ಬಾಬು ಜಗಜೀವನ್ ರಾಮ್ ಕನಸಿನ ಭಾರತ ನಿರ್ಮಾಣವೇ ನನ್ನ ಗುರಿ: ಸಂಸದ ಡಾ. ಜಾಧವ್

0
15

ಕಲಬುರಗಿ: ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಅವರು ದೇಶದಲ್ಲಿ ಪರಿವರ್ತನೆಯ ಸಮಾಜವನ್ನು ಹುಟ್ಟು ಹಾಕಲು ತಮ್ಮ ಬದುಕನ್ನು ಮುಡಿಪಾಗಿಟ್ಟ ಮಹಾನ್ ನಾಯಕರಾಗಿದ್ದು ಅವರ ಕನಸಿನ ಭಾರತ ನಿರ್ಮಾಣ ನನ್ನ ಗುರಿ ಹಾಗೂ ನನ್ನ ರಾಜಕೀಯ ನಡೆಗೆ ಅವರ ಆದರ್ಶವೇ ಪ್ರೇರಣೆ ಎಂದು ಲೋಕಸಭಾ ಸದಸ್ಯರಾದ ಹೇಳಿದರು.

ಸಾರ್ವಜನಿಕ ಉದ್ಯಾನವನದ ಲ್ಲಿರುವ ಬಾಬು ಜಗಜೀವನ್ ರಾಮ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ 117ನೇ ಜಯಂತ್ಯುತ್ಸವದ ಸಂದೇಶ ನೀಡಿ ದೇಶದಲ್ಲಿ ಶೋಷಿತ ವರ್ಗದ ಆಶಾಕಿರಣವಾಗಿ ಸರ್ವರ ಅಭಿವೃದ್ಧಿಗಾಗಿ ತಮ್ಮ ಇಡೀ ಜೀವಮಾನವನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿದ ಭಾರತದ ಅತ್ಯಂತ ಶ್ರೇಷ್ಠ ರಾಜಕಾರಣಿಯಾಗಿದ್ದು ಅವರು ಹಾಕಿದ ಆದರ್ಶ ರಾಜಕೀಯದಲ್ಲಿರುವವರಿಗೆ ಕೈ ದೀವಿಗೆಯಾಗಬೇಕು.ನನ್ನ ಬಾಳಿನಲ್ಲಿ ಬಾಬು ಜಗಜೀವನ್ ರಾಮ್ ಅವರ ಕಾರ್ಯಗಳ ಪ್ರೇರಣೆ ನೀಡಿದೆ. ರಾಜಕೀಯದಲ್ಲಿ ಬೆಳೆಯಲು ಅವರ ಆದರ್ಶ ಕಾರಣವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಬಾಬು ಜಗಜೀವನ್ ರಾಮ್ ಅವರು ಮುಖ್ಯವಾಗಿ ಸಂಪರ್ಕ ಖಾತೆಯ ಸಚಿವರಾಗಿ ಹಳ್ಳಿ ಹಳ್ಳಿಗಳಲ್ಲಿ ಅಂಚೆ ಕಚೇರಿಗಳನ್ನು ತೆರೆದು ಜನರಿಗೆ ನೆರವಾದರು. ರೈಲ್ವೆ ಖಾತೆಯ ಸಚಿವರಾಗಿ ಜನಸಾಮಾನ್ಯರಿಗೆ ರೈಲು ಅತ್ಯಂತ ನಿಕಟವರ್ತಿ ಸಾರಿಗೆ ವ್ಯವಸ್ಥೆಯಾಗಿ ಬೆಳೆಸಿದರು. ಕೃಷಿ ಸಚಿವರಾಗಿ ಇಡೀ ಭಾರತದಲ್ಲಿ ಹಸಿರು ಕ್ರಾಂತಿಯ ಮೂಲಕ ಅದ್ಭುತ ಸಾಧನೆಯನ್ನು ಮಾಡಿದ ಮಹಾನ್ ಮುತ್ಸದ್ಧಿ ರಾಜಕಾರಣಿ. ಕೇಂದ್ರ ಸರಕಾರದಲ್ಲಿ ಸುಮಾರು 18 ಖಾತೆಗಳನ್ನು ಹೊಂದಿ ಪ್ರತಿ ಖಾತೆಗಳಿಗೆ ನ್ಯಾಯವನ್ನು ಒದಗಿಸಿ ಜನಸಾಮಾನ್ಯರ ಆಶಾಕಿರಣವಾಗಿ ಬೆಳೆದವರು. ಅವರು ತೋರಿದ ಆದರ್ಶದ ಬೆಳಕು ಬಾಬು ಜಗಜೀವನ್ ರಾಮ್ ಕಂಡ ಭಾರತವನ್ನು ಕಟ್ಟಲು ನಾವೆಲ್ಲರೂ ಪ್ರತಿಜ್ಞೆ ತೊಡಬೇಕಾಗಿದೆ ಎಂದು ಹೇಳಿದರು.

ಜಗಜೀವನ್ ರಾಮ್ ಕಂಡ ಕನಸು ಸಾಕಾರಗೊಂಡರೆ ಭಾರತದ ಶೋಷಿತ ಮತ್ತು ಹಿಂದುಳಿದ ಸಮುದಾಯದವರ ಬಾಳು ಹಸನಾಗುವುದರಲ್ಲಿ ಎರಡನೇ ಮಾತಿಲ್ಲ ಎಂದು ಜಾಧವ್ ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಿ ಜಿ ಪಾಟೀಲ್, ಬಸವರಾಜ್ ಮಟ್ಟಿಮೂಡು ಮತ್ತು ವಿಧಾನ ಪರಿಷತ್ ಸದಸ್ಯರಾದ ಶಶಿಲ್ ಜಿ ನಮೋಶಿ ಮತ್ತಿತರ ಅನೇಕ ಗಣ್ಯರು ಜೊತೆಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here