ಲೋಕಸಭೆ ಚುನಾವಣೆ: ಸಾಮಾನ್ಯ ವೀಕ್ಷಕರ ಸಮಕ್ಷಮ 270 ಮೈಕ್ರೋ ವೀಕ್ಷಕರಿಗೆ ಕ್ಷೇತ್ರ ಹಂಚಿಕೆ

0
14

ಕಲಬುರಗಿ: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕ್ರಿಟಿಕಲ್, ವಲನರೇಬಲ್ ಮತಗಟ್ಟೆಯಲ್ಲಿ ಮತದಾನ ಕಾರ್ಯದ ಮೇಲೆ‌ ನಿಗಾ ವಹಿಸಲು ನಿಯೋಜನೆಗೊಂಡ 270 ಮೈಕ್ರೋ ವೀಕ್ಷಕರಿಗೆ ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಕಾರ್ಯ ಶುಕ್ರವಾರ ಗುಲಬರ್ಗಾ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ದೀಪನಕರ್‌ ಸಿನ್ಹಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ಅವರ ಸಮಕ್ಷಮದಲ್ಲಿ ಬ್ಯಾಂಕ್, ಸಿ.ಯು.ಕೆ ಸೇರಿದಂತೆ ಕೇಂದ್ರ ಸರ್ಕಾರದ ಉದ್ಯೋಗಿಗಳನ್ನು ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಕ್ಕೆ ತಲಾ 25 ಜನ ಅಧಿಕಾರಿ-ಸಿಬ್ಬಂದಿಗಳನ್ನು ಮೈಕ್ರೋ ವೀಕ್ಷಕರನ್ನಾಗಿ ನೇಮಿಸಲಾಯಿತು. ಇದಲ್ಲದೆ ಪ್ರತಿ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ತಲಾ 5 ಜನ ಸಿಬ್ಬಂದಿಗಳನ್ನು ಸಹ ಮೀಸಲಿಡಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ಸಮಾನ್ಯ ವೀಕ್ಷಕ ದೀಪನಕರ್ ಸಿನ್ಹಾ, ಇ.ಸಿ.ಐ. ಮಾರ್ಗಸೂಚಿಯಂತೆ ಕ್ಷೇತ್ರದ ನಿವಾಸಿಯಲ್ಲದವರನ್ನು ಮೈಕ್ರೋ ವೀಕ್ಷಕರನ್ನಾಗಿ ಮಾಡಬೇಕು. ಕ್ಷೇತ್ರವಾರು ಹಂಚಿಕೆಯಾದ ಮೈಕ್ರೋ ವೀಕ್ಷಕರಿಗೆ ಸೂಕ್ತ ತರಬೇತಿ ನೀಡುವಂತೆ ತಿಳಿಸಿದರು.

ಆದೇಶ ಪತ್ರ ಇಂದೇ ತಲುಪಿಸಿ: ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ‌ ಮೈಕ್ರೋ ವೀಕ್ಷಕರಿಗೆ ಇಂದೇ ದೂರವಾಣಿ ಕರೆ ಮಾಡಿ ಆದೇಶ ಪತ್ರ ತಲುಪಿಸಿ ತರಬೇತಿಯಲ್ಲಿ ಭಾಗವಹಿಸುವಂತೆ ತಿಳಿಸಬೇಕು ಎಂದು ಜಿಲ್ಲಾ ಲೀಡ್ ಬ್ಯಾಂಕ್‌ ಮ್ಯಾನೇಜರ್ ಸದಾಶಿವ ರಾತ್ರಿಕರ್ ಅವರಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಪರ ಅಯುಕ್ತ ಡಾ.ಆಕಾಶ ಶಂಕರ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಶಾಲಾ ಶಿಕ್ಷಣ (ಪದವಿ ಪೂರ್ವ) ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ತರಬೇತಿ ನೋಡಲ್ ಅಧಿಕಾರಿ ಹಿರೇಮಠ, ಸಾಮಾನ್ಯ ವೀಕ್ಷಕರ ನೋಡಲ್ ಅಧಿಕಾರಿ ಮತ್ತು ಡಿ.ಐ.ಸಿ. ಜಂಡಿ ನಿರ್ದೇಶಕ ಎಂ.ಸತೀಷಕುಮಾರ ಇದ್ದರು. ಎನ್.ಐ.ಸಿ. ಅಧಿಕಾರಿ ಪ್ರಮೋದ್ ಅವರು ಮೈಕ್ರೋ ವೀಕ್ಷಕರ ಹಂಚಿಕೆ ಪ್ರಕ್ರಿಯೆ ಬಗ್ಗೆ ಸಾಮಾನ್ಯ ವೀಕ್ಷಕರಿಗೆ ಮಾಹಿತಿ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here