ಸನ್ಮಾನ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ

0
16

ಕಲಬುರಗಿ: ನಗರದ ಮಕ್ತಂಪುರ್ ಬಡಾವಣೆಯಲ್ಲಿ ಬಸವಣ್ಣ ಸೇವಾ ಸಮಿತಿ ಟ್ರಸ್ಟ್ ಹಾಗೂ ಬಿ ಎಸ್ ಎಸ್ ವೈ ಯೂತ್ ಗ್ರೂಪ್ ಮಕ್ತಂಪುರ್ ವತಿಯಿಂದ ಬಸವಣ್ಣ ಗುಡಿ ಕಟ್ಟಡ ನಿರ್ಮಾಣಕ್ಕೆ ಬೀಣಿಗೆಯನ್ನು ಕೊಟ್ಟಂತಹ ದಾನಿಗಳನ್ನು ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಗಣ್ಯರಿಂದ ಉದ್ಘಾಟಿಸಲಾಯಿತು.

ಟ್ರಸ್ಟಿನ ಅಧ್ಯಕ್ಷ ಶಾಂತಕುಮಾರ್ ಬಿ ಬಿಲಗುಂದಿ ಹಾಗೂ ಟ್ರಸ್ಟ್ ನ ಎಲ್ಲಾ ಸದಸ್ಯರುಗಳ ನೇತೃತ್ವದಲ್ಲಿ ಒಟ್ಟು 250 ಜನ ದೇಣಿಗೆ ಕೊಟ್ಟ ಸದಸ್ಯರುಗಳಿಗೆ ಸನ್ಮಾನಿಸಲಾಯಿತು. ಹಾಗೂ ಎಚ್ ಕೆ ಸಂಸ್ಥೆಯ ಉಪಾಧ್ಯಕ್ಷ ಆಯ್ಕೆಯಾದ ರಾಜು ಬಸವರಾಜ್ ಭೀಮಳ್ಳಿ, ಎಚ್ ಕೆ ಸಂಸ್ಥೆಯ ಸದಸ್ಯ ನಾಗರಾಜ್ ಘಂಟಿ ಇವರನ್ನು ಬಸವಣ್ಣ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ವಿಶೇಷ ಸನ್ಮಾನಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಬಡಾವಣೆಯ ಗುರುಬಸವ ಬ್ರಹ್ಮನಮಠದ ಪೀಠಾಧಿಪತಿಗಳಾದಂತ ಪರಮಪೂಜ್ಯ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಶಿವನಂದ ಮಹಾಸ್ವಾಮಿಗಳು ಹಾಗೂ ಗದ್ದುಗೆ ಮಠದ ಪೀಠಾಧಿಪತಿಗಳಾದ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಚರಲಿಂಗ ಮಹಾಸ್ವಾಮಿಗಳು ಮರ್ತೂರು ಗ್ರಾಮದ ಶ್ರೀಗಳು ಇವರು ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದರು.

ಶಾಸಕ ಅಲ್ಲಮಪ್ರಭು ಪಾಟೀಲ್, ಎಚ್ ಕೆ ಇ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಬಸವರಾಜ್ ಭೀಮಳ್ಳಿ, ಡಾ.ಭೀಮಾಶಂಕರ್ ಬಿಲಗುಂದಿ, ಖ್ಯಾತ ಉದ್ದಿಮೆದಾರರಾದ ಅಕ್ಷಯ್ ರಾಮ್ ಪವಾರ್, ಪ್ರಹ್ಲಾದ್ ಲಡ್ಡ, ಪಾಲಿಕೆಯ ಸದಸ್ಯ ವಿಜಯ್‍ಕುಮಾರ್ ಸೇವಲಾನಿ, ಟ್ರಸ್ಟಿನ ಅಧ್ಯಕ್ಷ ಶಾಂತಕುಮಾರ್ ಬಿ ಬಿಲಗುಂದಿ, ಉಪಾಧ್ಯಕ್ಷ ಅಣವೀರಪ್ಪ ಕಾಳಗಿ, ಕಾರ್ಯದರ್ಶಿ ರೇಣುಕಾನಂದ್ ಚೌದರಿ, ಕೋಶ್ಯಾಧ್ಯಕ್ಷ ಶಿವಶಂಕರ್ ಹೊಸಗೌಡ್ರು, ಡಾ. ಜಗನ್ನಾಥ್ ಬಿಜಾಪುರ್, ನಾಗರಾಜ್ ಖೂಬಾ, ಚಂದ್ರಕಾಂತ ಕೂಬಾ, ಬಾಬುಗೌಡ ಪಾಟೀಲ್ ಹೊಳೆ, ಶಿವರಾಜ್ ಕುಬಾ, ಸಂಗಪ್ಪ ಉದನೂರ, ಬಾಬುರಾವ್ ನಂದ್ಯಾಳ್, ಜಗನ್ನಾಥ್ ಮಂದ್ಯಾಳ, ಟ್ರಸ್ಟಿನ ಸರ್ವ ಸದಸ್ಯರ ಹಾಗೂ ಬಿ ಎಸ್ ಎಸ್ ವೈ ಯೂತ್ ಗ್ರೂಪ್ ಅಧ್ಯಕ್ಷ ಚಂದ್ರಕಾಂತ್ ಆರ್ ಕಾಳಗಿ, ಸಂಗಮೇಶ ನಂದ್ಯಾಳ, ವಿಕಾಸ್ ನಾಗೂರ್, ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಸತೀಶ್ ಗೌಳಿ, ಸಚಿನ್ ನಂದ್ಯಾಳ್ ಉಪಾಧ್ಯಕ್ಷರಾದ ಗಜಾನನ ಗಂಗಸಿರಿ ಪ್ರಕಾಶ್ ಕಾಚರೆ ಕಾರ್ಯದರ್ಶಿ ಗಜಾನನ್ ಗೌಳಿ ಕೋಶಾಧ್ಯಕ್ಷರಾದ ಶಿವಂ ಉದನೂರು ಅಂಬರೀಶ್ ಬೂಸನೂರ್ ಭಾಗ್ಯವಂತ ಉಪಲಿ ಬಸವರಾಜ್ ಕೆಮ್‍ಶೆಟ್ಟಿ ಶರಣ್ ಹುಂಡೆ ಕರ್, ವೀರೇಶ್ ಹೊಂಡೇಕರ್, ವಿಶ್ವನಾಥ್ ನಂದ್ಯಾಳ್, ವಿಜಯಕುಮಾರ್ ನಂದ್ಯಾಳ್, ಸತೀಶ್ ಹಳ್ಳ, ರೋಹಿತ್ ನಂದ್ಯಾಳ, ಸಂಕೇತ, ಮಲ್ಲು ಸೇರಿದಂತೆ ಟ್ರಸ್ಟಿನ ಸರ್ವ ಸದಸ್ಯರು, ಬಡಾವಣೆಯ ಮಹಿಳೆರು, ಮುಖಂಡರು, ಯುವಕರು ಇದ್ದರು. ಚನ್ನಮ್ಮ ಜೀವಣಗಿ ಸಂಗಡಿಗರಿಂದ ಸ್ವಾಗತ ಗೀತೆ ಹಾಡಿದರು. ಸದಸ್ಯರನ್ನು ಚಂದ್ರಕಾಂತ ಆರ್ ಕಾಳಗಿ ಸ್ವಾಗತಿಸಿದರು. ಆರ್ ಜೆ ಮಂಜು ಹಿರೋಳಿ ಅವರು ನಿರೂಪಣೆ ನೀಡಿದರು. ಗುಂಡಣ್ಣ ಡಿಗ್ಗಿ ಕಲಾವಿದರಿಂದ ನಗೆ ಹನಿ ಕಾರ್ಯಕ್ರಮ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here