ಬಿಜೆಪಿ ಕಾರ್ಪೊರೇಟರಗಳ ಸಭೆಯಲ್ಲಿ ಆರೋಪ
ಕಲಬುರಗಿ: ಮಹಾನಗರ ಪಾಲಿಕೆಗೆ ಯಾವುದೇ ಅನುದಾನವನ್ನು ಕೊಡದೆ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಇದರ ಹೊಣೆಯನ್ನು ಕಾಂಗ್ರೆಸ್ ಸರ್ಕಾರ ಹೊರಬೇಕಾಗಿದೆ. ಕಾಂಗ್ರೆಸ್ಸಿನ ತಾರತಮ್ಯ ನೀತಿಯನ್ನು ಜನ ಮನಗಂಡಿದ್ದು ಈ ಬಾರಿ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಸಂಸತ್ತಿಗೆ ಕಳುಹಿಸಲು ನಿರ್ಧರಿಸಿದ್ದಾರೆ ಎಂದು ಕಲಬುರಗಿ ಪಾಲಿಕೆಯ ಮೇಯರ್ ವಿಶಾಲ್ ದರ್ಗಿ ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಬಿಜೆಪಿ ಪಾಲಿಕೆ ಸದಸ್ಯರ ಸಭೆಯಲ್ಲಿ ಮಾತನಾಡಿ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಕೊರತೆ ತೀವ್ರವಾಗಿ ಕಾಡುತ್ತಿದ್ದು ತಕ್ಷಣದಲ್ಲಿ ಎರಡು ಬೋರ್ ವೆಲ್ ಗಳನ್ನು ಶರಣಬಸವೇಶ್ವರ ಕೆರೆಯ ಪಕ್ಕದಲ್ಲಿ ಕೊರೆಯಲು ಸಂಸದರು ನೆರವಾಗಬೇಕು. ಕುಡಿಯುವ ನೀರಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗದಿರುವುದರಿಂದ ಮುಖ್ಯಮಂತ್ರಿಗಳು ಕೂಡ ಈ ಬಗ್ಗೆ ಆದೇಶಿಸಿದ್ದಾರೆ. ಕೂಡಲೇ ಉಸ್ತುವಾರಿ ಸಚಿವರು ಮಧ್ಯೆ ಪ್ರವೇಶಿಸಿ ಗಮನಹರಿಸಬೇಕು ಎಂದರು.
ಮಹಾನಗರ ಪಾಲಿಕೆಯಲ್ಲಿ ಕುಡಿಯುವ ನೀರು ಸೇರಿದಂತೆ ಅನೇಕ ಸಮಸ್ಯೆಗಳಿದ್ದರೂ ಉಸ್ತುವಾರಿ ಸಚಿವರು ಕಣ್ಣೆತ್ತಿಯೂ ನೋಡುವುದಿಲ್ಲ. ಸರಕಾರದಿಂದ ನಯಾ ಪೈಸೆಯನ್ನೂ ಬಿಡುಗಡೆ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್ ಆರೋಪಿಸಿದರು.
ಉತ್ತರ ಮತ್ತು ದಕ್ಷಿಣ ಮತಕ್ಷೇತ್ರದ ಬಿಜೆಪಿಯ ಎಲ್ಲ ಕಾರ್ಪೊರೇಟರ್ ಗಳು ಮತ್ತು ಸ್ಪರ್ಧಿಸಿದ ಅಭ್ಯರ್ಥಿಗಳು ಪಾಲ್ಗೊಂಡು ಒಗ್ಗಟ್ಟನ್ನು ಪ್ರದರ್ಶಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಲೋಕಸಭಾ ಸದಸ್ಯ ಅಭ್ಯರ್ಥಿ ಜಾಧವ್ ಅವರನ್ನು ಬಹುಮತದಿಂದ ಆಯ್ಕೆ ಮಾಡಿ ಅವರನ್ನು ಕೇಂದ್ರ ಸಚಿವರಾಗಿ ಸ್ವಾಗತಿಸಲು ಕಲ್ಬುರ್ಗಿಯ ಜನತೆ ಸಿದ್ಧರಾಗಿದ್ದಾರೆ ಎಂದರು. ಬಿಜೆಪಿಯ ಅವಧಿಯಲ್ಲಿ ಸಾಕಷ್ಟು ಅನುದಾನ ಬಂದು ಪ್ರಗತಿಯನ್ನು ತೀವ್ರಗತಿಯಲ್ಲಿ ಮಾಡಲಾಗಿತ್ತು. ಈಗ ಹಣದ ಕೊರತೆಯಿಂದ ಮುಗ್ಗರಿಸುವಂತಾಗಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರಕಾರಕ್ಕೆ ಅವರ ಪಕ್ಷದ ಶಾಸಕರೇ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಬಿಜೆಪಿ ಬೆಂಬಲಿತ ಪಾಲಿಕೆ ಸದಸ್ಯರು ಒಗ್ಗಟ್ಟಾಗಿ ದುಡಿಯುತ್ತಿರುವುದು ಸಂತಸ ಮೂಡಿಸಿದೆ. ಈ ಬಾರಿ ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಜಾಧವ್ ಗೆಲುವಿನ ಪತಾಕೆ ಹಾರಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ಪಾಲಿಕೆ ಸದಸ್ಯರು ಒಗ್ಗಟ್ಟಿನಿಂದ ದುಡಿಯುವುದೇ ಬಿಜೆಪಿಯ ಗೆಲುವಿನ ಗುಟ್ಟು ಅಗಲಿದೆ ಎಂದು ಹೇಳಿದರು
ಮಹಾನಗರ ಪಾಲಿಕೆಯಲ್ಲಿ ಕುಡಿಯುವ ನೀರು ಸೇರಿದಂತೆ ಅನೇಕ ಸಮಸ್ಯೆಗಳಿದ್ದರೂ ಉಸ್ತುವಾರಿ ಸಚಿವರು ಕಣ್ಣೆತ್ತಿಯೂ ನೋಡದೆ ಸರಕಾರದಿಂದ ನಯಾ ಪೈಸೆಯನ್ನೂ ಬಿಡುಗಡೆ ಮಾಡದೇ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರನ್ನು ಕಾಲೆಳೆದಿದ್ದಾರೆ.
ಬಿಜೆಪಿಯ ಜಿಲ್ಲಾ ಕಛೇರಿಯಲ್ಲಿ ಮಾರ್ಚ್ ಎರಡರಂದು ಮಂಗಳವಾರ ನಡೆದ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಗಳ ಸಭೆಯಲ್ಲಿ ಮಾತನಾಡಿ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಎಲ್ಲೆಡೆ ಕಂಡು ಬಂದಿದ್ದು ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತಗೊಂಡಿದೆ. ಹೀಗಿದ್ದರೂ ಉಸ್ತುವಾರಿ ಸಚಿವರು ತಮ್ಮ ಅಳಿಯನನ್ನು ಗೆಲ್ಲಿಸುವುದರಲ್ಲಿ ಮಾತ್ರ ಮಗ್ನರಾಗಿದ್ದು ಸಮಸ್ಯೆಗಳಿಗೆ ಸ್ಪಂದಿಸದ ನಿರರ್ಥಕ ಉಸ್ತುವಾರಿ ಸಚಿವರು ಎಂಬ ಹಣೆ ಪಟ್ಟಿ ಬಿದ್ದಿದೆ ಎಂದು ತೀವ್ರವಾಗಿ ಖಂಡಿಸಿದರು.
ಉತ್ತರ ಮತ್ತು ದಕ್ಷಿಣ ಮತಕ್ಷೇತ್ರದ ಬಿಜೆಪಿಯ ಎಲ್ಲ ಕಾರ್ಪೊರೇಟರ್ ಗಳು ಮತ್ತು ಸ್ಪರ್ಧಿಸಿದ ಅಭ್ಯರ್ಥಿಗಳು ಪಾಲ್ಗೊಂಡು ಒಗ್ಗಟ್ಟನ್ನು ಪ್ರದರ್ಶಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಲೋಕಸಭಾ ಸದಸ್ಯ ಅಭ್ಯರ್ಥಿ ಜಾಧವ್ ಅವರನ್ನು ಬಹುಮತದಿಂದ ಆಯ್ಕೆ ಮಾಡಿ ಅವರನ್ನು ಕೇಂದ್ರ ಸಚಿವರಾಗಿ ಸ್ವಾಗತಿಸಲು ಕಲ್ಬುರ್ಗಿಯ ಜನತೆ ಸಿದ್ಧರಾಗಿದ್ದಾರೆ ಎಂದರು.
ಬಿಜೆಪಿಯ ಅವಧಿಯಲ್ಲಿ ಸಾಕಷ್ಟು ಅನುದಾನ ಬಂದು ಪ್ರಗತಿಯನ್ನು ತೀವ್ರಗತಿಯಲ್ಲಿ ಮಾಡಲಾಗಿತ್ತು ಈಗ ಹಣದ ಕೊರತೆಯಿಂದ ಮುಗ್ಗರಿಸುವಂತಾಗಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಜನಪ್ರಿಯತೆಯನ್ನು ಕಂಡು ಕಾಂಗ್ರೆಸ್ ತತ್ತರಿಸಿ ಹೋಗಿದೆ. ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರಕಾರಕ್ಕೆ ಅವರ ಪಕ್ಷದ ಶಾಸಕರೇ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಪಾಲಿಕೆ ಸದಸ್ಯರ ಒಗ್ಗಟ್ಟು ಬಿಜೆಪಿ ಗೆಲುವಿನ ಗುಟ್ಟು: ಚಂದು ಪಾಟೀಲ್: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಬಿಜೆಪಿ ಬೆಂಬಲಿತ ಪಾಲಿಕೆ ಸದಸ್ಯರು ಒಗ್ಗಟ್ಟಾಗಿ ದುಡಿಯುತ್ತಿರುವುದು ಸಂತಸ ಮೂಡಿಸಿದೆ. ಈ ಬಾರಿ ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಅಭಿವೃದ್ಧಿಯ ಹರಿಕಾರ ಜಾಧವ್ ಗೆಲುವಿನ ಪತಾಕೆ ಹಾರಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ಪಾಲಿಕೆ ಸದಸ್ಯರು ಒಗ್ಗಟ್ಟಿನಿಂದ ದುಡಿಯುವುದೇ ಗೆಲುವಿನ ಗುಟ್ಟು ಅಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡಾ. ಉಮೇಶ್ ಜಾಧವ್ ಮಾತನಾಡಿ ನೀರಿನ ಸಮಸ್ಯೆ ಬಗ್ಗೆ ಪಾಲಿಕೆ ಆಯುಕ್ತರು ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದರು.
ಮಹಾನಗರ ಪಾಲಿಕೆ ಸದಸ್ಯರ ಬೆಂಬಲದಿಂದ ಕಳೆದ ಚುನಾವಣೆಯಲ್ಲಿ ಅದ್ಭುತ ಜಯ ಸಾಧಿಸಲು ಸಾಧ್ಯವಾಗಿದೆ. ಈ ಬಾರಿಯ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಿ ಪ್ರಧಾನಿ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸಲು ಮತ್ತು ಅಭಿವೃದ್ಧಿಯ ಹೊಸ ಯುಗ ಆರಂಭಿಸಲು ಎಲ್ಲರೂ ಪ್ರಾಮಾಣಿಕವಾಗಿ ದುಡಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಮೇಯರ್ ಶಿವಾನಂದ ಪಿಸ್ತಿ, ಬಿಜೆಪಿ ಮುಖಂಡರಾದ ಮಹಾದೇವ ಬೆಳಮಗಿ, ಶಿವಯೋಗಿ ನಾಗನಹಳ್ಳಿ,ಕೃಷ್ಣ ನಾಯಕ್, ಉಮೇಶ್ ಪಾಟೀಲ್, ಶ್ರೀನಿವಾಸ ದೇಸಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು