ಕೊಪ್ಪಳ: ಇತ್ತೀಚೆಗೆ ತಾಲೂಕಿನ ಹುಲಿಗಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವಕ ಮಹ್ಮದ್ ರಫಿ ನಿವಾಸಕ್ಕೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ವಿರೇಶ ಮಹಾಂತಯ್ಯನಮಠ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಮೃತಪಟ್ಟ ಯುವಕನ ತಾಯಿಗೆ ವೈಯಕ್ತಿಕವಾಗಿ 10 ಸಾವಿರ ರೂಪಾಯಿ ಚೆಕ್ ನೀಡಿ ಮಾತನಾಡಿದ ಅವರು, ಘಟನೆ ಕಾರಣರಾದ ಜೆಸ್ಕಾಂ ಕೂಡಲೇ ಮೃತಪಟ್ಟ ಯುವಕನ ಕುಟುಂಬಕ್ಕೆ ಪರಿಹಾರ ನೀಡಬೇಕು, ಪದೇ ಪದೇ ಇಂತಹ ಘಟನೆಗಳು ಜಿಲ್ಲೆಯಲ್ಲಿ ಪದೇ ಪದೇ ಜರುಗುತ್ತಿದ್ದು ಜೆಸ್ಕಾಂ ಕೂಡಲೇ ಎಚ್ಚೆತ್ತುಕೊಂಡು ಇಂತಹ ಘಟನೆಗಳು ಆಗದಂತೆ ನೋಡಿಕೊಳ್ಳಬೇಕು ಎಂದರು.
ಈ ಘಟನೆಯ ಕುರಿತು ಜೆಡಿಎಸ್ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಬಿ.ಎಂ.ಫಾರೂಕ ಅವರಿಗೆ ತಿಳಿಸಲಾಗಿದೆ ಅವರು ಸರಕಾರದ ಮೇಲೆ ಒತ್ತಡ ತಂದು ಮೃತಪಟ್ಟ ಯುವಕನ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಹಾಗೂ ಸರಕಾರಿ ಉದ್ಯೋಗ ನೀಡಲು ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ್ ಸದಸ್ಯರು ಹಾಗೂ ಮುಖಂಡರಾದ ಫಾಲಾಕ್ಷಪ್ಪ ಗುಂಗಾಡಿ, ಗ್ರಾಮ ಮುಖಂಡರಾದ ಪ್ರಭುರಾಜ್ ಪಾಟೀಲ್, ಜಂಭಣ್ಣ ಜಂತಕಲ್, ಚಾಂದಪಾಶ, ಜೆಡಿಎಸ್ ಪಕ್ಷದ ಮುಖಂಡ ಮಹಮದ್ ಶಫಿ, ಶ್ರೀಧರ್, ಫಯಾಜ್, ಶಿವಮೂರ್ತಯ್ಯ ಕಲ್ಮಠ, ಹನುಮಂತಪ್ಪ ಹ್ಯಾಟಿ, ದೇವರಾಜ್ ಪ್ರಜಾರ್,ಮಹೆಬೂಬ್ ಕೆ, ವೆಂಕಟೇಶ ನಾಯಕ, ಮುಸ್ತಾಫ, ಡಿ.ಎನ್.ದೊಡ್ಡಮನಿ, ರಾಚಯ್ಯ, ಹುಲಿಗಿಯ ಪಂಚ ಕಮೀಟಿ ಸದಸ್ಯರು ಹಾಗೂ ನವಜವಾನ ಕಮೀಟಿ ಸದಸ್ಯರು ಉಪಸ್ಥಿತರಿದ್ದರು.