ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಡಾ ಶ್ರೀ ಶಿವಕುಮಾರ ಸ್ವಾಮೀಜಿ ಅವರ 117ನೇ ಜನ್ಮದಿನಾಚರಣೆ ಆಚರಿಸಲಾಯಿತು.
ಈ ವೇಳೆ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ
ಚಿನ್ನ ಕ್ಕಿಂತ ಅನ್ನ ಲೇಸು,ಅನ್ನ ಕ್ಕಿಂತ ಅಕ್ಷರ ಲೇಸು ಎಂಬಂತೆ
ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನ್ನ,ಅಕ್ಷರ ದೊಂದಿಗೆ ಆಶ್ರಯ ನೀಡಿ ಆಸರೆಯಾದ ನಮ್ಮ ಶ್ರೀ ಶಿವಕುಮಾರ ಸ್ವಾಮೀಜಿ ಕಣ್ಣೆದುರಿನ ನಿಜವಾದ ದೇವರು ಎಂದರು.
ಶ್ರೀಗಳು ತಮ್ಮ ವೈಯುಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು 80 ವರ್ಷಗಳ ಕಾಲ ನಿರಂತರವಾಗಿ ಅವಕಾಶವಂಚಿತ ಮಕ್ಕಳಿಗೆ ಜಾತಿ, ಮತ,
ಅಂತಸ್ತುಗಳನ್ನೆಣಿಸದೇ ಅನ್ನ ದಾಸೋಹದ ಜೊತೆಗೆ ಅಕ್ಷರವನ್ನು ಕಲಿಸಿ ಅವರ ಬಾಳು ಉತ್ತಮ ಮಾರ್ಗದಲ್ಲಿ ಸಾಗಲು ಅಡಿಗಲ್ಲು ಹಾಕಿಕೊಟ್ಟವರು.
ನಿಸರ್ಗದಂತೆ ನಿಸ್ವಾರ್ಥವಾಗಿ ಬದುಕಿದ ಇಂತಹ ಸ್ವಾಮಿಜಿ ಈ ಭೂಮಿ ಮೇಲೆ ಅಪರೂಪ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಉಪಾಧ್ಯಕ್ಷ ರಿಚರ್ಡ್ ಮಾರೆಡ್ಡಿ,ಪುರಸಭೆ ಮಾಜಿ ಸದಸ್ಯ ಕಿಶನ ಜಾಧವ,ಯುವ ಮೂರ್ಚಾ ಅಧ್ಯಕ್ಷ
ಭಾಗಣ್ಣ ದೊರೆ,ಅಯ್ಯಣ್ಣ ದಂಡೋತಿ, ಶರಣಪ್ಪ ಕರದಳ್ಳಿ,ನಿರ್ಮಲಾ ಇಂಡಿ,ಯಂಕಮ್ಮ ಗೌಡಗಾಂವ,ಉಮಾದೇವಿ ಗೌಳಿ,ಶರಣಮ್ಮ ಯಾದಗಿರಿ,ಹೀರಾಸಿಂಗ ರಾಠೋಡ, ಸಂಜಯ ಇಂದಿರಾನಗರ ಸೇರಿದಂತೆ ಇತರರು ಇದ್ದರು.