ಕೃಷಿಯಲ್ಲಿ ಬೀಜೋಪಚಾರ ಅತ್ಯಗತ್ಯ

0
11

ಕಲಬುರಗಿ; ಜಿಲ್ಲೆಯಲ್ಲಿ ತೊಗರಿ, ಉದ್ದು, ಹೆಸರ ವ್ಯಾಪಕವಾಗಿ ಬೆಳೆಯುತ್ತಿದ್ದು, ಕಪ್ಪು ಮಣ್ಣು ಈ ಬೆಳೆಗೆ ಸೂಕ್ತವಾಗಿದೆ. ಈ ವರ್ಷ ಮುಂಗಾರು ಮಳೆಯು ಸಕಾಲಕ್ಕೆ ಉತ್ತರ ಕರ್ನಾಟಕ ಭಾಗಕ್ಕೆ ಆಗಮನವಾಗಿದ್ದು. ಕೆಲವೊಂದು ತಾಲೂಕುಗಳಲ್ಲಿ ಹೆಸರು, ಉದ್ದು ಬಿತ್ತನೆ ಪೂರ್ಣಗೊಂಡಿದ್ದು, ಜಿಲ್ಲೆಯ ಮುಖ್ಯ ಬೆಳೆಯಾದ ತೊಗರಿ ಪ್ರಸ್ತುತ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ.

ಮುಂಗಾರು ಬಿತ್ತನೆಯೂ ಭೂಮಿಯ ತೇವಾಂಶ, ಮಣ್ಣಿನ ಗುಣಧರ್ಮ, ಬೀಜದ ಮೊಳಕೆ ಸಾಮಥ್ರ್ಯ, ರೋಗರಹಿತ ಮೊಳಕೆಯೊಡಿವಿಕೆ, ಬೋಜೋಪಚಾರದ ವಿಧಾನ, ಹವಾಮಾನ ಸನ್ನಿವೇಶ ಹಾಗೂ ಮಣ್ಣಿನ ಫಲವತ್ತತೆ ಇವುಗಳೆಲ್ಲವು ಉತ್ತಮ ಬೆಳೆ ಇಳುವರಿಗೆಗೆ ಸೂಚಕ ಅಂಶಗಳು. ಸೋಯಾಬಿನ್ ಮತ್ತು ಅರಶೀಣ ಬೆಳೆಗೆ ಉತ್ತಮ ಭೂಮಿಯ ತೇವಾಂಶ ಅಗತ್ಯ. ಬೀಜಗಳಿಂದ ಹಾಗೂ ಮಣ್ಣಿನಿಂದ ಬರುವ ರೋಗ ಹತೋಟಿಗೆ ಜೈವಿಕ ಮತ್ತು ಶೀಲೀಂದ್ರನಾಶಕ ಬೋಜೋಪಚಾರ ಅತ್ಯಗತ್ಯ.

Contact Your\'s Advertisement; 9902492681

ಸಾರಜನಿಕ ಸ್ಥಿರಿಕರಣಕ್ಕೆ ರೈಜೋಬಿಯಂ, ಮಣ್ಣಿನಲ್ಲಿರುವ ರಂಜಕ ಕರಗಿಸಲು ಪಿಎಸ್‍ಬಿ, ಬೀಜದಿಂದ ಬರುವ ರೋಗ ಹತೋಟಿಗೆ ಟ್ರೈಕೋಡ್ರಮಾ 10 ಗ್ರಾ. ಪ್ರತಿ ಕೆಜಿ ಬೀಜಕ್ಕೆ ಬೋಜೋಪಚಾರ ಮಾಡುವುದು ಅಗತ್ಯ. ತೊಗರಿ ಪೈಟಾಪತ್ತರ ಸಿಡಿ ರೋಗ ಹತೋಟಿಗೆ ಮೇಟಲಾಕ್ಸಿಲ್ 5 ಗ್ರಾ. ಪ್ರತಿ ಕೆಜಿ ಬೀಜಕ್ಕೆ ಬೀಜೋಪಚಾರ, ಹೆಸರು ಮತ್ತು ಸೂರ್ಯಕಾಂತಿಗೆ 5 ಮೀ.ಲಿ ಗೌಚೋ ಇಮಿಡಾ ಪ್ರ. ಒಂದು ಕೆಜಿ ಬೀಜಕ್ಕೆ ಬೀಜೋಪಚಾರ ಮಾಡುವುದರಿಂದ ವೈರಸ್ಸ್ ನಂಜಾಣು ರೋಗವನ್ನು ಹತೋಟಿ ಮಾಡಬಹುದು.

ಕೃಷಿ ವಿಜ್ಞನ ಕೇಂದ್ರ, ಈ ನಿಟ್ಟಿನಲ್ಲಿ ರೈತರಿಗೆ ಬೀಜೋಪಚಾರ ಮಾಹಿತಿ ನೀಡುತ್ತಿದ್ದು, ತಜ್ಞರ ಶಿಫಾರಸ್ಸಿನಂತೆ ಬೆಳೆ, ಮಣ್ಣು ಮತ್ತು ಹವಾಮಾನಕ್ಕೆ ತಕ್ಕಂತೆ ಬೀಜೋಪಚಾರ ಅತೀ ಮುಖ್ಯ ಎಂದು ಕೆವಿಕೆಯ ಸಸ್ಯರೋಗದ ವಿಜ್ಞಾನಿಗಳಾದ ಡಾ. ಜಹೀರ್ ಅಹೆಮದ್ ರವರು ತಿಳಿಸಿದರು.

ತೊಗರಿ, ಸೋಯಾಬಿನ್, ಉದ್ದು, ಹೆಸರು, ಹತ್ತಿ ಜಿಲ್ಲೆಯ ಮುಖ್ಯ ಬೆಳೆಗಳಾಗಿದ್ದು ರೈತರು ಕೆವಿಕೆ ತಜ್ಞರಿಂದ ಸೂಕ್ತ ಮಾಹಿತಿ ಪಡೆದು ಬೆಳೆ ನಿರ್ವಹಣೆ ಮಾಡಬೆಕೆಂದು ಕೆವಿಕೆಯ ಮುಖ್ಯಸ್ಥರಾದ ಡಾ. ರಾಜು ತೆಗ್ಗಳ್ಳಿ ತಿಳಿಸಿದರು.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಈವರೆಗೆ 178 ಮೀ.ಲಿ ಮಳೆಯಾಗಿದೆ. ಜಿಲ್ಲೆಯ ಕೃಷಿ ಸಖಿಯರಿಗೆ ಜೈವಿಕ ಶೀಲೀಂದ್ರ ನಾಶಕದ ತೊಗರಿ ಬೀಜಕ್ಕೆ ಬೀಜೋಪಚಾರ, ಪ್ರಾತ್ಯಕ್ಷಿಕೆ ನಡೆಸಲಾಯಿತು.

ಜಿಲ್ಲಾ ಪಂಚಾಯತ್, ಕಲಬುರಗಿ ಮತ್ತು “ಸಂಜೀವಿನಿ”-ಕರ್ನಾಟಕ ರಾಜ್ಯ ಗ್ರಾಮೀಣ ಜಿವನೋಪಾಯ ಸಂವರ್ಧನ ಸಂಸ್ಥೆಯ ಕ್ಷೇತ್ರ ಸಹಾಯಕರಾದ ಕು. ಕನ್ಯಾಕುಮಾರಿ, ಜೈತನ್ಯ, ವಿಜಯಾನಂದ, ಕೆವಿಕೆಯ ಕ್ಷೇತ್ರ ಸಹಾಯಕರಾದ ನಾಗಣ್ಣಾ ಹರಸೂರ ಹಾಗೂ 65 ಕೃಷಿ ಸಖಿಯರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here