ಕಲಬುರಗಿ ಯುನೈಟೆಡ್ ಆಸ್ಪತ್ರೆಯ ವಿರುದ್ಧ ಪ್ರತಿಭಟನೆ; ಚಿಕಿತ್ಸೆಯಲ್ಲಿ ಲೋಪ ಆರೋಪ

0
298

ಕಲಬುರಗಿ: ವೈದ್ಯರ ನಿರ್ಲಕ್ಷ್ಯ ಮತ್ತು ಚಿಕಿತ್ಸೆಯಲ್ಲಿ ಏರುಪೇರು ಸಂಭವಿಸಿ ವಕ್ತಿ ಮೃತಪಟ್ಟಿದ್ದಾರೆಂದು ಆರೋಪಿಸಿ ಧೀಡಿರನೇ ಇಲ್ಲಿನ ಯುನೈಟೆಡ್ ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಸೋಮವಾರ ನಡೆದಿದೆ.

ಜೇವರ್ಗಿ ತಾಲೂಕು ಜೇನಾಪುರ ಗ್ರಾಮದ ನಾಗಣ್ಣ (54) ಮೃತಪಟ್ಟ ವ್ಯಕ್ತಿ. ನಾಗಣ್ಣ ಮನೆಯಲ್ಲಿ ಆಯತಪ್ಪಿ ಬಿದ್ದಿದ್ದ ವೇಳೆ ಹೊಟ್ಟೆಯ ಭಾಗಕ್ಕೆ ಮಂಚ ಬಡಿದಿತ್ತು. ಜುಲೈ 3 ರಂದು ಚಿಕಿತ್ಸೆಗೆಂದು ತನ್ನ ಮಗನೊಂದಿಗೆ ಕಲಬುರಗಿಯಲ್ಲಿರುವ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿದರು.

Contact Your\'s Advertisement; 9902492681

ತಪಾಸಣೆ ನಡೆಸಿದ್ದ ಆಸ್ಪತ್ರೆಯ ವೈದ್ಯರು, ಹೊಟ್ಟೆಗೆ ಪೆಟ್ಟು ಬಡಿದಿರುವುದರಿಂದ ಹೊಟ್ಟೆಯೊಳಗೆ ರಕ್ತ ಹೆಪ್ಪುಗಟ್ಟಿದೆ. ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದರು. ಶಸ್ತ್ರಚಿಕಿತ್ಸೆ ಬಳಿಕ ವ್ಯಕ್ತಿಯು ದಿಢೀರನೆ ಕೋಮಾಕ್ಕೆ ಜಾರಿದ್ದಾರೆ.  10 -15 ದಿನಗಳು ಕೋಮಾದಲ್ಲಿದ್ದ ವ್ಯಕ್ತಿ ಇಂದು ಸಾವನ್ನಪ್ಪಿರುವುದ್ದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಹೋಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ ವ್ಯಕ್ತಿಯನ್ನು ಕೋಮಾಕ್ಕೆ ಜಾರುವಂತೆ ಚಿಕಿತ್ಸೆನೀಡಿ ನಿರ್ಲಕ್ಷ್ಯವಹಿಸಿದ ವೈದ್ಯರು ಮತ್ತು ಯುನೈಟೆಡ್ ಆಸ್ಪತ್ರೆಯ ವಿರುದ್ಧ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಈ ಘಟನೆ ಸಾಮಾನ್ಯವಲ್ಲ ಜಿಲ್ಲಾ ಆರೋಗ್ಯ ಇಲಾಖೆ ಖಾಸಗಿ ಆಸ್ಪತ್ರೆಗಳ ರೋಗಿಗಳ ಜೀವಕ್ಕೆ ರಕ್ಷಣೆ ಒದಗಿಸುವ ನೀಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನೆ ನೀರತ ಕುಟುಂಬಸ್ಥರು ರಸ್ತೆ ತಡೆದು ಜಿಲ್ಲಾ ಆರೋಗ್ಯ ಅಧಿಕಾರಿಗೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆ ಎದುರು ನೂರಾರು ಜನರು ಜಮಾಗೊಂಡು ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಹಾವಳಿಯ ವಿರುದ್ಧ ಅಸಮಧಾನ ಹೋರಹಾಕಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here