ಕ್ಷಯರೋಗ ಎಂಬ ಕಳಂಕ ಸಮಾಜದಿಂದ ಹೊಗಲಾಡಿಸಲು ಎಲ್ಲರ ಪಾತ್ರ ಮುಖ್ಯ: ಡಾ. ಭಂವರ ಸಿಂಗ್ ಮೀನಾ

0
17

ಕಲಬುರಗಿ: ಕ್ಷಯರೋಗ ಕಳಂಕವನ್ನು ಸಮಾಜದಿಂದ ಹೊಗಲಾಡಿಸಬೇಕೆಂದರೆ ಎಲ್ಲರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ ಅವರು ಹೇಳಿದರು.

ಸೋಮವಾರದಂದು ಹಳೆಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಘಟಕ ಕಲಬುರಗಿ ವಿಶ್ವ ಕ್ಷಯರೋಗ ದಿನಾಚರಣೆಯನ್ನು ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಕಲಬುರಗಿ. ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಸಂಯೋಜನೆ ಅಡಿಯಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮದಲ್ಲಿ, ಕ್ಷಯರೋಗ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು, ಇದೇ ೧೮ ನೇ ನವೆಂಬರ್ ನಿಂದ ೨ನೇ ಡಿಸೆಂಬರ್ ವರಗೆ ಮಾಡಲು ನಿರ್ಧರಿಸಲಾಗಿತ್ತು ಎಂದರು.

ನಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ೧೮ ರಿಂದ ಡಿಸೆಂಬರ್ ೫ರ ವರೆಗೆ ಹಮ್ಮಿಕೊಳ್ಳಲಾಗಿದೆ. ಕಲಬುರಗಿಯ ಏರಿಯಾ ಅಗಿರಬಹುದು, ತಾಲ್ಲೂಕು ಗ್ರಾಮ ಮಟ್ಟದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವಿಕೆ ಪ್ರತಿ ಒಬ್ಬರ ಜವಾಬ್ದಾರಿ ಅಗಿದೆ. ಇತ್ತೀಚಿಗೆ ಡಬ್ಲ್ಯೂ ಹೆಚ್ ಓ ಅಧ್ಯಯನ ಪ್ರಕಾರ ನಮ್ಮ ದೇಶದಲ್ಲಿ ಕ್ಷಯರೋಗಿಗಳ ಸಾವಿನ ಪ್ರಮಾಣ ಈ ಒಂದು ಕ್ಷಯರೋಗದಿಂದ ಅಗತ್ಯಕ್ಕಿಂತ ಸಾವಿನ ಪ್ರಮಾಣ ಕಡಿಮೆ ಆಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಕಲಬುರಗಿ ವಿಭಾಗದ ಸಹ ನಿರ್ದೇಶಕರಾದ ಡಾ. ಅಂಬರಾಯ ರುದ್ರವಾಡಿ ಮಾತನಾಡಿ, ಎರಡು ವಾರಕ್ಕಿಂತ ಹೆಚ್ಚು ಕೆಮ್ಮ, ಕಫ್ ರಕ್ತ ಬಿಳುತ್ತಿದ್ದಾರೆ ಸಮೀಪದ ಸರಕಾರಿ ಆರೋಗ್ಯ ಕೇಂದ್ರ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು ಮುಂದಿನ ದಿನಗಳಲ್ಲಿ ಮುಕ್ತ ಜಿಲ್ಲೆಯನ್ನಾಗಿ ಮಾಡಲು ನಾವು ಪ್ರಯತ್ನ ಮಾಡೋಣ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವಿಭಾಗೀಯ ಉಪನಿರ್ದೇಶಕರಾದ ಡಾ. ಶರಣಬಸಪ್ಪಾ ಗಣಜಲ್‌ಖೇಡ್ ಅವರು ಮಾತನಾಡಿ, ಕರೋನ ಸಂದರ್ಭದಲ್ಲಿ ವ್ಯಾಕ್ಸಿನ ರೂಪದಲ್ಲಿ ನಮಗೆ ನೀಡಿದ್ದಾರೆ. ಈಗಾಗಲೇ ವಿಜ್ಞಾನಿಗಳು ಕ್ಷಯರೋಗಕ್ಕೆ ವ್ಯಾಕ್ಸಿನ ಕಂಡು ಹಿಡಿಯುತ್ತಿದ್ದಾರೆ.

ಕ್ಷಯರೋಗದ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕೆಂದರು.

ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ರತಿಕಾಂತ ವಿ ಸ್ವಾ,ಮಿ ಅಧ್ಯಕ್ಷತೆ ವಹಿಸಿದರು. ಎಂ.ಆರ್.ಎA.ಸಿ. ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗ ನೋಡಲ್ ಅಧಿಕಾರಿಗಳು ಎನ್.ಟಿ.ಇ.ಪಿ ಸಹಾಯಕ ಪ್ರಾಧ್ಯಾಪಕರಾದ ಡಾ. ರವಿಕುಮಾರ ಕೂರ್ಲೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕ್ಷಯರೋಗ ಲಕ್ಷಣ ಚಿಕಿತ್ಸೆ ಬಗ್ಗೆ ದೇಶದಲ್ಲಿ ಕ್ಷಯರೋಗ ಜಗತ್ತಿನ ನಾಲ್ಕನೆ ಒಂದು ಭಾಗ ನಮ್ಮ ದೇಶದಲ್ಲಿ ಹೆಚ್ಚಾಗಿರುವುದರಿಂದ ಕ್ಷಯರೋಗ ಲಕ್ಷಣವಿರುವ ಎಲ್ಲ ಜನರು ಪರೀಕ್ಷೆ ಒಳಪಡಿಸಬೇಕೆಂದರು.

ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಚಂದ್ರಕಾಂತ ನರಬೋಳಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಯಾರು ಕ್ಷಯರೋಗವನ್ನು ಹೆಚ್ಚಿನ ಜನರಿಗೆ ತಪಾಸಣೆ ಮಾಡಿ ಅದರಲ್ಲಿ ಕ್ಷಯರೋಗ ಪತ್ತೆಹಚ್ಚಿ ಅವರಿಗೆ ಔಷಧಿಗಳನ್ನು ನೀಡಿದವರಿಗೆ ಪ್ರತಿಯೊಬ್ಬ ಆಶಾಕಾರ್ಯಕರ್ತೆರಿಗೆ ಡಾಕ್ಟರಗಳಿಗೆ ಸಿಬ್ಬಂದಿ ವರ್ಗದವರಿಗೆ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಆರ್.ಸಿ.ಎಚ್. ಅಧಿಕಾರಿ ಡಾ. ಶರಣಬಸಪ್ಪ ಖ್ಯಾತನಾಳ, ಜಿಲ್ಲಾ ಸರ್ಜನ್ ಓಂ ಪ್ರಕಾಶ ಅಂಬುರೆ, ಜಿಲ್ಲಾ ಕುಷ್ಟರೋಗ ನಿರ್ಮೂಲ ಅಧಿಕಾರಿ ಡಾ. ರಾಜಕುಮಾರ, ತಾಲೂಕು ವೈದ್ಯಾಧಿಕಾರಿ ಮಾರುತಿ ಕಾಂಬಳೆ, ಹೆಚ್.ಎಫ.ಡಬ್ಲೂ.ಸಿ. ಪ್ರಾಂಶುಪಾಲರಾದ ಡಾ.ಬಿ.ಬಿ. ರಡ್ಡಿ, ತಾಲೂಕಿನ ವೈದ್ಯಾಧಿಕಾರಿಗಳು ನರ್ಸಿಂಗ್ ಕಾಲೇಜಿ ವಿದ್ಯಾರ್ಥಿಗಳು ಆಶಾ ಕಾರ್ಯಕರ್ತೆಯರು ಜಿಮ್ಸ್ ರ್ಸಿಂಗ್ ವಿಧ್ಯರ್ಥಿನಿಯರು, ಇತರೆ ಸಂಘ ಸಂಸ್ಥೆಗಳು ಸಿಬ್ಬಂದಿ ವರ್ಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here