ಗೊಬ್ಬರ ಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಪ್ರಶಸ್ತಿ ಪ್ರದಾನ

0
88

ಅಫಜಲಪುರ: ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ್ ಬಿ ವಿವಿಧ ವೃಂದದ ಸಿಬ್ಬಂದಿಗಳಿಗೆ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮದಡಿಯಲ್ಲಿ ಉತ್ತಮ ಸಾಧನೆ ನೀಡಿದ ವಿವಿಧ ವೃಂದದಲ್ಲಿ ಒಬ್ಬರನ್ನು ಗುರುತಿಸಿ ಅಭಿನಂದನಾ ಪತ್ರ, ಹಾಗೂ ಪದಕಗಳ ನೀಡುವ ಮೂಲಕ ಸನ್ಮಾನಿಸಲಾಯಿತು.

ಇನ್ನೂ ಹೆಚ್ಚಿನ ಸಾಧನೆ ಕೈಗೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಅಧಿಕಾರಿಗಳು, ತಾಲೂಕ ಆರೋಗ್ಯ ಅಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು ಗೊಬ್ಬುರ್ ಬಿ ಉತ್ತಮ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ, ಪದಕ, ಸನ್ಮಾನಗಳೊಂದಿಗೆ ಗೌರವಿಸಿದರು.

Contact Your\'s Advertisement; 9902492681

ಪ್ರಶಸ್ತಿ ಪ್ರಧಾನವನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ. ರವಿಕುಮಾರ್ ಬಿರಾದಾರ್, ಹಾಗೂ ಗೊಬ್ಬರ ಬಿ. ಆಡಳಿತ ವೈದ್ಯಾಧಿಕಾರಿಗಳಾದ ಡಾ. ಅಪರ್ಣ ಭದ್ರಶೆಟ್ಟಿ , ಡಾ. ದೇವರಾಜ್ ಎಸ್ ಪ್ರಸಾದ್ ಅವರುಗಳ ನೇತೃತ್ವದಲ್ಲಿ ನೀಡಲಾಯಿತು.

ಲಕ್ಷ್ಮಿಕಾಂತ್ ಲಾಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಶರಣು ದೊಡ್ಡಮನಿ ಸಮುದಾಯ ಆರೋಗ್ಯ ಅಧಿಕಾರಿಗಳು, ಪುಷ್ಪ ಕಿರಿಯ ಆರೋಗ್ಯ ಪ್ರಯೋಗಶಾಲಾ ತಂತ್ರಜ್ಞರು, ವೀರಮ್ಮ ಪ್ರಾಥಮಿಕ ಆರೋಗ್ಯ ಕಾಳಜಿ ಅಧಿಕಾರಿಗಳು, ಆಶಾ ಕಾರ್ಯಕರ್ತರಾದ ಭಾಗ್ಯಶ್ರೀ, ಹುಲಿಗೆಮ್ಮ ಅಭಿನಂದನ ಪ್ರಮಾಣ ಪತ್ರ ಸನ್ಮಾನ್ಯ ಸ್ವೀಕರಿಸಿದರು.

ಉತ್ತಮ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಬಳೆ ಹಾಗೂ ಉತ್ತಮ ಮೇಲ್ವಿಚಾರಕ ಸೈಯದ್ ಅಸರ್ ಹಾಶ್ಮಿ, ಆರೋಗ್ಯ ನಿರೀಕ್ಷಣಾಧಿಕಾರಿ ಉದಯಕುಮಾರ್, ಪ್ರಿಯಾ ಪ್ರಾಥಮಿಕ ಆರೋಗ್ಯ ಕಾಳಜಿ ಅಧಿಕಾರಿ, ಗಿರೀಶ್ ಕಾಮ ಶೆಟ್ಟಿ ಸಮುದಾಯ ಆರೋಗ್ಯ ಅಧಿಕಾರಿ , ಶೋಭಾ ಬ್ಯಾಲಿಹಾಳ್, ರವಿ ಶುಶ್ರುತ ಅಧಿಕಾರಿಗಳು, ಎನ್ ಸುಧಾಕರ್ ಆಪ್ತ ಸಮಾಲೋಚಕರು, ರಾಜು ಹಸರಗುಂಡಗಿ ಪರಿಚಾರಕರು ಪದಕ ಪಡೆದು ಭಾಜನರಾದರು. ಮೊದಲ ತಂಡದವರಿಗೆ ಅಭಿನಂದನಾ ಪ್ರಮಾಣಪತ್ರ ಹಾಗೂ ಎರಡನೇ ತಂಡದವರಿಗೆ ಪದಕ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಸದರಿ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಎಲ್ಲಾ ಕ್ಷೇತ್ರ ಸಿಬ್ಬಂದಿಗಳು, ಕೇಂದ್ರ ಸ್ಥಾನದ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here