ದೇಶದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಗೆ ಮತಯಾಚಿಸಿ : ಡಾ.ಉಮೇಶ ಜಾಧವ

0
21

ಶಹಾಬಾದ: ಕಳೆದ ಬಾರಿಯ ಚುನಾವಣೆಯಲ್ಲಿ ತಮ್ಮ ಆಶೀರ್ವಾದದಿಂದ ಸಂಸದನಾದೆ.ಈ ಬಾರಿಯೂ ತಾವು ಮತಯಾಚಿಸುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಹಾಗೂ ಮೋದಿಯವರ ಕೈ ಬಲಪಡಿಸಲು ಮತ್ತೊಮ್ಮೆ ನವಭಾರತದ ಕಲ್ಪನೆಗೆ ಮತಯಾಚಿಸಿ ಎಂದು ಬಿಜೆಪಿ ಪಕ್ಷದ ಅಭ್ಯರ್ಥಿ ಡಾ. ಉಮೇಶ ಜಾಧವ ಮತದಾರರಲ್ಲಿ ಮನವಿ ಮಾಡಿದರು.

ಅವರು ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಶಹಾಬಾದ ಮಂಡಲದ ಪ್ರಮುಖರ ಮತ್ತು ಭೂತ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ಈ ಚುನಾವಣೆಯಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಮತ್ತೆ ಸೋಲುತ್ತಾರೆ ಎಂಬ ಭಯದಿಂದ ಅಳಿಯನನ್ನು ಕಣಕ್ಕೆ ಇಳಿಸಿದ್ದಾರೆ ಎಂದು ಲೇವಡಿ ಮಾಡಿದರು.ಅಭಿವೃದ್ಧಿ ಬಗ್ಗೆ ಮಾತನಾಡುವ ಕಾಂಗ್ರೆಸ್‍ನವರು ಬಿಜೆಪಿ ಏನು ಮಾಡಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.ಬಿಜೆಪಿ ಸರ್ಕಾರ ಇದ್ದಾಗ ಕಲ್ಬುರ್ಗಿ ವಿಮಾನ ನಿಲ್ದಾಣಕ್ಕೆ 350 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು, ಕಲಬುರಗಿಯಲ್ಲಿ ದೇಶದ ಅತಿ ದೊಡ್ಡ ಟೇಕ್ಸಟೈಲ್ ಪಾರ್ಕ್ ನಿರ್ಮಿಸಲಾಗುತಿದೆ, ಶಹಾಬಾದನ್ನು ತಾಲೂಕು ಘೋಷಣೆ ಮಾಡಿದ್ದು ಹಾಗೂ ಶಹಾಬಾದ ನಗರಕ್ಕೆ ಕುಡಿಯುವ ನೀರಿನ ಯೋಜನೆ ಕೊಟ್ಟಿದ್ದು ಬಿಜೆಪಿ ಸರ್ಕಾರ. ಶಹಾಬಾದ ರೈಲ್ವೆ ಸ್ಟೇಷನ್ ಅಭಿವೃದ್ಧಿ ಜೊತೆ 2 ಅಂಡರಪಾಸ ನಿರ್ಮಾಣ ಮಾಡಲಾಗುವುದು. ಕಲಬುರಗಿ ಜನತೆಗಾಗಿ ವಿಶೇಷವಾಗಿ 2 ರೈಲುಗಳಿಗೆ ಚಾಲನೆ ನೀಡಲಾಗಿದೆ. ಭಾರತ ಮಾಲಾ ಯೋಜನೆಯಡಿ ಸೂರತ್ ನಿಂದ ಚನೈ ಗೆ ಹೋಗುವ ಎಕ್ಸಪ್ರೆಸ್ ಹೈವೇ ಗಾಗಿ 1500 ಕೋಟಿ ರೂ ಗಳಿಂದ ನಿರ್ಮಾಣ ಇದು ಬಿಜೆಪಿ ಕೊಡುಗೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಸುನಿಲ್ ವಲ್ಯಾಪುರ ಮಾತನಾಡಿ, ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ದೇಶದ ನಾಗರಿಕರಿಗೆ ಜೆಜೆಎಮ, ಕಿಸಾನ್ ಸನ್ಮಾನ, ಉಜ್ವಲ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ನೀಡಿದೆ, ಎಸ್ಸಿ, ಎಸ್‍ಟಿ ಜನಾಂಗಕ್ಕಾಗಿ ಮೀಸಲಿಟ್ಟ ಎಸ್‍ಸಿಪಿ ಟಿಎಸ್‍ಪಿ ಯೋಜನೆಯ ಹಣ ಕಾಂಗ್ರೆಸ್ ದುರುಪಯೋಗ ಮಾಡಿಕೊಂಡಿದೆ ಎಂದರು.

ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, 60 ವರ್ಷಗಳಿಂದ ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್ತಿನವರೆಗೆ ಕಾಂಗ್ರೆಸ್ ಆಳ್ವಿಕೆ ನಡೆಸಿ ದೇಶವನ್ನು ಅದೋಗತಿಗೆ ತೆಗೆದುಕೊಂಡು ಹೋಗಿತ್ತು. ಈ ಹತ್ತು ವರ್ಷಗಳಲ್ಲಿ ಮೋದಿಯವರು ಅಭಿವೃದ್ಧಿಶೀಲ ರಾಷ್ಟ್ರಗಳು ಭಾರತದತ್ತ ನೋಡುವಂತೆ ಮಾಡಿದ್ದಾರೆ. ನರೇಂದ್ರ ಮೋದಿಯವರ 10 ವರ್ಷ ಆಡಳಿತ ಕಾಲದಲ್ಲಿ ಒಂದು ಕಪ್ಪು ಚುಕ್ಕಿಯಂತಹ ಹಗರಣ ನಡೆದಿಲ್ಲ. ನಾ ಕಾವುಂಗ್ ನಾ ಖಾನೆ ದುಂಗಾ ಎಂದು ಶಪಥ ಮಾಡಿ, ಭ್ರμÁ್ಟಚಾರ ರಹಿತ ಸರ್ಕಾರ ನಡೆಸಿದ್ದಾರೆ ಎಂದು ಹೇಳಿದರು.
ಕಲಬುರಗಿ ಗ್ರಾಮೀಣ ಶಾಸಕರಾದ ಬಸವರಾಜ ಮತ್ತಿಮಡು, ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವರಾಜ ಪಾಟೀಲ ರದ್ದೆವಾಡಗಿ, ಕಲಬುರಗಿ ನಗರಾಧ್ಯಕ್ಷ ಚಂದು ಪಾಟೀಲ ಮಾತನಾಡಿದರು.

ಪ್ರಮುಖರಾದ ಶಕುಂತಲಾ ಟೆಂಗಳಿ, ಭಾಗೀರಥಿ ಗುನ್ನಾಪುರ, ನಗರ ಸಭೆಯ ಸದಸ್ಯರಾದ ರವಿ ರಾಠೋಡ, ಪಾರ್ವತಿ ಪವಾರ, ಜಗದೇವ ಸುಬೇದಾರ,ದಿನೇಶ ಗೌಳಿ ವೇದಿಕೆ ಮೇಲೆ ಇದ್ದರು.

ಅಣವೀರ ಇಂಗಿನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಂಡಲ ಅಧ್ಯಕ್ಷ ನಿಂಗಪ್ಪ ಹುಳಗೋಳ ಸ್ವಾಗತಿಸಿದರು, ಬಸವರಾಜ ಬಿರಾದಾರ ನಿರೂಪಿಸಿದರು, ಸಿದ್ರಾಮ ಕುಸಾಳೆ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here