ಹಾಸ್ಟೆಲ್ ಮೇಲ್ಛಾವಣಿ ಕುಸಿದುಬಿದ್ದ ನಾಲ್ವರಿಗೆ ಗಾಯ ಪ್ರಕರಣ: ಚಿಕಿತ್ಸೆ ಪಡೆದ ಮಕ್ಕಳು ಆರೋಗ್ಯವಾಗಿದ್ದಾರೆ | ಪ್ರಭು ದೊರೆ

0
77

ಕಲಬುರಗಿ: ಅಫಜಲಪೂರ ಪಟ್ಟಣದಲ್ಲಿರುವ ಬಿ.ಸಿ.ಎಂ. ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಕಳೆದ‌ ಸೋಮವಾರ ಮಕ್ಕಳ ಮೇಲೆ ಕಟ್ಟಡದ ಮೇಲ್ಛಾವಣಿಯ ಪದರು ಕುಸಿದ್ದು ಬಿದ್ದ ಗಾಯಗೊಂಡಿದ್ದ 4 ಜನ ನಿಲಯಾರ್ಥಿಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿದ್ದು, ಸದ್ಯ ಆರೋಗ್ಯವಂತರಾಗಿದ್ದಾರೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಭು ದೊರೆ ತಿಳಿಸಿದ್ದಾರೆ.

50 ಸಂಖ್ಯೆ ಬಲ ಹೊಂದಿರುವ ಅಫಜಲಪೂರ ಟೌನ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ‌ ಮೇಲ್ಛಾವಣಿ ಪದರು ಕುಸಿದ್ದ ಬಿದ್ದ ಕಾರಣ ದುರಸ್ತಿ ಕಾರ್ಯ ಕೈಗೊಂಡಿದ್ದು, ಅಲ್ಲಿಯವರಗೆ ಮಕ್ಕಳನ್ನು ತಾತ್ಕಲಿಕವಾಗಿ ಅದೇ ಆವರಣದಲ್ಲಿರುವ ಪಕ್ಕದ ಕಟ್ಟಡಕ್ಕೆ ಸ್ಥಳಾಂತರಿಸಿದೆ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಕಲಬುರಗಿಯ ಅಫಜಲಪುರ ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯದ ತಾರಸಿಯ ಪದರು ಕುಸಿದು ನಾಲ್ವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.

ಇದನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಕೂಡಲೇ ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ಅದರಂತೆ ತ್ವರಿತವಾಗಿ ಸ್ಪಂದಿಸಿದ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಗಾಯಗೊಂಡಿದ್ದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ನಾಲ್ವರು ಆರೋಗ್ಯವಾಗಿರುತ್ತಾರೆ. ಸದರಿ ಕಟ್ಟಡದಲ್ಲಿ ಹೆಚ್ಚು ವಿದ್ಯಾರ್ಥಿಗಳು ವಾಸ್ತವ್ಯ ಇರುವುದರಿಂದ ಕೆಲವು ವಿದ್ಯಾರ್ಥಿಗಳಿಗೆ ಪಕ್ಕದಲ್ಲಿರುವ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here