ದಲಿತ ಚಳುವಳಿಗೆ: ಹಾಸನದಲ್ಲಿ 50ನೇ ವರ್ಷ ರಾಜ್ಯಮಟ್ಟದ ಸಮಾವೇಶ ಜೂನ್ 29ರಂದು

0
27

ಕೊಪ್ಪಳ : ದಲಿತ ಚಳುವಳಿಯ ರೂವಾರಿ ಪ್ರೊ.ಬಿ,ಕೃಷ್ಣಪ್ಪ ಅವರ ಜನುಮ ದಿನ ಹಾಗೂ ದಲಿತ ಚಳುವಳಿ ಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ ವನ್ನು ಸ್ವಾಭಿಮಾನಿ ದಲಿತ ಸಂಘರ್ಷ ಸಮಿತಿ ವತಿಯಿಂದ ಹಾಸನದ ಹರ್ಷ ಮಹಲ್ ಹೋಟೆಲ್ ರಸ್ತೆಯಲ್ಲಿನ ಡಾ.ಬಿ,ಆರ್ ಅಂಬೇಡ್ಕರ್ ಅವರ ಭವನದಲ್ಲಿ ಜೂನ್ 29 ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಭಿಮಾನಿ ದಲಿತ ಸಂಘರ್ಷ ಸಮಿತಿ ಕೊಪ್ಪಳ ಜಿಲ್ಲಾ ಸಂಚಾಲಕ ಪರಶುರಾಮ ಕೆರೆಹಳ್ಳಿ ಅವರು ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದಲಿತ ಸಮುದಾಯದ ಏಳಿಗೆ, ಸರ್ಕಾರದಿಂದ ಸಿಗಬೇಕಾದ ಸೌಲಭ್ಯ, ಅಸ್ಪೃಶ್ಯತೆ ಆಚರಣೆ ನಿಷೇಧ, ಶಿಕ್ಷಣಕ್ಕೆ ಆದ್ಯತೆ, ಸಮುದಾಯದ ಯುವಕರು ಸಾಮಾಜಿಕ ಚಿಂತನೆ ಇತರೆ ವಿಷಯಗಳು ಕುರಿತು ಚರ್ಚೆ ನಡೆಸಲಿದ್ದು ಈ ಸಮಾವೇಶದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಮತ್ತು ಸಹಕಾರಿ ಸಚಿವರಾದ ಕೆ. ಎನ್. ರಾಜಣ್ಣ ರವರು ಉದ್ಘಾಟಿಸುವರು.

Contact Your\'s Advertisement; 9902492681

ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಎಸ್. ಸಿ. ಮಹಾದೇವಪ್ಪ ಅವರು ಡಾ.ಬಿ,ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವರು.ದಲಿತ ಚಳುವಳಿ ನೇತಾರ ಪ್ರೊ.ಬಿ.ಕೃಷ್ಣಪ್ಪ ರವರ ಭಾವಚಿತ್ರಕ್ಕೆ ಹಾಸನ ಲೋಕಸಭಾ ಸದಸ್ಯ ಶ್ರೇಯಸ್ ಎಂ.ಪಟೇಲ್ ರವರು ಪುಷ್ಪ ನಮನ ಸಲ್ಲಿಸುವರು. ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಅಪ್ಪಗೆರೆ ಸೋಮಶೇಖರ್ ಅವರು ಮುಖ್ಯ ಭಾಷಣ ಮಾಡುವರು ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಸಂಚಾಲಕ ಎಂ.ಸೋಮಶೇಖರ್ ಅವರು ವಹಿಸಲಿದ್ದಾರೆ ಎಂದು ಹೇಳಿದ್ದರು.

ಈ ಸಂದರ್ಭದಲ್ಲಿ ವಿಭಾಗೀಯ ಸಂಚಾಲಕ ಹಂಪೆಶ್ ಅರಿಗೋಲ್ ಮಾತನಾಡಿ, ಈ ಒಂದು ಅತ್ಯಂತ ಅರ್ಥಪೂರ್ಣ ಈ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಪಾಲ್ಗೊಳ್ಳುವರು ಹಾಗೂ ದಲಿತ,ಹಿಂದುಳಿದ ಅಲ್ಪಸಂಖ್ಯಾತ, ಮೇಲ್ವರ್ಗದ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹನುಮಂತಪ್ಪ ನಾಯಕ್ ವಡ್ರಟ್ಟಿ, ಯಮನೂರು ನಾಯಕ್ ಹುಲಿಹೈದರ್, ನೂರ್ ಮೊಹಮ್ಮದ್ ಸಂತ್ರಾಸ್, ಅಂದಪ್ಪ ಹಡಪದ, ಯಮನೂರ ಮುದ್ದಬಳ್ಳಿ, ಶಿವಮೂರ್ತಿ ಲಂಕಿ, ಮಂಜು ಲಿಂಗದಹಳ್ಳಿ, ಬುಡೇನ್ ಸಾಬ್ ಸಂತ್ರಾಸ್, ಇನ್ನೂ ಅನೇಕ ದಲಿತ, ಹಿಂದುಳಿದ,ಅಲ್ಪಸಂಖ್ಯಾತ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here