ಕೆರೆ ತುಂಬಿಸುವ ಕಾಮಗಾರಿ ಚುರುಕುಗೊಳಿಸಿ: ಶಾಸಕ ಬಿ.ಆರ್.ಪಾಟೀಲ

0
18

ಕಲಬುರಗಿ: ಜಿಲ್ಲೆಯ ಜೀವನಾಡಿ ಭೀಮಾ ನದಿಯ ಉಪ ನದಿಯಾಗಿರುವ ಬೋರಿ ನದಿಯಿಂದ 1 ಟಿ.ಎಂ.ಸಿ ನೀರೆತ್ತಿ ಅಫಜಲಪೂರ ತಾಲೂಕಿನ 10, ಆಳಂದ ತಾಲೂಕಿನ 3 ಕೆರೆ ಹಾಗೂ ಅಮರ್ಜಾ ಜಲಾಶಯ ಭರ್ತಿ ಮಾಡುವ ಕಾಮಗಾರಿ ತೀವ್ರಗೊಳಿಸಬೇಕು ಎಂದು ಮುಖ್ಯಮಂತ್ರಿಯವರ ನೀತಿ ಮತ್ತು ಕಾರ್ಯಕ್ರಮ ಸಲಹೆಗಾರರಾಗಿರುವ ಆಳಂದ‌ ಶಾಸಕ ಬಿ.ಆರ್.ಪಾಟೀಲ ಅವರು ನೀರಾವರಿ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಕಲಬುರಗಿ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಭೀಮಾ ಮತ್ತು ಅಮರ್ಜಾ ನೀರಾವರಿ ವಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಇತ್ತೀಚಿನ‌ ವರ್ಷದಲ್ಲಿ ಮಳೆ‌ ಕೊರತೆಯಿಂದ ಅಂತರ್ಜಲ ಬತ್ತಿ ಕುಡಿಯುವ‌ ನೀರಿಗೆ ತೊಂದರೆಯಾಗುತ್ತಿದೆ. 318 ಕೋಟಿ ರೂ. ಮೊತ್ತದ ಈ ಯೋಜನೆ ಸಾಕಾರಗೊಂಡಲ್ಲಿ ಅಂತರ್ಜಲ ಹೆಚ್ಚಲಿದ್ದು, ತಕ್ಕಮಟ್ಟಿಗೆ ಜನ-ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಹೀಗಾಗಿ ಕಾಮಗಾರಿಗೆ ಚುರುಕು ನೀಡಿ ಬೇಗ ಮುಗಿಸಬೇಕೆಂದರು.

Contact Your\'s Advertisement; 9902492681

ಅಫಜಲಪೂರ ತಾಲೂಕಿನ ಅರ್ಜುಣಗಿ ಹತ್ತಿರ ರೈಲ್ವೆ ಕ್ರಾಸಿಂಗ್ ಕಾಮಗಾರಿ ಸಹ ಶೀಘ್ರ ಪೂರ್ಣಗೊಳಿಸುವಂತೆ ರೈಲ್ವೆ ಅಧಿಕಾರಿಗಳಿಗೂ ಬಿ.ಆರ್.ಪಾಟೀಲ ಸೂಚನೆ ನೀಡಿದ ಅವರು, ಇನ್ನು ತಾಲೂಕಿನ ವಿವಿಧ ಕಾಮಗಾರಿಗಳಿಗೆ ಭೂಸ್ವಾಧೀನ ಕಾರ್ಯ ವಿಳಂಬವಾಗದಂತೆ ನೋಡಿಕೊಳ್ಳಬೇಕೆಂದು ಸಬೆಯಲ್ಲಿದ್ದ ಎಸ್.ಎಲ್.ಎ.ಓ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಕೆ.ಎನ್.ಎನ್.ಎಲ್ ಮುಖ್ಯ ಅಭಿಯಂತ ವಿಜಯದಶರಥ ಸಂಘನ್, ಅಧೀಕ್ಷಕ ಇಂಜಿನೀಯರ್ ಸೂರ್ಯಕಾಂತ‌ ಮಾಲೆ, ಕಾರ್ಯನಿರ್ವಾಹಕ ಇಂಜಿನೀಯರ್ ಸಂತೋಷ ಸಜ್ಜನ್ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here