಾತವಾಗಿದೆ.ಮೃತ ಯುಕನ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಒದಗಿಸಬೇಕು.ಕುಟುಂಬದ ಸದಸ್ಯರೊಬ್ಬರಿಗೆ ನೌಕರಿ ನೀಡಬೇಕು ಹಾಗೂ ಚಾಲಕನನ್ನು ವಜಾ ಮಾಡಬೇಕೆಂದು ಪಟ್ಟು ಹಿಡಿದರು.ಅಲ್ಲದೇ ರಸ್ತೆ ಮೇಲೆ ಕುಳಿತು ನೂರಾರು ಜನರು ಪ್ರತಿಭಟಿಸಿದರು.

ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಪ್ರತಿಭಟನೆಯಿಂದ ರಸ್ತೆಯ ಮೇಲೆ ನೂರಾರು ವಾಹನಗಳು ದಟ್ಟಣೆ ಕಂಡು ಬಂದಿತು. ನಂತರ ಸ್ಥಳಕ್ಕೆ ಆಗಮಿಸಿದ ಕೆಕೆಆರ್‍ಟಿಸಿ ಅಧಿಕಾರಿ ಐವತ್ತು ಸಾವಿರ ಒದಗಿಸಲಾಗುವುದು.ಕುಟುಂಬದ ಸದಸ್ಯರೊಬ್ಬರಿಗೆ ತಾತ್ಕಾಲಿನ ನೌಕರಿಗೆ ತೆಗೆದುಕೊಳ್ಳಲಾಗುವುದು.ಚಾಲಕನನ್ನು ವಜಾ ಮಾಡಲಾಗುವುದೆಂದು ತಿಳಿಸಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.

ಈ ಸಂದರ್ಭದಲ್ಲಿ ಮಾಲಗತ್ತಿ ಗ್ರಾಪಂ ಅಧ್ಯಕ್ಷರು, ಕೋಲಿ ಸಮಾಜದ ಮುಖಂಡರಾದ ಶರಣಪ್ಪ ಸಣಮೋ, ಕಾಶಿನಾಥ ಸಣಮೋ, ತಾಲೂಕಾ ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್, ತಾಲೂಕಾ ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ತಳವಾರ, ಸಿದ್ದು ಅಲ್ಲೂರ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here