ಮತದಾನ ಜಾಗೃತಿ ಮೂಡಿಸಲು ಅಧಿಕಾರಿಗಳು ಶ್ರಮಿಸಬೇಕು: ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ

0
53

ಕಲಬುರುಗಿ: ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜನರಲ್ಲಿ ಮತದಾನ ಜಾಗೃತಿ ಮೂಡಿಸಲು ಅಧಿಕಾರಿಗಳು ಶ್ರಮಿಸಬೇಕೆಂದು ಕಲಬುರಗಿ ವಿಭಾಗ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಹೇಳಿದರು.

ಸೋಮವಾರದಂದು ಭಾರತ ಚುನಾವಣಾ ಅಯೋಗ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಕಲಬುರಗಿ ೨೦೨೪ ರ ಲೋಕಸಭಾ ಚುನಾವಣಾ ಪ್ರಯುಕ್ತ ಮತದಾನದ ಅರಿವು ಮೂಡಿಸುವ ಚುನಾವಣಾ ಜಾಗೃತಿ ವಾಹಿನಿ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಯಾವ ತಾಲ್ಲೂಕುಗಳಲ್ಲಿ ಮತದಾನದ ಪ್ರಮಾಣ ಕಡಿಮೆ ಇದೆ ಅಲ್ಲಿ ಹೆಚ್ಚಿನ ಮತದಾನ ಮಾಡಲು ಅಧಿಕಾರಿಗಳ ಜಾಗೃತಿ ಮೂಡಿಸಬೇಕೆಂದರು. ಮೇ.೭ ರಂದು ನಡೆಯುವ ಚುನಾವಣೆ ಮತದಾನದ ಹಕ್ಕು ಚಲಾಯಿಸಬೇಕೆಂದರು.

ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಅವರು ಮಾತನಾಡಿ, ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿಯೊಂದು ತಾಲ್ಲೂಕುಗಳು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಮೇ.೭ ರಂದು ನಡೆಯುವ ಚುನಾವಣೆಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಮತದಾರರು ಯಾವುದೇ ಅಮಿಷಕ್ಕೆ ಒಳ್ಳಗಾಗದೇ ನಿರ್ಭಯವಾಗಿ ಮತದಾನ ಮಾಡಬೇಕು ಇನ್ನೂ ಏಪ್ರಿಲ್ ೧೦ ರವರೆಗೆ ಆನ್ ಲೈನ್ ಮುಖಾಂತರ ಮತದಾನದ ಗುರುತಿನ ಚೀಟಿ ಪಡೆಯಲು ಅವಕಾಶವಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಭಂವರ್ ಸಿಂಗ್ ಮೀನಾ ಅವರು ಮಾತನಾಡಿ, ಈಗಾಗಲೇ ಮತದಾನ ಹೆಚ್ಚಿನ ಪ್ರಮಾಣ ಮಾಡಲು ಅನೇಕ ಸ್ವೀಪ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು, ಸಾರ್ವಜನಿಕರು ಸಹಕರಿಸಬೇಕೆಂದರು. ಜಿಲ್ಲೆಯ ೭ ತಾಲ್ಲೂಕುಗಳಿಗೆ ಪ್ರತಿಯೊಂದು ತಾಲೂಕಿನಲ್ಲಿ ಒಂದ ವಾಹನ ಸಂಚರಿಸಲಿದೆ ವಾಹನದಲ್ಲಿ ಚಾಲಕನೊಂದೊಗೆ ಒರ್ವ ಸಿಬ್ಬಂದಿ ಮತದಾನಕ್ಕೆ ಮತ್ತು ಚುನಾವಣೆಗೆ ಸಂಬAಧಿಸಿದ ಮಾಹಿತಿಯನ್ನು ಜನರಿಗೆ ನೀಡಲಿದ್ದಾರೆ.

ವಾಹನವು ಡಿಜಿಟಲ್ ಸ್ಕಿçÃನ್ ಹೊಂದಿರುತ್ತದೆ ವಾಹನದ ಸುತ್ತ ಸಿವಿಜಿಲ್ ಆ್ಯಪ್/ವಿವಿ ಪ್ಯಾಟ್ ಯಂತ್ರ ವಿಸ್ತçತ ಮಾಹಿತಿ/ಮಹಿಳೆಯರಿಗೆ ಮತ್ತು ಅಂಗವಿಕಲರಿಗೆ ಇರುವ ಸೌಲಭ್ಯದ ಮಾಹಿತಿ ಹಾಗೂ ಈ ಚುನಾವಣೆ ಸಂಬAಧಿಸಿದ ಇನ್ನೀತರ ಮಾಹಿತಿಯನ್ನು ಒಳಗೊಂಡಿರುತ್ತದೆ ಎಂದರು.

ಚುನಾವಣೆಗೆ ಸಂಬAಧಿಸಿದ ವಿಡಿಯೋಗಳನ್ನು ಜಾತ್ರೆ./ಸಂತೆ ಹಾಗೂ ಜನಸಂದಣೆ ಇರುವ ಕಡೆಗಳಲ್ಲಿ ಭಿತ್ತರಿಸುವುದರ ಮೂಲಕ ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ ಅದರಲ್ಲೂ ಕಡಿಮೆ ಮತದಾನವಾಗಿರುವ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಮತದಾರರಲ್ಲಿ ಮತದಾನದ ಬಗ್ಗೆ ಹೆಚ್ಚಿನ ಆಸಕ್ತಿ ಅರಿವು ಹಾಗೂ ಜಾಗೃತಿ ಮೂಡಿಸುವ ಸಂಬಂಧ ಸಹಿ ಸಂಗ್ರಹಣೆ ಮಾಡಲು ಸೈನೇಜ್ ಬೋರ್ಡಗಳಿಗೆ ಸೆಲ್ಪ್ಪ್ ಸ್ಟಾö್ಯಂಡ್‌ಗಳಿಗೆ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಮತದಾರರ ಪ್ರತಿಜ್ಞೆ ವಿಧಿ ಬೋಧಿಸಿದರು.

ಮತದಾನ ಜಾಗೃತಿ ವಾಹಿನಿಯೊಳಗೆ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ. ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ವರ ದೇವಿದಾಸ ಪಾಟೀಲ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ವಾಹನದಲ್ಲಿ ಕುಳಿತು ಸರದಾರ ವಲ್ಲಭಬಾಯಿ ಪಟೇಲ್, ಕೋರ್ಟ ರೋಡ್, ಗೋವಾ ಹೊಟೇಲ್ ಜಗತ್ ಸರ್ಕಲ್, ಅನ್ನಪೂರ್ಣ ಕ್ರಾಸ್ ದಿಂದ ಡಿ.ಸಿ ಕಚೇರಿ ಮುಕ್ತಾಯವಾಯಿತು.

ಕಾರ್ಯಕ್ರಮದಲ್ಲಿ ನಗರ ಪೋಲಿಸ್ ಆಯುಕ್ತ ಆರ್.ಚೇತನ್ ಮಹಾನಗರ ಪಾಲಿಕೆ ಆಯುಕ್ತರಾದ ಭುವನೇಶ ದೇವಿದಾಸ ಪಾಟೀಲ, ಉಪ ಆಯುಕ್ತರಾದ ಮಾಧವ ಗಿತ್ತೆ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ, ಹಾಗೂ ಸ್ವೀಪ್ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್, ಪದವಿ ಪೂರ್ವ ಕಾಲೇಜಿನ ಶರಣಪ್ಪ ಮೂಳೆಗಾಂವ, ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here