ರಾಧಾಕೃಷ್ಣ ದೊಡ್ಡಮನಿ ಗೆಲುವಿಗೆ ತೀರುವು ತಂದುಕೊಟ್ಟ ಕಲಬುರಗಿ ಉತ್ತರ ಮತಕ್ಷೇತ್ರ

0
340
-ಸಾಜಿದ್ ಅಲಿ

ಕಲಬುರಗಿ: ತೀರ ಜಿದ್ದಾಜಿದ್ದಾಯಾಗಿದ ಗುಲಬರ್ಗಾ (ಮೀಸಲು) ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು 652321 ಮತಗಳು ಪಡೆದು 27205 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ವಿರುದ್ಧ ಅಭೂತಪೂರ್ವ ಗೆಲುವು ಸಧಿಸಿದ್ದಾರೆ. ಈ ಗೆಲುವಿನ ಹಿಂದೆ ಅತಿ ಹೆಚ್ಚು ಮುಸ್ಲಿಂ ಮತದಾರರು ಇರುವ ಕಲಬುರಗಿ ಉತ್ತರ ಮತಕ್ಷೇತ್ರದ ಮುಸ್ಲಿಮರ್ ಒಮ್ಮತ ಮತಗಳಿಂದ 51 ಸಾವಿರ ಲೀಡ್ ಬಂದಿದೆ ಎಂಬ ರಾಜಕೀಯವ ವಿಶ್ಲೇಕರ ಲೆಕ್ಕಚಾರವಾಗಿದೆ.

ರಾಧಕೃಷ್ಣ ದೊಡ್ಡಮನಿ ಗೆಲುವಿಗಾಗಿ ಮತ ನೀಡಿದ ಎಲ್ಲಾ ಮತದಾರರಿಗೆ ಧನ್ಯವಾದ. ನನ್ನ ಕ್ಷೇತ್ರದ ಜನರು ದಿವಂಗತ ಮಾಜಿ ಸಚಿವ ಖಮರ್ ಉಲ್ ಇಸ್ಲಾಂ ಮತ್ತು ನನ ಮೇಲೆ ಇಟ್ಟಿರುವ ವಿಶ್ವಾಸದ ಫಲವಾಗಿ ಈ ಅಭೂತಪೂರ್ವ ಗೆಲುವು ಸಿಕ್ಕಿದೆ. ಡಾ. ಮಲ್ಲಿಕಾರ್ಜುನ್ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಪಕ್ಷದ ಅಭಿವೃದ್ಧಿಯ ಮೇಲೆ ವಿಶ್ವಾಸವಿಟ್ಟು ರಾಧಕೃಷ್ಣ ದೊಡ್ಡಮನಿ ಅವರಿಗೆ ಭಾರಿ ಬಹುಮತ ನೀಡಿ ಗೆಲ್ಲಿಸಿ ಆಶೀರ್ವಾದ ಮತದಾರರಿಗೆ ಅಭಾರಿಯಾಗಿರುವೆ. – ಕನೀಜ್ ಫಾತೀಮಾ. ಶಾಸಕಿ, ಕಲಬುರಗಿ ಉತ್ತರ ಮತಕ್ಷೇತ್ರ.

ಇದು ನನ್ನ ಗೆಲುವಲ್ಲ ಕಾಂಗ್ರೆಸ್ ಪಕ್ಷದ ಗೆಲವು. ಜನರು ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ನಮ್ಮ ಪ್ರಣಾಳಿಕೆಯಂತೆ ಪಕ್ಷದ ನಾಯಕರೊಂದಿಗೆ ಚರ್ಚೆಸಿ ಕಲಬುರಗಿ ಅಭಿವೃದ್ಧಿಗೆ ಕೆಲಸ ಮಡುವೆ. – ರಾಧಕೃಷ್ಣ ದೊಡ್ಡಮನಿ, ಕಲಬುರಗಿ ನೂತನ ಸಂಸದರು.

ಕಾಂಗ್ರೆಸ್ ಗೆ ಜಿಲ್ಲಾ ಉಸ್ತುವಾರ ಸಚಿವ ಪ್ರಿಯಾಂಕ್ ಖರ್ಗೆ ಅವರ ಚಿತ್ತಾಪುರ ಕ್ಷೇತ್ರದಲ್ಲಿ 16000 ಸಾವಿರ ಲೀಡ್ ಸಿಕ್ಕರೆ, ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಸೇಡಂ ಕ್ಷೇತ್ರದಲ್ಲಿ 9000 ಸಾವಿರ ಲೀಡ್ ಪಡೆದರು. ಬಿಜೆಪಿ ಶಾಸಕ ಬಸವರಾಜ್ ಮತ್ತಿಮುಡ್ ಅವರ ಕಲಬುರಗಿ ಗ್ರಾಮೀಣದಲ್ಲಿ 2000 ಮತಗಳ ಕಾಂಗ್ರೆಸ್ ಗೆ ಲೀಡ್ ಕೊಟ್ಟರೆ, ಕಲಬುರಗಿ ಉತ್ತರ ಮತಕ್ಷೇತ್ರಲ್ಲೇ 51279 ಮತಗಳ ಲೀಡ್ ತಂದು ಗೆಲುವಿಗೆ ಪ್ರಮುಖ ಪಾತ್ರ ವಹಿಸಿದೆ.

Contact Your\'s Advertisement; 9902492681

ಹಲವು ವಿಫಲತೆ ಮತ್ತು ಟೀಕಾಪ್ರಹಾರಗಳ ನಡುವೆ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಕಡಿಮೆ ಸಮಯದಲ್ಲಿ ಬಿಜೆಪಿ ಮತ್ತು ಮೈತ್ರಿ ಪಕ್ಷದ ನಾಯಕರ ಸಹಕಾರದಿಂದ ಕಾಂಗ್ರೆಸ್ ಶಾಸಕ ಎಂ.ವೈ ಪಾಟೀಲ್ ಅವರ ಕ್ಷೇತ್ರದಲ್ಲಿ ಅಫಜಲಪುರನಲ್ಲಿ 20000 ಲೀಡ್ ಪಡೆದರು. ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಕಾಂಗ್ರೆಸ್ ಶಾಸಕ ಡಾ. ಅಜಯಸಿಂಗ್ ನ ಜೇವರ್ಗಿ ಕ್ಷೇತ್ರದಲ್ಲಿ 5000, ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಕಲಬುರಗಿ ದಕ್ಷಿಣ ಮತಕ್ಷೇತ್ರದ 9000 ಸಾವಿರ ಮತಗಳ ಲೀಡ್ ನೀಡಿದರೇ ಬಿಜೆಪಿ ಜೆಡಿಎಸ್ ಮೈತ್ರಿ ಕ್ಷೇತ್ರವಾಗಿರುವ ಗುರುಮಿಠಕಲ್ 17000 ಮತಗಳ ಬಿಜೆಪಿಗೆ ಸಿಕ್ಕಿ ಒಟ್ಟು 625116 ಮತಗಳು ಪಡೆದರು. ಉತ್ತರ ಮತಕ್ಷೇತ್ರದಲ್ಲಿ ಮುಸ್ಲಿಮ್ ಮತದಾರರ ಓಟು ಪಡೆಯವಲಿ ಬಿಜೆಪಿ ಯಡವಿದಕ್ಕೆ ಉಮೇಶ್ ಜಾಧವ್ ಗೆ ಹೊಡೆತ ಬಿದ್ದಿದೆ.

ಮೋಡಿ ಮಾಡಿದ ಕಲಬುರಗಿ ಉತ್ತರ ಕ್ಷೇತ್ರ: ಮಂಗಳವಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆರಂಭಿಕವಾಗಿ ಜಿದ್ದಾಜಿದ್ದಿ ಮತ ಏಣಿಕೆಯ ನಡುವೆ ಯಾರೂ ಗೆಲ್ತಾರೆ ಎಂಬುದು ಕುತೂಹಲ ಮೂಡಿಸುವ ವಾತಾವರಣ ಮತ ಏಣಿಕೆ ಕೇಂದ್ರದಲ್ಲಿ ಇತ್ತು. ಈ ನಡುವೆ ದಿವಂಗತ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಡಾ. ಖಮರ್ ಉಲ್ ಇಸ್ಲಾಂ ಭದ್ರಕೋಟೆಯಾಗಿರುವ ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಶಾಸಕಿ ಕನೀಜ್ ಫಾತೀಮಾ ಬಿಜೆಪಿಯ ರಾಜಕೀಯ ಲೆಕ್ಕಚಾರವೇ ಉಲ್ಟಾ ಮಾಡಿ ಈ ಲೋಕಸಭೆಯಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿದ್ದಾರೆ.

ಶಾಸಕಿ ಕನೀಜ್ ಫಾತೀಮಾ ಅವಿರತ ಶ್ರಮ: ಕಾಂಗ್ರೆಸ್ ಅಭ್ಯರ್ಥಿ ರಾಧಕೃಷ್ಣ ದೊಡ್ಡಮನಿ ಗೆಲುವಿಗೆ ಡೇ ಒಂದರಿಂದ ಅಂದರೆ ಎಪ್ರಿಲ್ 18 ರಿಂದ ಮೇ 7 ವರಗೆ ಶಾಸಕಿ ಕೆಲಸ ನಡೆಸಿದರು. ದಿನಕೊಂದು ಎಂಬಂತೆ 18 ಪಾದಯಾತ್ರೆಗಳು, 15 ಬಹಿರಂಗ ಪ್ರಚಾರ ಸಭೆಗಳು ಹಾಗೂ ಪ್ರತಿದಿನ ಕಾರ್ಯಕರ್ತರೊಂದಿಗೆ 3-4 ಸಭೆಯಂತೆ ಒಟ್ಟು 70ಕ್ಕೂ ಆಂತರಿಕ ಸಭೆ ನಡೆಸಿ ಕ್ಷೇತ್ರದ ರಾಜಕೀಯ ಸಂಚಲನದ ಮಾಹಿತಿ ಪಡೆಯುತ್ತಿದ್ದರು. ಇದರೊಂದಿಗೆ ಕ್ಷೇತ್ರದ ಎಲ್ಲಾ ಸಮುದಾಯ ಮತ್ತು ವರ್ಗದ ಜನರೊಂದಿಗೆ ಬಾಂಧವ್ಯ ಹೊಂದಿಗೆ ಮೋದಿ ಅವರ ಆಡಳಿತ ವೈಫಲ್ಯಗಳನ್ನು ಜನರ ಮುಂದೆ ಇಟ್ಟು, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಜನರಿಗೆ ತಿಳಿಸಿ ಮತಗಳು ಸೆಳೆಯುವಲ್ಲಿ ಸಾಧ್ಯವಾಯಿತು.

ಅಷ್ಟೆ ಅಲ್ಲದೇ ಪಕ್ಷದ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿರುವ ಅವರ ಪುತ್ರ ಫರಾಜ್ ಉಲ್ ಇಸ್ಲಾಂ ಎಲ್ಲಾ ಕೆಲಸಗಳು ಯಶಸ್ವಿಗೊಳಿಸಲು ತೆರೆಯ ಹಿಂದೆ ಶ್ರಮವಹಿಸುತ್ತಿದರು ಎಂದು ಪಕ್ಷದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here