ಜಿಲ್ಲಾ ಕಸಾಪ ದಿಂದ ಸಾಹಿತ್ಯ-ಸಂಸ್ಕøತಿ ಉತ್ಸವ ಆಯೋಜನೆ

0
91

ಕಲಬುರಗಿ: ಸಾಹಿತ್ಯ ಮತ್ತು ಸಂಸ್ಕøತಿ ಪರಂಪರೆ ಸ್ಪರ್ಷಿಸಿದರೆ ನಮ್ಮ ಅಂತ:ಕರಣ ಹಾಗೂ ಬಂದುತ್ವಗಳು ಅರಳಿ ನಿಲ್ಲಬೇಕಾಗಿದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಸಿ ಸೋಮಶೇಖರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕ್ರಿಯಾಶೀಲ ಗೆಳೆಯರ ಬಳಗದ ಜಂಟಿ ಆಶ್ರಯದಲ್ಲಿ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ ಸಾಹಿತ್ಯ ಸಂಸ್ಕøತಿ ಉತ್ಸವ-2024 ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅದರಿಂದ ಬದುಕು ಕಟ್ಟಿ ಮುನ್ನಡೆಸಬಹುದು. ಜಗಕ್ಕೆ ಜ್ಯೊತಿಯಾಗಿ ಬೆಳಗುವ ಸಾಹಿತ್ಯ ಇಂದು ಬೇಕಾಗಿದೆ. ಹಾಗೆ ಆ ಸಾಹಿತ್ಯದಿಮದ ಸಮಜ ಎಷ್ಟರ ಮಟ್ಟಿಗೆ ಪರಿವರ್ತನೆ ಆಗಿದೆ ಎಂಬುದನ್ನು ಕೂಡ ವಿಮರ್ಶಿಸಬೇಕು. ಭಾಷೆ, ಸಂಸ್ಕøತಿ ಉಳಿದರೆ ಮಾತ್ರ ನಾವೆಲ್ಲ ಉಳಿಯುತ್ತವೆ. ಇಂಥ ಕೆಲಸ ಕೇವಲ ಸರಕಾರ ಮಾಡಿದರೆ ಸಾಲದು ಜತೆಗೆ ಕನ್ನಡ ಸಂಘಟಕರಿಂದ ಸಾಧ್ಯ ಎಂದರು.

Contact Your\'s Advertisement; 9902492681

ಡಿಎಸ್‍ಎಸ್ ನ ರಾಜ್ಯ ಸಂಚಾಲಕ ಡಾ. ಡಿ ಜಿ ಸಾಗರ ಮಾತನಾಡಿ, ಸಾಹಿತ್ಯ ಒಗ್ಗೂಡಿಸುವ , ಮಾನವೀಯತೆ ಹೆಚ್ಚಿಸುವುದು ಹಾಗೂ ಸಮಾಜದಲ್ಲಿ ಸೌಹಾರ್ದ ಮೂಡಿಸುವಂಥ ಸಾಹಿತ್ಯ ರಚನೆ ಆಗಬೇಕು. ಜತೆಗೆ ವಾಸ್ತವ ಸಂಗತಿಗಳು ಕೃತಿಗಳಲ್ಲಿದೆ. ಗ್ರಾಮೀಣ ಜನರು ಕನ್ನಡದ ನಿಜವಾದ ವಾರಸುದಾರರು. ಅವರ ಬದುಕಿನ ಬವಣೆಗಳನ್ನು ಸಾಹಿತ್ಯದ ಮೂಲಕ ಪರಿಹರಿಸುವ ಕೆಲಸ ಸಾಹಿತಿಗಳು ಮಾಡಬೇಕು. ಭಾಷೆ ಶ್ರೀಮಂತಗೊಳಿಸಿ ನಾಡನ್ನು ಕಟ್ಟ ಬೇಕಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನಮ್ಮ ಕನ್ನಡ ಭಾಷೆಗೆ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ದೊರೆತಿರುವುದು ನಮ್ಮೆಲ್ಲರ ಹೆಮ್ಮೆಯೇ ಸರಿ. ಸಮಾಜ, ಸಮುದಾಯವು ಕೇವಲ ದುಡ್ಡು ಗಳಿಕೆಯ ಹಿಂದೆ ಬಿದ್ದಿರುವ ಸಂದಿಗ್ಧ ಸಂದರ್ಭದಲ್ಲಿ ಸಾಹಿತ್ಯದ ಚಿಂತನೆಗಳು ಹೆಚ್ಚಾಗಿ ನಡೆಯಬೇಕಾಗಿದೆ. ಪ್ರತಿಯೊಬ್ಬರೂ ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.

ಸಾರಂಗಮಠದ ಜುಗದ್ಗುರು ಶ್ರೀ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಅಣದೂರಿನ ವರಜ್ಯೋತಿ ಬಂತೇಜಿ ನೇತೃತ್ವ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷರ ಪರಿಚಯಾತ್ಮಕ ಕೃತಿ ಕನ್ನಡ ಸಾರಥಿ ಯನ್ನು ಸಹಕಾರಿ ಧುರೀಣ ನಾಗರೆಡ್ಡಿ ಪಾಟೀಲ ಕರದಾಳ ಜನಾರ್ಪಣೆಗೊಳಿಸಿದರು. ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಎಸ್ ಪಾಟೀಲ, ಸಾಹಿತ್ಯ ಪ್ರೇರಕಿ ಲಕ್ಷ್ಮೀ ದತ್ತಾತ್ರೆಯ ಪಾಟೀಲ ರೇವೂರ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಶರಣಬಸಪ್ಪ ಪಾಟೀಲ ಅಷ್ಟಗಿ ಮಾತನಾಡಿದರು.

ಕ್ರಿಯಾಶೀಲ ಗೆಳೆಯರ ಬಳಗದ ಕಲ್ಯಾಣಕುಮಾರ ಶೀಲವಂತ, ಧರ್ಮಣ್ಣ ಎಚ್ ಧನ್ನಿ, ಶಕುಂತಲಾ ಪಾಟೀಲ ಜಾವಳಿ, ಧರ್ಮರಾಜ ಜವಳಿ, ಶರಣರಾಜ್ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ಡಾ. ರೆಹಮಾನ್ ಪಟೇಲ, ಸಿದ್ಧಲಿಂಗ ಜಿ ಬಾಳಿ, ಜ್ಯೋತಿ ಕೋಟನೂರ, ಶಿಲ್ಪಾ ಜ್ಯೋಶಿ, ಮುಡುಬಿ ಗುಂಡೇರಾವ, ಜಗದೀಶ ಮರಫ್ಳಿ, ವಿದ್ಯಾಸಾಗರ ದೇಶಮುಖ, ಜಗನ್ನಾಥ ತರನಳ್ಳಿ, ರಾಜೇಂದ್ರ ಮಾಡಬೂಳ, ಡಾ. ಸದಾನಂದ ಪೆರ್ಲ, ಎಸ್ ಎಲ್ ಪಾಟೀಲ, ವಿನೋದ ಜೇನವೇರಿ, ಗಣೇಶ ಚಿನ್ನಾಕಾರ, ಬಾಬುರಾವ ಪಾಟೀಲ, ರೇಣುಕಾ ಎನ್., ಪ್ರಭುಲಿಂಗ ಮೂಲಗೆ, ಸಂತೋಷ ಕುಡಳ್ಳಿ, ನಾಗಪ್ಪ ಸಜ್ಜನ್, ಗುರುಬಸಪ್ಪ ಸಜ್ಜನಶೆಟ್ಟಿ, ಎಸ್ ಕೆ ಬಿರಾದಾರ, ಶಾಮಸುಂದರ ಕುಲಕರ್ಣಿ, ಡಾ. ಬಾಬುರಾವ ಶೇರಿಕಾರ, ಸೈಯದ್ ನಜಿರುದ್ದೀನ್, ನವಬ ಖಾನ್, ರಮೇಶ ಡಿ ಬಡಿಗೇರ, ವಿನಾಯಕ ಜೋಶಿ, ಎಂ ಎನ್ ಸುಗಂಧಿ, ಮಹೇಶ ಚಿಂತನಪಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here