ಲೋಕಸಭಾ ಚುನಾವಣೆ: ಜಿಲ್ಲಾ ನಗದು ಜಪ್ತಿ ಪರಿಹಾರ ಸಮಿತಿ ರಚನೆ

0
15

ಕಲಬುರಗಿ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ನಗದು ಹಣ ಜಪ್ತಿ ಪ್ರಕರಣಗಳ ಮೇಲ್ವಿಚಾರಣೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ನಗದು ಜಪ್ತಿ ಪರಿಹಾರ ಸಮಿತಿ (District cash seizure redressal committee)ಯನ್ನು ರಚಿಸಲಾಗಿದೆ.

ಈ ಸಮಿತಿಯು ನಗದು ಜಪ್ತಿ ಪ್ರಕರಣದಲ್ಲಿ ಸ್ವಯಂ ಪ್ರೇರಿತವಾಗಿ ತಪಾಸಣೆ ಮಾಡಬಹುದಾಗಿದೆ. ಇದಲ್ಲದೆ ಪೊಲೀಸ್, ಎಸ್.ಎಸ್.ಟಿ., ಎಫ್.ಎಸ್.ಟಿ. ಯಿಂದ ಜಪ್ತಿಯಾದ ನಗದು ಪ್ರಕರಣಗಳ ಉಸ್ತುವಾರಿ ಸಹ ನೋಡಿಕೊಳ್ಳಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಡಿ.ಸಿ.ಎಸ್.ಆರ್.ಸಿ. ಸಮಿತಿಯ ಅಧ್ಯಕ್ಷರಾದ ಭಂವರ್ ಸಿಂಗ್ ಮೀನಾ ತಿಳಿಸಿದ್ದಾರೆ.

Contact Your\'s Advertisement; 9902492681

ನಗದು ಜಪ್ತಿ ಪ್ರಕರಣದಲ್ಲಿ ಯಾವುದೇ ವ್ಯಕ್ತಿ ವಿರುದ್ಧ ಎಫ್.ಐ.ಆರ್./ ದೂರು ದಾಖಲಿಸದ ಅಥವಾ ಅಲ್ಲಿ ವಶಪಡಿಸಿಕೊಳ್ಳುವಿಕೆಯು ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷ ಅಥವಾ ಯಾವುದೇ ಚುನಾವಣಾ ಪ್ರಚಾರ ಇತ್ಯಾದಿಗಳೊಂದಿಗೆ ಸಂಬಂಧ ಹೊಂದಿಲ್ಲದಿದ್ದಲ್ಲಿ ಚುನಾವಣಾ ಆಯೋಗದ ಎಸ್.ಓ.ಪಿ. ಮಾರ್ಗಸೂಚಿಯಂತೆ ಸಮಿತಿಯು ಕೂಲಂಕುಷವಾಗಿ ಪರಿಶೀಲಿಸಿ, ನಗದು ವಶಪಡಿಸಿಕೊಂಡ ವ್ಯಕ್ತಿಗಳಿಗೆ ಹಣ ಬಿಡುಗಡೆ ಮಾಡಲು ಅಥವಾ ಜಪ್ತಿ ಪ್ರಕರಣದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ಕಲಬುರಗಿ ಲೋಕಸಭಾ ವ್ಯಾಪ್ತಿಗೆ ಸಂಬಂಧಿಸಿದ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಜಪ್ತಿಗೆ ಸಂಬಂಧಿಸಿದ ತಂಡದವರು ಪ್ರತಿ ನಗದು ಸೀಜ್ ಪ್ರಕರಣ ಕುರಿತು ನಿಗದಿತ ಅವಧಿಯಲ್ಲಿ ಪೂರಕ ದಾಖಲೆಗಳೊಂದಿಗೆ ಜಿಲ್ಲಾ ನಗದು ಜಪ್ತಿ ಮತ್ತು ಪರಿಹಾರ ಸಮಿತಿ (ಡಿ.ಸಿ.ಎಸ್.ಆರ್.ಸಿ) ಅಧ್ಯಕ್ಷರ ಕಚೇರಿಯ ಇ-ಮೇಲ್ ceogulbarga@gmail.com, caozpgulbarga@gmail.com ಗೆ ತಪ್ಪದೇ ವರದಿ ಸಲ್ಲಿಸಬೇಕು. ಇದಲ್ಲದೆ ಸಂಬಂಧಪಟ್ಟ ಸಾರ್ವಜನಿಕರು ಸಹ ಪೂರಕ ದಾಖಲೆಗಳೊಂದಿಗೆ ಪರಿಹಾರಕ್ಕಾಗಿ ಡಿ.ಸಿ.ಎಸ್.ಆರ್.ಸಿ. ಸಮಿತಿಗೆ ಸಂಪರ್ಕಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here