ನವ ಕರ್ನಾಟಕ ನಿರ್ಮಾಣ ರಾಜ್ಯ ಸರ್ಕಾರದ ಕನಸು; ಸಚಿವ ಪ್ರಿಯಾಂಕ್ ಖರ್ಗೆ

0
24

ಕಲಬುರಗಿ: ನವಕರ್ನಾಟಕದ ನಿರ್ಮಾಣ ನಮ್ಮ ಸರ್ಕಾರ ಉದ್ದೇಶವಾಗಿದೆ. ಯುವಕರಿಗೆ, ಮಹಿಳೆಯರಿಗೆ, ರೈತರಿಗೆ,ಕೂಲಿ ಕಾರ್ಮಿಕರಿಗೆ ಆರ್ಥಿಕ ಸ್ಥಿರತೆ ಹಾಗೂ ಸಾಮಾಜಿಕ ಸಮಾನತೆ ನೀಡುವುದರ ಜೊತೆಗೆ ಸ್ವಾಭಿಮಾನದ ಬದುಕು ಕಲ್ಪಿಸುವ ಕನಸು ನಮ್ಮದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಇಜೇರಿ ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರ ಪರವಾಗಿ ಮತಯಾಚಿಸಿ ಅವರು ಮಾತನಾಡಿದ ಅವರು ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಸಾರ್ವಜನಿಕರಿಗೆ ತಲುಪಿವೆ. ಪರಿಣಾಮವಾಗಿ ಗೃಹಜ್ಯೋತಿ ಯೋಜನೆಯಡಿಯಲ್ಲಿ 5.22 ಲಕ್ಷ ಕುಟುಂಬಗಳಿಗೆ, ಅನ್ನಭಾಗ್ಯ ಯೋಜನೆಯಡಿಯಲ್ಲಿ 19.16 ಲಕ್ಷ ಫಲಾನುಭವಿಗಳಿಗೆ ಹಾಗೂ ಯುವನಿಧಿ ಯೋಜನೆಯಡಿಯಲ್ಲಿ ಸುಮಾರು 20,000 ಫಲಾನುಭವಿಗಳಿಗೆ ಮಾಸಿಕ ರೂ 1500 ರಿಂದ 3000 ವರೆಗೆ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ರೂ 52,000 ಕೋಟಿ ಬೇಕಾಗುತ್ತದೆ. ಆದರೂ ಕೂಡಾ ರಾಜ್ಯ ಸರ್ಕಾರ ವಿಚಲಿತವಾಗದೇ ಜನರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತಿದೆ ಎಂದರು.

Contact Your\'s Advertisement; 9902492681

ಬಿಜೆಪಿ ಜೊತೆಗೆ ಹೊಸದಾಗಿ ಮದುವೆ ಮಾಡಿಕೊಂಡಿರುವ ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿದ್ದಾರೆ. ಜೆಡಿಎಸ್ ಮತ್ತೊಬ್ಬ ಶಾಸಕ ಜಿ.ಟಿ.ದೇವೇಗೌಡ ಇದನ್ನು ಭಯೋತ್ಪಾದನೆ ಎಂದಿದ್ದಾರೆ. ಜನರಿಗೆ ಆರ್ಥಿಕ ಸಬಲತೆ ತರುವ ಸದುದ್ದೇಶದಿಂದ ಕಟ್ಟುನಿಟ್ಟಾಗಿ ತಲುಪಿಸಿದ ಯೋಜನೆಗಳ ಬಗ್ಗೆ ಹೊಟ್ಟೆ ಉರಿಯಿಂದಾಗಿ ಇವರೆಲ್ಲ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

ರಾಧಾಕೃಷ್ಣ ಅವರು ಮೃದು ಮಾತಿನವ್ಯಕ್ತಿಯಾಗಿದ್ದು ನೀವೆಲ್ಲ ಅವರಿಗೆ ಆಶೀರ್ವಾದ ನೀಡಿದರೆ ಟ್ರಿಪಲ್ ಗ್ಯಾರಂಟಿ ಆಗುತ್ತದೆ. ರಾಜ್ಯಸಭೆಯಲ್ಲಿ ಖರ್ಗೆ ಸಾಹೇಬರು, ಲೋಕಸಭೆಯಲ್ಲಿ ರಾಧಾಕೃಷ್ಣ ಅವರು ಹಾಗೂ ವಿಧಾನಸಭೆಯಲ್ಲಿ ಡಾ ಅಜಯ್ ಸಿಂಗ್ ಇರುತ್ತಾರೆ ಎಂದರು.

ಅಭ್ಯರ್ಥಿ ರಾಧಾಕೃಷ್ಣ ಅವರು ಮಾತನಾಡಿ ಈ ಸಲದ ಚುನಾವಣೆ ಅಭಿವೃದ್ದಿ ವಿಚಾರದ ಚುನಾವಣೆಯಾಗಿದೆ. ಸಂಸದನನ್ನಾಗಿ ತಮ್ಮನ್ನು ಆಯ್ಕೆ ಮಾಡಿದರೆ ದೆಹಲಿಯಲ್ಲಿ ನಿಮ್ಮ ಸೇವೆ ಮಾಡುತ್ತೇನೆ ಎಂದರು.

ಕೆಕೆಆರ್ ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ ಅಜಯ್ ಸಿಂಗ್ ಮಾತನಾಡಿ ಈ ಸಲದ ಲೋಕಸಭೆ ಚುನಾವಣೆ ಧರ್ಮ ಹಾಗೂ ಅಧರ್ಮದ, ಸುಳ್ಳು ಹಾಗೂ ಸತ್ಯದ ಮತ್ತು ನ್ಯಾಯ ಹಾಗೂ ಅನ್ಯಾಯದ ನಡುವಿನ ಚುನಾವಣೆಯಾಗಿದೆ. ಬಿಜೆಪಿಯವರು ಸುಳ್ಳುಗಳನ್ನೇ ಹೇಳುತ್ತಾ ದೇಶದ ಜನರಿಗೆ ಅನ್ಯಾಯ ಮಾಡಿದೆ. ಹಾಗಾಗಿ ಈ ಸಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಎಂದು ಮನವಿ ಮಾಡಿದರು.

ವೇದಿಕೆಯ ಮೇಲೆ ಶಾಸಕ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರು, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here