ಕಲಬುರಗಿ: ಈಡಿ ಮಾನವ ಕುಲ ತಲೆ ತಗ್ಗಿಸಿವಂತಹ ಘಟನೆ ಕರ್ನಾಟಕದಲ್ಲಿ ನಡೆದಿದ್ದು, ಈ ಕೃತ್ಯ ಎಸಗಿದ್ದ ಕುಖ್ಯಾತ ನಟ ದರ್ಶನ್ ಕಾನೂನು ರೀತಿಯಲ್ಲಿ ಉಗ್ರ ಶಿಕ್ಷೆಯನ್ನು ವಿಧಿಸಬೇಕು, ರೇಣುಕಾಸ್ವಾಮಿಯ ಕೊಲೆ ನಿಜಾಕ್ಕೂ ಅಮಾನುಷ, ಒಬ್ಬ ಚಲನಚಿತ್ರ ನಟ ಸಮಾಜಕ್ಕೆ ಆದರ್ಶ ಪ್ರಯವಾಗಿ ನಡೆದುಕೊಳ್ಳುವುದು ಬಿಟ್ಟು ಪದೇ ಪದೇ ಅಹಂ ನಿಂದ ಈಗ ಕೊಲೆ ಮಾಡುವ ಮಟ್ಟಕ್ಕೆ ತಲುಪಿರುವುದೇ ಶೋಚನೀಯ, ಈ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ದರ್ಶನ್ ಪ್ರಚಾರ ತಿಳಿದಿವೆ ಸಂಗತಿ, ಅ ಕಾರಣಕ್ಕೆ ಈ ಪ್ರಕರಣದ ದಾರಿ ತಪ್ಪಿಸುವ ಕೆಲಸ ಆಗಬಾರದು, ಈ ಮನಸ್ಥಿತಿ ಮತ್ತು ಈ ವ್ಯಕ್ತಿಗೆ ಅತಿ ಕಠಿಣ ಶಿಕ್ಷೆ ವಿಧಿಸುವುದು ಅವಶ್ಯಕವಾಗಿದೆ. ಅದ್ದರಿಂದ ಈ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡುವುದೆಂದರೆ.
ಈ ಕಾನೂನು ರೀತಿಯಲ್ಲಿ ಒತ್ತಾಯ ಮಾಡುತ್ತೇನೆ, ಇಲ್ಲಾಂದ್ರೆ ರಾಜ್ಯ ವ್ಯಾಪ್ತಿ ನಮ್ಮ ಸಮಾಜದ ವತಿಯಿಂದ ಉಗ್ರ ಹೋರಾಟ ಮಾಡ ಬೇಕಾಗುತ್ತದೆ ಎಂದು ಬಿಜೆಪಿ ಕರ್ನಾಟಕ ವಕ್ತರರು ಹಾಗೂ ಅಖಿಲಭಾರತಿಯ ವಿರಶೈವ ಲಿಂಗಾಯತ ಮಹಾಸಭಾದ ಮಹಿಳಾ ಅಧ್ಯಕ್ಷರಾದ ಡಾ. ಸುಧಾ ಹಾಲಕಾಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.