ಬೈಕ್ ಮತ್ತು  ಬಸ್ ಢಿಕ್ಕಿ: ಮೂವರು ಯುವಕರು ಸ್ಥಳದಲ್ಲೇ ಸಾವು

0
37

ಕಲಬುರಗಿ: ಸಾರಿಗೆ ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಒಂದೇ ಗ್ರಾಮದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ತೀರುವು ಹತ್ತಿರ ಸೋಮವಾರ ನಡೆದಿದೆ.

ಕಿಣ್ಣಿ ಸಡಕ್ ಗ್ರಾಮ ಸಮೀರ್ ಜಮೀರ್ ಅಹ್ಮದ್, ಚಂದು ಹಾಗೂ ಕೌಶಿಕ್ ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಕಿಣ್ಣಿ ಸಡಕ್ ಗ್ರಾಮದಿಂದ ಕಮಲಾಪುರ ತಾಲ್ಲೂಕಿಗೆ ಆಧಾರ ಕಾರ್ಡ್ ಮಾಡಿಸಲು ತೆರಳುವ ವೇಳೆ ಭೀಖರ ಅಪಘಾತ ಸಂಭವಿಸಿ ಈ ದುರ್ಘಟನೆ ನಡೆದಿದೆ.

Contact Your\'s Advertisement; 9902492681

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡಸಿದ್ದು. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here