ಕಲಬುರಗಿ: ತ್ರಿವಿದ ದಾಸೋಹಿ ಮೂರ್ತಿಗಳಾದ ಡಾ ಶಿವಕುಮಾರ ಮಹಾಸ್ವಾಮಿಗಳು ಪ್ರತಿಪಾದಿಸಿದ ಸಂಸ್ಕಾರ ಮತ್ತು ದಾಸೋಹ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು ಎ೦ದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿಂದು ಏರ್ಪಡಿಸಿದ ಶ್ರೀ ಸಿದ್ದಗಂಗಾ ಮಠದ ತ್ರಿವಿದ ದಾಸೋಹಿ ಪರಮಪೂಜ್ಯ ಶ್ರೀ ಡಾ. ಶಿವಕುಮಾರ ಮಹಾಶಿವಯೋಗಿಗಳ 117 ನೇ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜೀವನದಲ್ಲಿ ಸಂಸ್ಕಾರ ಮುಖ್ಯ. ಜಾತಿ, ಮತ, ಪಂಥಗಳಾಚೆ ನಿಂತು ತ್ರಿವಿಧ ದಾಸೋಹ ಕೈಗೊಂಡು ಮಾಡಿದ ಸೇವೆ ಈ ನಾಡು ಸದಾ ಸ್ಮರಿಸುವಂಥದು ಎಂದರು.
ನೂತನ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಚಪ್ಪರಬಂದಿ, ಪ್ರಮುಖರಾದ ಎಂ ಎನ್ ಸುಗಂಧಿ, ಸಂಜೀವಕುಮಾರ ಡೊಂಗರಗಾಂವ, ರವಿಂದ್ರಕುಮಾರ ಬಂಟನಳ್ಳಿ,ರೇವಣಸಿದ್ದಪ್ಪಾ ಜೀವಣಗಿ, ವಿನೋದಕುಮಾರ ಜನೇವರಿ, ಸೋಮಶೇಖರ ನಂದಿಧ್ವಜ ಅವರು ಡಾ. ಶಿವಕುಮಾರ ಮಹಾಸ್ವಾಮಿಗಳ ಸೇವಾ ಕಾರ್ಯಗಳ ಕುರಿತು ಮಾತನಾಡಿದರು.
ಗಣ್ಯರಾದ ಹನುಮಂತ ಪ್ರಭು, ಮಧುಕರ ಮಾಶ್ಯಾಳಕರ, ಮಲ್ಲಿಕಾರ್ಜುನ ಸಂಗೋಳಗಿ, ಅಶೋಕ ಜೀವಣಗಿ, ಬಸಯ್ಯ ಹಿರೇಮಠ, ರಾಜೇಂದ್ರ ಮಾಡಬೂಳ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದರು.